ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.29:
ಸರ್ಕಾರದ ಯೋಜನೆಗಳನ್ನು ಅರ್ಹ ಲಾನುಭವಿಗಳಿಗೆ ತಲುಪಿಸಲು ಶೀಘ್ರ ಲಾನುಭವಿಗಳನ್ನು ಆಯ್ಕೆೆ ಮಾಡಿ ಶಿಾರಸು ಮಾಡುವಂತೆ 224 ಶಾಸಕರಿಗೆ ಪತ್ರ ಬರೆಯಲಾಗಿದೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿಿ ನಿಗಮದ ಅಧ್ಯಕ್ಷರಾದ ಎಂ. ರಾಮಪ್ಪ ಹೇಳಿದರು.
ಇಂದು ಬೆಂಗಳೂರಿನ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿಿ ನಿಗಮದ ಕಚೇರಿಯಲ್ಲಿ ಪತ್ರಿಿಕಾಗೋಷ್ಠಿಿ ಉದ್ದೇಶಿಸಿ ಮಾತನಾಡಿದ ಅವರು, ಭೋವಿ ಅಭಿವೃದ್ಧಿಿ ನಿಗಮದಿಂದ ಸರ್ಕಾರ ನೀಡುತ್ತಿಿರುವ ಯೋಜನೆಗಳನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೇ ಸಮುದಾಯದ ಅರ್ಹ ಲಾನುಭವಿಗಳಿಗೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಭೋವಿ ಅಭಿವೃದ್ಧಿಿ ನಿಗಮದ ಅಧಿಕಾರ ವಹಿಸಿಕೊಂಡು ಕೆಲವು ದಿನಗಳು ಕಳೆದಿದ್ದು, ಈ ದಿನಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ನಿಗಮದ ಕಾರ್ಯವೈಖರಿಗಳ ಬಗ್ಗೆೆ ಪರಿಶೀಲಿಸಲಾಗಿದೆ. ರಾಜ್ಯದ ಎಲ್ಲಾ 224 ಶಾಸಕರುಗಳಿಗೆ ಪತ್ರ ಬರೆದು ಲಾನುಭವಿಗಳನ್ನು ಶೀಘ್ರವಾಗಿ ಆಯ್ಕೆೆ ಮಾಡಿ ಕಳುಹಿಸಲು ತಿಳಿಸಲಾಗಿದೆ ಎಂದರು.
ಭೋವಿ, ವಡ್ಡರ, ಸಮುದಾಯದ ಏಳಿಗೆಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳನ್ನು ಬಡವರು, ಕೂಲಿಕಾರ್ಮಿಕರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿಿದೆ. ಮಹಿಳಾ ಸಬಲೀಕರಣಕ್ಕಾಾಗಿ ಭೂ ಒಡೆತನ ಯೋಜನೆ ಜಾರಿಗೊಳಿಸಲಾಗಿದ್ದು, ಸಮುದಾಯದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ನೀಡಲಾಗುವುದು. 2025-26 ನೇ ಸಾಲಿನಲ್ಲಿ 169 ಲಾನುಭವಿಗಳು ಭೂ ಒಡೆತನ ಯೋಜನೆಯ ಲಾನುಭವಿಗಳಾಗಿದ್ದಾರೆ. ಸರ್ಕಾರದಿಂದ ಮಂಜೂರು ಮಾಡಿದ ಭೂಮಿಯನ್ನು ಶಾಶ್ವತವಾಗಿ ಪರಭಾರೆ ಮಾಡುವಂತಿಲ್ಲ ಎಂದು ತಿಳಿಸಿದರು.
