ಸುದ್ದಿಮೂಲ ವಾರ್ತೆ ಹಾಸನ, ಡಿ.29:
’ನನಗೆ ಕಾಲಲ್ಲಿ ಶಕ್ತಿಿ ಇಲ್ಲ. ಆದರೆ, ತಲೆಯಲ್ಲಿ ಇದೆ. ನಿಮಗೆ (ಕಾಂಗ್ರೆೆಸ್) ಶಕ್ತಿಿ ಇದ್ದರೆ ನೀವು ಯಾಕೆ ಸ್ಟಾಾಲಿನ್ ಮನೆ ಬಾಗಿಲಿಗೆ ಹೋಗ್ತಿಿರಾ? ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆೆಸ್ ವಿರುದ್ಧ ಹಾಸನದಲ್ಲಿ ಗುಟುರು ಹಾಕಿದರು.
ನಗರದ ಜ್ಞಾನಾಕ್ಷಿ ಕಲ್ಯಾಾಣ ಮಂಟಪದಲ್ಲಿ ಸೋಮವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷದ ಸ್ಥಿಿತಿ, ತಮ್ಮ ರಾಜಕೀಯ ಜೀವನ ಹಾಗೂ ಮುಂದಿನ ಹೋರಾಟದ ಕುರಿತು ಭಾವನಾತ್ಮಕ ಹಾಗೂ ತೀವ್ರ ಭಾಷಣ ಮಾಡಿದರು.
ಜೆಡಿಎಸ್ ರಾಷ್ಟ್ರಮಟ್ಟದಲ್ಲಿ ಇಲ್ಲವೆಂದು ಹೇಳುವವರ ವಿರುದ್ಧ ಪ್ರತಿಕ್ರಿಿಯಿಸಿದ ಅವರು ಕಾಂಗ್ರೆೆಸ್ ನಮಗೆ ಶಕ್ತಿಿ ಇಲ್ಲ ಎಂದಾಗ ನಾವು ಎನ್ಡಿಿಎ ಜೊತೆ ಹೋಗಿದ್ದೀವಿ. ನಿಮಗೆ ಶಕ್ತಿಿ ಇದೆ, ಆದರೆ, ತಮಿಳುನಾಡಿನಲ್ಲಿ ನೀವು ಯಾಕೆ ಸ್ಟಾಾಲಿನ್ ಮನೆ ಬಾಗಿಲಿಗೆ ಹೋಗ್ತಿಿರಾ? ಎಂದು ಲೇವಡಿ ಮಾಡಿದರು.
ಕಾಂಗ್ರೆೆಸ್ ಹೊಡೆತ ತಡ್ಕೊೊಂರು ಇನ್ನೂ ಬದುಕಿದ್ದೇವೆ. ಒಂದು ದಿನದಲ್ಲಿ ಗ್ಯಾಾರೆಂಟಿ, ಆ ಗ್ಯಾಾರೆಂಟಿ ಇಲ್ಲಿಗೆ ನಿಲ್ಲಲಿಲ್ಲ. ತೆಲಂಗಾಣ, ರಾಜಸ್ತಾಾನದ, ಬಿಹಾರ್ಗೆ ಹೋಯ್ತು ಬಿಹಾರದಲ್ಲಿ ಆರು ಸೀಟ್ ಬಂತು. ಕಾಂಗ್ರೆೆಸ್ ಹೊಡೆತ ತಡ್ಕೊೊಂದು ಇನ್ನೂ ಬದುಕಿದ್ದೇವೆ. ಅದು ಜನತೆಯ ಆಶೀರ್ವಾದದಿಂದ ಎಂದರು.
ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷದ ಐದು ಜನರು ಗೆದ್ದಿದ್ದಾರೆ. ಬಿಜೆಪಿ ಸಿಎಂ ಹಾಗೂ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಎನ್ಡಿಿಎನಲ್ಲಿ ಇದ್ದೇವೆ. ಪಾರ್ಲಿಮೆಂಟ್ ಹಾಗೂ ವಿಧಾಸಭೆಯಲ್ಲಿ ಒಟ್ಟಿಿಗೆ ಇರ್ತೇವೆ. ಮತ್ತೆೆ ಕಾರ್ಪೋರೇಷನ್ ಎಲೆಕ್ಷನ್ಗೂ ಸೀಟ್ ಬಿಟ್ಟು ಕೊಡ್ತಾಾರೆ ಎಂದು ಹೇಳಿದರು.
