ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.29:
ಪ್ರಸ್ತುತ ದಿನಗಳಲ್ಲಿ ಸುದ್ದಿಯು ಪತ್ರಕರ್ತರನ್ನೇ ಹುಡುಕಿಕೊಂಡು ಯಥೇಚ್ಛವಾಗಿ ಬರುತ್ತಿಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಾಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಾಯ ಪಟ್ಟರು.
ಬಳ್ಳಾಾರಿ ಜಿಲ್ಲಾಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೋಮವಾರ ಉದ್ಘಾಾಟಿಸಿ ಮಾತನಾಡಿದರು.
ಸುದ್ದಿ ಹುಡುಕಿಕೊಂಡು ಹೋಗುವ ಕಾಲವಿತ್ತು. ಆದರೆ, ಈಗ, ಸುದ್ದಿಯೇ ಪತ್ರಕರ್ತರನ್ನು ಹುಡುಕಿಕೊಂಡು ಬರುತ್ತಿಿದೆ. ಆ ಸುದ್ದಿಗಳಲ್ಲಿ ನಿಜವಾದ ಸುದ್ದಿ, ಮೌಲ್ಯಯುಕ್ತ ಸುದ್ದಿ ಮತ್ತು ಸುದ್ದಿಯ ಪ್ರಸ್ತುತತೆಯನ್ನು ಸುದ್ದಿ ಮನೆಯು ಅರ್ಥ ಮಾಡಿಕೊಂಡು ಪ್ರಕಟಿಸುವ ಸವಾಲುಗಳನ್ನು ಎದುರಿಸುತ್ತಿಿದೆ. ಬ್ರೇೇಕಿಂಗ್ ನ್ಯೂಸ್ ಒತ್ತಡದಲ್ಲಿ ಸಮಾಜದಲ್ಲಿ ಅದೆಷ್ಟೋೋ ಮನಸ್ಸುಗಳನ್ನು ಒಡೆದಿದ್ದೇವೆ. ಒಡೆದ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ. ಬರಹದಲ್ಲಿ ಪದಗಳನ್ನು ಬಳಸುವಾಗ ಜವಾಬ್ದಾಾರಿ ತೋರಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು, ನಿಷ್ಪಕ್ಷಪಾತ ವರದಿಗಾರಿಕೆಯು ಅಗತ್ಯವಿದೆ. ವೃತ್ತಿಿಯಲ್ಲಿ ಗುಣಮಟ್ಟ, ಕೌಶಲ್ಯಗಳನ್ನು – ಪ್ರತಿಯೊಬ್ಬ ಪತ್ರಕರ್ತರು ವೃತ್ತಿಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಮತ್ತು ನಾರಾ ಭರತರೆಡ್ಡಿಿ ಅವರು, ರಾಜಕೀಯ ಮತ್ತು ಪತ್ರಿಿಕೋದ್ಯಮ ಜೋಡೆತ್ತುಗಳಿದ್ದಂತೆ. ತಲಾ 2 ಲಕ್ಷ ರೂಪಾಯಿಗಳನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿಿ ನಿಧಿಗೆ ವೈಯಕ್ತಿಿಕವಾಗಿ ದೇಣಿಗೆ ನೀಡಿ, ಜಿಲ್ಲೆೆಯ ಪತ್ರಕರ್ತರ ಹಿತಾಸಕ್ತಿಿಗಾಗಿ ಸದಾಬದ್ಧ. ಪತ್ರಕರ್ತರ ಸಂಘದ ಮೇಲ್ಭಾಾಗದಲ್ಲಿ ಅತಿಥಿಗೃಹ ನಿರ್ಮಾಣ ಮಾಡಲು ತಲಾ 10 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತದೆ. ಪತ್ರಕರ್ತರು ವೃತ್ತಿಿಯಲ್ಲಿ ಕ್ರೆೆಡಿಬಲಿಟಿಯನ್ನು ಕಾಪಾಡಿಕೊಳ್ಳಬೇಕು ಎಂದರು.
ಬಳ್ಳಾಾರಿ ಜಿಲ್ಲಾಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ವೀರಭದ್ರಗೌಡ ಅವರು, ವೃತ್ತಿಿನಿರತ ಪತ್ರಕರ್ತರ ಮಕ್ಕಳ ಶಿಕ್ಷಣಕ್ಕೆೆ ಶೇ. 50 ರಷ್ಟು ಶಿಕ್ಷಣ ಶುಲ್ಕದಲ್ಲಿ ಶಿಕ್ಷಣ ನೀಡುವ ಕ್ರಮಕೈಗೊಳ್ಳಬೇಕು. ಬಳ್ಳಾಾರಿ ಮಹಾನಗರ ಪಾಲಿಕೆಯಲ್ಲಿ ಮತ್ತು ಜಿಲ್ಲಾಾ ಮಟ್ಟದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಿ ನಿಧಿ ರಚಿಸಬೇಕು ಎಂದು ಪ್ರಾಾಸ್ತಾಾವಿಕವಾಗಿ ಕೋರಿದರು.
ಜಿಲ್ಲಾಾಧಿಕಾರಿ ಕೆ. ನಾಗೇಂದ್ರ ಪ್ರಸಾದ್, ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಡಾ. ಶೋಭಾರಾಣಿ ವಿ.ಜೆ. ಮತ್ತು ಜಿಲ್ಲಾಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ಹ್ಯಾಾರೀಸ್ ಸುಮೇರ್ ಸೇರಿದಂತೆ ಪದಾಧಿಕಾರಿಗಳು ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲಾಾ ಮಟ್ಟದ ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತ ಕೆ.ಎನ್. ಗಂಗಾಧರ, ಸೇರಿದಂತೆ ಇತರನ್ನು ಸನ್ಮಾಾನಿಸಿ, ಗೌರವಿಸಲಾಯಿತು. ವಿವಿಧ ಸಂಘಟನೆಗಳವರು ಈ ಕಾರ್ಯಕ್ರಮದಲ್ಲಿ ಪಾಲ್ಗೊೊಂಡಿದ್ದರು.
ಸುದ್ದಿಗಳು ಪತ್ರಕರ್ತರನ್ನು ಹುಡುಕಿಕೊಂಡು ಯಥೇಚ್ಛವಾಗಿ ಬರುತ್ತಿವೆ : ಶಿವಾನಂದ ತಗಡೂರು

