ಸುದ್ದಿಮೂಲ ವಾರ್ತೆ ಬೀದರ್, ಡಿ.28:
ಬೀದರ್ ದಕ್ಷಿಣ ಕ್ಷೇತ್ರದ ಬೇಮಳ ಖೇಡಾ ಗ್ರಾಾಮದಲ್ಲಿ ವಿದ್ಯಾಾರ್ಥಿನಿಯರಿಗಾಗಿ 17 ಕೋಟಿ ವೆಚ್ಚದ ಶ್ರೀಮತಿ ಇಂದಿರಾ ಗಾಂಧಿ ಬಾಲಕಿಯರ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಶೈಲೇಂದ್ರ ಬೆಲ್ದಾಾಳೆ ಗುದ್ದಲಿ ಪೂಜೆ ನೆರವೇರಿಸಿದರು.
ವಿದ್ಯಾಾರ್ಥಿಗಳ ಉತ್ತಮ ಶಿಕ್ಷಣಕ್ಕಾಾಗಿ ಹೆಚ್ಚಿಿನ ಆದ್ಯತೆ ನೀಡುವುದು ನನ್ನ ಪ್ರಮುಖ ಜವಾಬ್ದಾಾರಿಯಾಗಿದೆ. ಗುಣಮಟ್ಟದ ಶಿಕ್ಷಣದ ಮೂಲಕವೇ ವಿದ್ಯಾಾರ್ಥಿಗಳ ಭವಿಷ್ಯಬೆಳಗಿಸಲು ಸಾಧ್ಯ. ಅದಕ್ಕಾಾಗಿ ಉತ್ತಮ ಶಾಲಾ ಮೂಲಸೌಕರ್ಯ, ಸ್ಮಾಾರ್ಟ್ ತರಗತಿಗಳು, ವಸತಿಶಾಲೆ ಸೌಲಭ್ಯಗಳು ಹಾಗೂ ಸಮಾನ ಶಿಕ್ಷಣಾವಕಾಶ ಕಲ್ಪಿಿಸುವ ನಿಟ್ಟಿಿನಲ್ಲಿ ಹಗಲಿರುಳು ಶ್ರಮಿಸಲಾಗುತ್ತಿಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಾಳೆ ತಿಳಿಸಿದರು.
ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣಾವಕಾಶ, ಉತ್ತಮ ಮೂಲಸೌಕರ್ಯ, ನಿಪುಣ ಶಿಕ್ಷಕರು ಹಾಗೂ ಆಧುನಿಕ ತಂತ್ರಜ್ಞಾನಗಳ ಬಳಕೆ ಅತ್ಯಗತ್ಯವಾಗಿದೆ. ಈ ನಿಟ್ಟಿಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿಿನ ಆದ್ಯತೆ ನೀಡಲಾಗುತ್ತಿಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಾಪಂ ಅಧ್ಯಕ್ಷ ಮಂಜುನಾಥ ಸುಣಗಾರ, ಮುಖಂಡರಾದ ಪ್ರಭು ಮೆಂಘಾ, ಬಸವರಾಜ ಸಿಂಧೋಲ, ಪ್ರಭುರಾವ ಸಾವಳಗಿ, ಸಂತೋಷ ರೆಡ್ಡಿಿ, ರಾಜಕುಮಾರ ಮಾಳಗಿ, ಶ್ರೀನಿವಾಸ ರೆಡ್ಡಿಿ, ಬಸವರಾಜ ಚಟನಳ್ಳಿಿ, ಶಿವಕುಮಾರ ಪಾಟೀಲ, ಸಿದ್ದು ಮುದ್ದಾ, ಶ್ರಿನೀವಾಸ ಹುಗಾರ, ಬಸವರಾಜ ಯದಲಾಪುರ, ನರೇಶ್, ನಾಗರಾಜ ಗುಮ್ಮದ, ಸಂಜುಕುಮಾರ ಸಾತೋಳಿ, ರಾಜರೆಡ್ಡಿಿ, ರಾಜಕುಮಾರ ಬಾಸ್ಕರ್, ತುಕಾರಾಮ, ಸಂದೀಪ ರೊಟ್ಟಿಿ, ಮಹೇಶ ಮತ್ತಿಿತರರು ಉಪಸ್ಥಿಿತರಿದ್ದರು.
17 ಕೋಟಿ ವೆಚ್ಚದ ಇಂದಿರಾ ಗಾಂಧಿ ಬಾಲಕಿಯರ ಹಾಸ್ಟೆಲ್ಗೆ ಗುದ್ದಲಿ ಪೂಜೆ