ಮೈಕ್ರೋೋ ಕ್ರೆೆಡಿಟ್ ಯೋಜನೆಯಡಿ ಸಮುದಾಯದ ಕನಿಷ್ಟ 10 ಮಹಿಳಾ ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಆದಾಯ ಗಳಿಸುವ ಉತ್ಪಾಾದನಾ ಚಟುವಟಿಕೆಗಳಿಗೆ ನಿಗಮದಿಂದ ನೇರವಾಗಿ 5 ಲಕ್ಷ ರೂ. ಆರ್ಥಿಕ ಸಹಾಯ ಮತ್ತು ಸಾಲಸೌಲಭ್ಯ ನೀಡಲಾಗುವುದು. ಇದರಲ್ಲಿ 2.50 ಲಕ್ಷ ರೂ. ಗಳ ಸಹಾಯಧನ ಮತ್ತು 2.50 ಲಕ್ಷ ರೂ. ಸಾಲವಾಗಿರುತ್ತದೆ. ಸಾಲದ ಮೊತ್ತವನ್ನು 36 ಸಮ ಕಂತುಗಳಲ್ಲಿ ಶೇಕಡ 4 ರ ಬಡ್ಡಿಿ ದರದಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.
ಬ್ಯಾಾಂಕ್ ಸಹಯೋಗದಲ್ಲಿ ಉದ್ಯಮಶೀಲತೆ ಯೋಜನೆಯಡಿ ಭೋವಿ ಸಮುದಾಯದ ನಿರುದ್ಯೋೋಗ ಯುವಕ – ಯುವತಿಯರಿಗೆ ಆರ್ಥಿಕ ಅಭಿವೃದ್ಧಿಿ ಹೊಂದುವ ಸಲುವಾಗಿ, ಸಣ್ಣ ಕೈಗಾರಿಕೆ ಮತ್ತು ವ್ಯಾಾಪಾರ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋೋಗ ಘಟಕಗಳನ್ನು ಆಯೋಜಿಸಲು ಮತ್ತು ಸರಕು ಸಾಗಾಣಿಕೆ ಮತ್ತು ಪ್ರವಾಸಿ ವಾಹನ ಖರೀದಿಸಲು ಸೌಲಭ್ಯ ಕಲ್ಪಿಿಸಲಾಗುವುದು ಎಂದು ವಿವರಿಸಿದರು.
ಸ್ವಾಾವಲಂಭಿ ಸಾರಥಿ ಯೋಜನೆಯಡಿ ಸರಕು ವಾಹನ ಟ್ಯಾಾಕ್ಸಿಿ ಖರೀದಿಸಲು ಶೇಕಡ 75 ರಷ್ಟು ಸಹಾಯಧನ ನೀಡಲಾಗುವುದು. ಈ ಯೋಜನೆಯ ದುರುಪಯೋಗ ತಪ್ಪಿಿಸಲು ಸೌಲಭ್ಯ ಪಡೆದ ಲಾನುಭವಿಗಳ ವಾಹನಗಳ ಮೇಲೆ, ನಿಗಮದ ಲೋಗೋ ಮತ್ತು ಸ್ಟಿಿಕ್ಕರ್ ಅಂಟಿಸಲಾಗುವುದು ಹಾಗೂ ಲಾನುಭವಿಗಳಿಗೆ 3 ತಿಂಗಳಿಗೊಮ್ಮೆೆ ಕಛೇರಿಗೆ ಹಾಜರಾಗುವಂತೆ ತಿಳಿಸಿ ವಾಹನಗಳನ್ನು ಪರಿಶೀಲಿಸಿ ಪೋಟೋಗಳನ್ನು ಅಪ್ಲೋೋಡ್ ಮಾಡುವಂತೆ ಜಿಲ್ಲಾ ವ್ಯವಸ್ಥಾಾಪಕರಿಗೆ ಸೂಚಿಸಲಾಗಿದೆ.
2025-26 ನೇ ಸಾಲಿನಲ್ಲಿ ಸರ್ಕಾರ 93.75 ಕೋಟಿ ರೂ. ಅನುದಾನ ಒದಗಿಸಿದ್ದು, ಇದರಲ್ಲಿ 68.81 ಕೋಟಿ ರೂ. ಬಳಕೆಯಾಗಿದೆ. ಉಳಿದ ಅನುದಾನವನ್ನು ಈ ವರ್ಷದ ಅಂತ್ಯದೊಳಗೆ ಯೋಜನೆಗಳಿಗೆ ವಿನಿಯೋಗಿಸಲಾಗುವುದು. ಈ ವರ್ಷದ ಆಯವ್ಯಯದಲ್ಲಿ 300 ಕೋಟಿ ರೂ.ಗಳ ಅನುದಾನಕ್ಕೆೆ ಪ್ರಸ್ತಾಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

