ಸುದ್ದಿಮೂಲ ವಾರ್ತೆ ಕಾರಟಗಿ, ಡಿ.28:
ಈಗಾಗಲೇ ಅಪಾಯದ ಅಂಚಿನಲ್ಲಿರುವ ತುಂಗಭದ್ರಾಾ ನದಿ ಉಳಿವಿಗಾಗಿ ಹೋರಾಟದಿದ್ದರೆ ಭವಿಷ್ಯದಲ್ಲಿ ಕಣ್ಮರೆಯಗುವುದು ನಿಶ್ಚಿಿತ ಎಂದು ನವದೆಹಲಿಯ ರಾಷ್ಟ್ರೀಯ ಸ್ವಾಾಭಿಮಾನ ಆಂದೋಲನದ ಸಂಯೋಜಕಿ ರಾಜಶ್ರೀ ಚೌಧರಿ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಿಕ್ ಸ್ಕೂಲ್ ಆವರಣದಲ್ಲಿ ನಿರ್ಮಲ ತುಂಗಭದ್ರಾಾ ಅಭಿಯಾನ ಸಮಿತಿ ಹಾಗೂ ಸ್ಥಳೀಯ ಜಾಗೃತ ಯುವಕ ಸಂಘ ಸೇರಿದಂತೆ ನಾನಾ ಸಂಘ-ಸಂಸ್ಥೆೆಗಳ ಸಹಯೋಗದಲ್ಲಿ ಭಾನುವಾರ ನಡೆದ 3ನೇ ಹಂತದ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆೆಯ ಬಹಿರಂಗ ಸಭೆ ಉದ್ಘಾಾಟಿಸಿ ಮಾತನಾಡಿದರು.
ತ್ರಿಿವಳಿ ರಾಜ್ಯಗಳ ಕೋಟ್ಯಾಾಂತರ ರೈತರ, ಜನರ ಬಾಳಿನ ಜೀವನಾಡಿಯಾಗಿರುವ ತುಂಗಭದ್ರೆೆ, ಭವಿಷ್ಯದಲ್ಲಿ ಕಾಣೆಯಾಗುವ ಅಪಾಯ ಇದೆ. ಈ ಪವಿತ್ರ ನದಿಯ ಜತನ ಮಾಡುವುದು ನಮ್ಮೆೆಲ್ಲರ ಕರ್ತವ್ಯ. ಅವಳ ಉಳಿವಿಗಾಗಿ ನಡೆಯುತ್ತಿಿರುವ ನಿರ್ಮಲ ತುಂಗಭದ್ರಾಾ ಅಭಿಯಾನಕ್ಕೆೆ ಕೈಜೋಡಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾಾರಿಯೂ ಆಗಿದೆ. ತುಂಗಭದ್ರೆೆಯು ಅತ್ಯಂತ ಮಲಿನಗೊಂಡಿದೆ. ಇದರ ನೀರು ಕುಡಿಯಲು ಕೂಡಾ ಯೋಗ್ಯ ಇಲ್ಲ ಎನ್ನುವ ವರದಿಗಳು ಬಂದಿರುವುದು ಆತಂಕ ತಂದಿದೆ ಎಂದರು.ನಾವು ಬರೀ ಗಂಗಾ, ಯಮುನಾ ನದಿಗಳ ಮಾಲಿನ್ಯದ ಬಗ್ಗೆೆ ಕೇಳಿ ತಿಳಿದಿದ್ದೆೆವು. ಆದರೆ, ರಕ್ಷಿಸುವ ಕೆಲಸಕ್ಕೆೆ ಮುಂದಾಗಬೇಕು ಎಂದರು.
ಅಭಿಯಾನದ ಪ್ರಧಾನ ಸಂಚಾಲಕ ಮಹಿಮಾ ಪಟೇಲ್, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಪ್ರಚಾರ ರಾಯಭಾರಿ ಲಲಿತಾರಾಣಿ ಶ್ರೀರಂಗದೇವರಾಯುಲು, ಆಂದೋಲನದ ಸಂಘಟನಾ ಮಂತ್ರಿಿ ಗಿರಿರಾಜ್ ಗುಪ್ತಾಾ, ಕರ್ನಾಟಕ ಸಂಚಾಲಕ ಲೋಕೇಶ್ವರಪ್ಪ, ಆಂದೋಲನದ ದಕ್ಷಿಣ ಭಾರತ ಸಂಚಾಲಕ ಸಿ.ಪಿ.ಮಾಧವನ್ ಮಾತನಾಡಿದರು.
