ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.29:
ಸರ್ಕಾರಿ ಪ್ರಾಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಖಾಲಿ ಇರುವ ಹಿರಿಯ ಮುಖ್ಯ ಶಿಕ್ಷಕ ಹುದ್ದೆಗಳಿಗೆ ಬಡ್ತಿಿ ನೀಡಲು ರಾಜ್ಯಾಾದ್ಯಂತ ಏಕಕಾಲಕ್ಕೆೆ ಕೌನ್ಸೆೆಲಿಂಗ್ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮುಖ್ಯ ಶಿಕ್ಷಕರ ಬಡ್ತಿಿ ಪ್ರಕ್ರಿಿಯೆಗೆ ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಪ್ರಯತ್ನದ ಲವಾಗಿ ಮರು ಚಾಲನೆ ನೀಡಲಾಗಿದೆ. ಈ ಮೂಲಕ ಸುಮಾರು 2000ಕ್ಕೂ ಅಧಿಕ ಮುಖ್ಯ ಶಿಕ್ಷಕರಿಗೆ ಬಡ್ತಿಿ ಭಾಗ್ಯ ಸಿಗುವ ಸಾಧ್ಯತೆ ಇದೆ.
ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ 2026ರ ಜ.1ರಿಂದ ಏಕಕಾಲಕ್ಕೆೆ ಕೌನ್ಸೆೆಲಿಂಗ್ ಆರಂಭಿಸಬೇಕು. ಜ.1ರಂದು ಜಿಲ್ಲೆಯಲ್ಲಿ ಮುಖ್ಯ ಶಿಕ್ಷಕರ ಮತ್ತು ಹಿರಿಯ ಮುಖ್ಯ ಶಿಕ್ಷಕರ ತಾತ್ಕಾಾಲಿಕ ಜ್ಯೇಷ್ಠತಾ ಪಟ್ಟಿಿ ಪ್ರಕಟಿಸಬೇಕು. ಈ ಪಟ್ಟಿಿಗೆ ಆಕ್ಷೇಪಣೆ ಸಲ್ಲಿಸಲು ಜ.8ರವರೆಗೆ ಅವಕಾಶ ನೀಡಬೇಕು. ಜ.2ರಂದು ಜಿಲ್ಲೆಯಲ್ಲಿ ಲಭ್ಯವಿರುವ ಎ, ಬಿ ಮತ್ತು ಸಿ ವಲಯದ ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳನ್ನು ಪ್ರಕಟಿಸಬೇಕು. ಬಡ್ತಿಿ ನೀಡಿ ಸಿ ವಲಯದ ಶಾಲೆಗಳಿಗೆ ನಿಯೋಜಿಸಬೇಕಿರುವುದರಿಂದ ಅಲ್ಲಿರುವ ಮುಖ್ಯ ಶಿಕ್ಷಕರನ್ನು ಎ ಮತ್ತು ಬಿ ವಲಯಕ್ಕೆೆ ನಿಯಮಾನುಸಾರ ವರ್ಗಾವಣೆ ಪ್ರಕ್ರಿಿಯೆ ನಡೆಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನಂತರ ಜ.21ರಂದು ಬಡ್ತಿಿಗೆ ಅರ್ಹರಿರುವ ಮುಖ್ಯ ಶಿಕ್ಷಕರ 1:2 ತಾತ್ಕಾಾಲಿಕ ಜೇಷ್ಠತಾ ಪಟ್ಟಿಿ ಪ್ರಕಟಿಸಿ ಆಕ್ಷೇಪಣೆಗೆ ಅವಕಾಶ ನೀಡಬೇಕು. ಆಕ್ಷೇಪಣೆಗಳನ್ನು ಬಗೆಹರಿಸಿ ಜ.29ರಂದು 1:1 ಅಂತಿಮ ಜ್ಯೇಷ್ಠತಾ ಪಟ್ಟಿಿ ಪ್ರಕಟಿಸಿ ಜ.31ರಂದು ಕೌನ್ಸೆೆಲಿಂಗ್ ಮೂಲಕ ಖಾಲಿ ಇರುವ ಹಿರಿಯ ಮುಖ್ಯ ಶಿಕ್ಷಕ ಹುದ್ದೆಗಳಿಗೆ ಬಡ್ತಿಿ ನೀಡಬೇಕು ಎಂದು ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸೂರಳ್ಕರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

