ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ನಗರದ ಮಾವಿನಕೆರೆಗೆ ಸಂಪರ್ಕಿಸುವ ರಸ್ತೆೆಯ ಅಗಲೀಕರಣಕ್ಕಾಾಗಿ ಇಂದು ಬೆಳಿಗ್ಗೆೆಯಿಂದಲೇ ಜೆಸಿಬಿ ಯಂತ್ರಗಳ ಮೂಲಕ ಎರಡೂ ಬದಿಯ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸಲಾಯಿತು.
ರಾಯಚೂರು ನಗರದ ಸ್ಟೇಶನ್ ರಸ್ತೆೆಯಿಂದ ಮಾವಿನ ಕೆರೆಗೆ ಹೋಗುವ ಮಾರ್ಗದ ಅಗಲೀಕರಣಕ್ಕೆೆ ಮತ್ತೊೊಮ್ಮೆೆ ಮಹಾನಗರ ಪಾಲಿಕೆ ಚಾಲನೆ ನೀಡಿದೆ.
ರಸ್ತೆೆ ಮಧ್ಯೆೆಯಿಂದ 20 ಅಡಿ ಅಗಲೀಕರಣ ಮಾಡಲಾಗಿತ್ತುಘಿ. ಈಗ 8ವರೆ ಅಡಿ ತೆರವು ಮಾಡಲಾಗುತ್ತಿಿದೆ. ಸಣ್ಣ ಪುಟ್ಟ ಅಂಗಡಿಗಳು, ಬಹುಮಹಡಿ ಕಟ್ಟಡಗಳ ಮುಂಭಾಗದ ಛತ್ತುಗಳನ್ನು ಜೆಸಿಬಿ ಯಂತ್ರಗಳ ಮೂಲಕ ನೆಲಸಮ ಮಾಡಲಾಯಿತು.
ಯಾವುದೆ ಸಮಸ್ಯೆೆಯಾಗದಂತೆ ಪೊಲೀಸರ ನೆರವು ಪಡೆದಿದ್ದ ಪಾಲಿಕೆ ಅಧಿಕಾರಿಗಳು ತೆರವಿಗೆ ಮುಂದಾಗಿದ್ದಾಾರೆ.
ಈಗಾಗಲೇ ಈ ಹಿಂದೆ 20 ಅಡಿ ಅಗಲಿಕರಣ ಮಾಡಿದ್ದರು. ಇದೀಗ ಎಂಟುವರೇ ಅಡಿ ಅಗಲಿಕರಣಕ್ಕೆೆ ಮುಂದಾಗಿದ್ದು ಪೂರ್ಣ ಪ್ರಮಾಣದಲ್ಲಿ ಒಮ್ಮೆೆ ಮಾಡಿದರೆ ಉಳಿದ ಭಾಗ ನಿರ್ಮಾಣ ಮಾಡಿಕೊಳ್ಳಲು ಅನುಕೂಲ ಆಗಲಿದೆ.
ಅಲ್ಲದೆ, ಈ ತೆರವಿಗೆ ಸಂಬಂಧಿಸಿದಂತೆ ಯಾವುದೆ ಮುಂದಾಲೋಚನೆ ಮಾಡುತ್ತಿಿಲ್ಲ ಇದರಿಂದ ಸಣ್ಣ ಪುಟ್ಟ ವ್ಯಾಾಪಾರಕ್ಕೆೆ ತೊಂದರೆಯಾಗುತ್ತಿಿದೆ. ನೋಟೀಸ್ ನೀಡಿದ್ದಾಾರೆ ಆದರೆ, ಇನ್ನಷ್ಟು ಸಮಯ ಕೊಡಬೇಕಿತ್ತು ಎಂಬುದು ವ್ಯಾಾಪಾರಿಗಳ ಮತ್ತು ಕಟ್ಟಡ ಮಾಲಿಕರ ಒತ್ತಾಾಯವಾಗಿದೆ.
ವಾಹನ ಸಂಚಾರ ದಟ್ಟಣೆ, ಒತ್ತಡ ತಗ್ಗಿಿಸಲು ಈ ಅಗಲೀಕರಣ ಮಾಡುತ್ತಿಿದ್ದು ಈ ರಸ್ತೆೆ ನಗರದ ಹೃದಯ ಭಾಗವಾದ ತೀನ್ಕಂದಿಲ್, ಸೂಪರ್ ಮಾರ್ಕೆಟ್, ಶಶಿಮಹಲ್ ರಸ್ತೆೆಗೂ ಸಂಪರ್ಕಿಸಲಿದೆ. ಪೂರ್ಣ ಪ್ರಮಾಣದಲ್ಲಿ ಅಗಲೀಕರಣ ರಸ್ತೆೆ ಪೂರ್ಣ ಮಾಡಿದರೆ ಅನುಕೂಲ ಆಗಲಿದೆ. ಕೇವಲ ಮುಖ್ಯ ರಸ್ತೆೆ ಮುಂಭಾಗದಲ್ಲಿ ಮಾತ್ರ ಮಾಡಿದರೆ ಸಾಲದು ಎಂಬುದು ಸಾರ್ವಜನಿಕರ ಒತ್ತಾಾಯವಾಗಿದೆ.
ಮಾವಿನ ಕೆರೆ ರಸ್ತೆೆ ಅಗಲೀಕರಣ, ಎರಡೂ ಬದಿಯ ಕಟ್ಟಡಗಳ ತೆರವು ಶುರು