ಜಾಗೃತ ಯುವಕ ಸಂಘದ ಗೌರವಾಧ್ಯಕ್ಷ ಶರಣಪ್ಪ ಕೋಟ್ಯಾಾಳ ಪ್ರಾಾಸ್ತಾಾವಿಕ ನುಡಿಗಳನ್ನಾಾಡಿದರು. ಶರಣಪ್ಪ ಕಾಯಿಗಡ್ಡಿಿ ಕಾರ್ಯಕ್ರಮ ನಿರೂಪಿಸಿ, ರಾಮು ನಾಯಕ ಸ್ವಾಾಗತಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಶಾಲಾ ವಿದ್ಯಾಾರ್ಥಿಗಳಿಗೆ ಪುಣ್ಯಕೋಟಿ ಟ್ರಸ್ಟ್ ನವರು ಏರ್ಡಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ವಿಜೇತ ಮಕ್ಕಳಿಗೆ ಸನ್ಮಾಾನಿಸಿ ಗೌರವಿಸಲಾಯಿತು.
ಬೃಹತ್ ಪಾದಯಾತ್ರೆೆಗೆ ನಾಗರಾಜ ತಂಗಡಗಿ ಚಾಲನೆ : ಕಾರ್ಯಕ್ರಮದ ನಂತರ ಆರಂಭವಾದ ಭವ್ಯ ಪಾದಯಾತ್ರೆೆಗೆ ಕಾಂಗ್ರೆೆಸ್ ಮುಖಂಡ ನಾಗರಾಜ್ ತಂಗಡಗಿ ಚಾಲನೆ ನೀಡಿದರು.
ಪಾದಯಾತ್ರೆೆಯು ನವಲಿ ರಸ್ತೆೆ ಮೂಲಕ ಕನಕದಾಸ ವೃತ್ತ ತಲುಪಿ, ಹಳೇ ಬಸ್ ನಿಲ್ದಾಾಣದ ಮೂಲಕ ಎಪಿಎಂಸಿ ತಲುಪಿ ಸಮಾರೋಪಗೊಂಡಿತು. ಈ ವೇಳೆ ನೂರಾರು ಕಾಲೇಜು ವಿದ್ಯಾಾರ್ಥಿನಿಯರು ಪಾದ ಯಾತ್ರೆೆಯಲ್ಲಿ ಹೆಜ್ಜೆೆ ಹಾಕಿದ್ದು, ವಿಶೇಷವಾಗಿತ್ತು.
ಶ್ರೀವೀರಭದ್ರ ಶರಣರು ತಲೇಖಾನ್ ಮಠ, ಮರುಳಸಿದ್ದಯ್ಯಸ್ವಾಾಮಿ ಹಿರೇಮಠ, ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ್, ಅಭಿಯಾನದ ಪ್ರಮುಖರಾದ ಪ್ರಭು ಉಪನಾಳ, ಮಹಮ್ಮದ ರಫಿ ಶ್ರೀರಾಮನಗರ, ಬಸವರಾಜ ಪಗಡದಿನ್ನಿಿ, ಜಿ.ಪಂ ಮಾಜಿ ಸದಸ್ಯ ಅಮರೇಶ ಕುಳಗಿ, ಯಲ್ಲಪ್ಪ ಕಟ್ಟಿಿಮನಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮರಿಯಪ್ಪ ಸಾಲೋಣಿ, ನಾರಾಯಣ ಈಡಿಗೇರ್, ವೀರನಗೌಡ ಮಾ.ಪಾ, ಪುಣ್ಯಕೋಟಿ ಟ್ರಸ್ಟ್ನ ಮಂಜುನಾಥ್ ಹೊನಗುಡಿ, ಲಿಂಗಯ್ಯಸ್ವಾಾಮಿ ಶೀಲವಂತರ ಇನ್ನಿಿತರರು ಇದ್ದರು.
ತುಂಗಭದ್ರ ನದಿ ಉಳಿಸದಿದ್ದರೆ ಭವಿಷ್ಯದಲ್ಲಿ ಕಣ್ಮರೆ ನಿಶ್ಚಿತ – ರಾಜಶ್ರೀ ಚೌಧರಿ

