ಸುದ್ದಿಮೂಲ ವಾರ್ತೆ ಬುಡೌನ್ (ಉತ್ತರ ಪ್ರದೇಶ), ಡಿ.29:
ರೇಬಿಸ್ ಪೀಡಿತ ನಾಯಿ ಕಚ್ಚಿಿದ ಎಮ್ಮೆೆಯ ಹಾಲಿನಿಂದ ತಯಾರಿಸಿದ ಮೊಸರಿನ ರಾಯ್ತ ಸೇವಿಸಿದ ಪರಿಣಾಮ ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಪಿಪ್ರೌೌಲಿ ಗ್ರಾಾಮದ 200 ಮಂದಿಗೆ ರೇಬಿಸ್ ರೋಗ ಹರಡಿರುವ ಆತಂಕ ಎದುರಾಗಿದೆ.
ಮುನ್ನೆೆಚ್ಚರಿಕೆ ಕ್ರಮವಾಗಿ ರೇಬೀಸ್ ಲಸಿಕೆಯನ್ನು ಎಲ್ಲರಿಗೂ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 23ರಂದು ಗ್ರಾಾಮದಲ್ಲಿ ವ್ಯಕ್ತಿಿಯೊಬ್ಬರ ಪುಣ್ಯತಿಥಿ ನಡೆದಿತ್ತು. ಅಲ್ಲಿ ಜನರು ರಾಯ್ತ ಸೇರಿದಂತೆ ಇತರ ಖಾದ್ಯಗಳನ್ನು ಸೇವಿಸಿದ್ದರು. ರಾಯ್ತ ತಯಾರಿಸಲು ಹಾಲು ಬಳಸಿದ ಎಮ್ಮೆೆಗೆ ಕೆಲವು ದಿನಗಳ ಹಿಂದೆ ನಾಯಿ ಕಚ್ಚಿಿತ್ತು ಎಂದು ತಿಳಿದು ಬಂದಿದೆ.
ಇದರಿಂದ ಆತಂಕಕ್ಕೆೆ ಒಳಗಾದ ಗ್ರಾಾಮಸ್ಥರು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಕೂಡಲೇ ಆರೋಗ್ಯ ಅಧಿಕಾರಿಗಳು ರಾಯ್ತ ಸೇವಿಸಿದ ಎಲ್ಲರಿಗೂ ರೇಬೀಸ್ ಚುಚ್ಚುಮದ್ದು ನೀಡಿದ್ದಾರೆ.
ಎಮ್ಮೆೆ ಸಾವು: ನಾಯಿ ಕಚ್ಚಿಿದ ಎಮ್ಮೆೆ ರೇಬೀಸ್ ಲಕ್ಷಣಗಳಿಂದ ಮೃತಪಟ್ಟಿಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಮುನ್ನೆೆಚ್ಚರಿಕೆ ಕ್ರಮವಾಗಿ ರೇಬೀಸ್ ಚುಚ್ಚುಮದ್ದು ನೀಡಲಾಗಿದೆ ಎಂದು ಮುಖ್ಯ ಆರೋಗ್ಯ ಅಧಿಕಾರಿ ಡಾ.ರಾಮೇಶ್ವರ ಮಿಶ್ರಾಾ ತಿಳಿಸಿದ್ದಾರೆ.
ಬಾಕ್ಸ್
ಹಾಲು ಕುದಿಸಿದ ಬಳಿಕ ರೇಬೀಸ್ ವೈರಸ್ ಇರುವುದಿಲ್ಲ
ಹಾಲು ಕುದಿಸಿದ ನಂತರ ರೇಬೀಸ್ ವೈರಸ್ಗಳು ಇರುವುದಿಲ್ಲ. ಆದರೆ ಯಾವುದೇ ಸಂಭಾವ್ಯ ಅಪಾಯ ತಡೆಗಟ್ಟುವ ಸಲುವಾಗಿ ಎಲ್ಲರಿಗೂ ರೇಬೀಸ್ ಚುಚ್ಚುಮದ್ದು ನೀಡಲಾಗಿದೆ. ಅಲ್ಲದೆ ಗ್ರಾಾಮಸ್ಥರಿಗೆ ಯಾವುದೇ ವದಂತಿ ಹರಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ವೈದ್ಯ ಮಿಶ್ರಾಾ ತಿಳಿಸಿದ್ದಾರೆ.