ಆದರೆ ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆೆಗಳಿಗೆ ಕಷ್ಟ ಆಗುತ್ತೆೆ. ಅದರ ಬಗ್ಗೆೆ ಮೋದಿಯವರು ಮಾತನಾಡಲು ಆಗಲ್ಲ. ಕೇರಳದಲ್ಲಿನ ಸರ್ಕಾರಕ್ಕೆೆ ನಮ್ಮ ಬೆಂಬಲ ಇತ್ತು. ನಾವು ಮೋದಿಯವರ ಜೊತೆ ಗುರ್ತಿಸಿಕೊಂಡಿದ್ದಕ್ಕೆೆ ನಮ್ಮ ಅಲ್ಲಿನ ಸಚಿವರು ನಾಯಕರು ನನ್ನ ಭೇಟಿಯಾದರು. ನಾವು ಎಡಪಂಥೀಯ ಪಕ್ಷದ ಜೊತೆ ಗುರುತಿಸಿ ಕೊಳ್ತಿಿವಿ ಅಂದರು ಅವರ ಶ್ರೇೇಯೋಭಿವೃದ್ದಿಗಾಗಿ ನಾನು ಅನುಮತಿ ಕೊಟ್ಟೆೆ ಎಂದರು.
ಕಳೆದ ಎರಡುವರೆ ವರ್ಷದಲ್ಲಿ ಹಾಸನ ಜಿಲ್ಲೆಯಲ್ಲಿ ಕಾಂಗ್ರೆೆಸ್ ಪಕ್ಷದ ಮುಖಂಡರು, ಸಿಎಂ, ಡಿಸಿಎಂ ಉಸ್ತುವಾರಿ ಮಂತ್ರಿಿ ಸೇರಿ ಎರಡು ಸಭೆ ಮಾಡಿದ್ದಾರೆ. ರೇವಣ್ಣ ಅವರ ಶಕ್ತಿಿಯನ್ನು ಕುಂದಿಸಲು, ಜೆಡಿಎಸ್ ಪಕ್ಷದ ಶಕ್ತಿಿ ಕುಂದಿಸಲು ಪ್ರಯತ್ನಿಿಸಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಇವತ್ತು ಕೂಡ ಸದೃಢವಾಗಿದೆ. ಮುಸ್ಲಿಿಮರಿಗೆ ಮೀಸಲಾತಿ ಕೊಟ್ಟಿಿದ್ದು ನಿಮ್ಮ ದೇವೇಗೌಡ. ಕೆಲ ನಾಯಕರು ಡ್ಯಾಾನ್ಸ್ ಮಾಡ್ತಾಾರೆ ಎಂದು ಸಿದ್ದರಾಮಯ್ಯರನ್ನ ಅಣಕಿಸಿದ ದೇವೇಗೌಡರು, ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆ. ಇದನ್ನ ಮುಗಿಸಲೇಬೇಕು ಎಂದು ಅವರು ಏನೇನು ಪ್ರಯತ್ನ ಮಾಡಿದರು ಎಂದು ನನಗೆ ಗೊತ್ತಿಿದೆ ಎಂದು ಕಿಡಿಕಾರಿದರು.
ಸಮಾವೇಶದಲ್ಲಿ ಮಾಜಿ ಸಚಿವರಾದ ಎಚ್,ಡಿ.ರೇವಣ್ಣ, ಎ.ಮಂಜು. ಎಚ್.ಕೆ.ಕುಮಾರಸ್ವಾಾಮಿ, ಎ.ಮಂಜು, ಸಾ.ರಾ. ಮಹೇಶ್, ಶಾಸಕರಾದ ಸಿ.ಎನ್. ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಸೂರಜ್ ರೇವಣ್ಣ ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್. ದ್ಯಾಾವೇಗೌಡ, , ನಗರಸಭೆ ಮಾಜಿ ಸದಸ್ಯರಾದ ಗಿರೀಶ್ ಚನ್ನಪ್ಪ. ಎಂ.ಕೆ. ಕಮಲ್ಕುಮಾರ್, ಎಸ್.ಎಚ್. ವಾಸುದೇವ್, ಮುಖಂಡರಾದ ಅನಂತ ಸುಬ್ಬರಾವ್, ಹೊನ್ನವಳ್ಳಿಿ ಸತೀಶ್, ಸಂತೋಷ್ ಸೇರಿದಂತೆ ಆನೇಕ ಮುಖಂಡರು ಇದ್ದರು.ಜ. 24 ಜೆಡಿಎಸ್ ಬೃಹತ್ ಸಮಾವೇಶ
ಬರುವ ಜ. 24 ರಂದು ಇದೇ ಹಾಸನದಲ್ಲಿ ನಡೆಯುವ ಬೃಹತ್ ಸಮಾವೇಶ 2 ಲಕ್ಷಕ್ಕೂ ಹೆಚ್ಚು ಜನ ಸೇರಬೇಕು. ಕಾಂಗ್ರೆೆಸ್ ಸಮಾವೇಶಕ್ಕಿಿಂತ ದೊಡ್ಡ ಸಮಾವೇಶ ಮಾಡಿ ನಿಮ್ಮ ತಾಕತ್ತನ್ನು ಪ್ರದರ್ಶಿಸಿ ಎಂದು ಕಾರ್ಯಕರ್ತರಿಗೆ ದೇವೇಗೌಡರು ಹೇಳಿದರು.

