ಸುದ್ದಿಮೂಲ ವಾರ್ತೆ ಮಸ್ಕಿ, ಡಿ.29:
ಪಟ್ಟಣದ ಕ ರ ವೇ ( ಶಿವರಾಮೇಗೌಡರ ಬಣ) ವತಿಯಿಂದ ಸೋಮವಾರ ಅಶೋಕ ವೃತ್ತದ ಬಳಿ ವಿಶ್ವ ಮಾನವ ರಾಷ್ಟ್ರ ಕವಿ ಕುವೆಂಪು ಅವರ ಜಯಂತಿ ಆಚರಣೆ ಮಾಡಲಾಯಿತು.
ತಾಲೂಕ ಅಧ್ಯಕ್ಷ ಆರ್ ಕೆ ನಾಯಕ ಅವರು ರಾಷ್ಟ್ರ ಕವಿ ಕುವೆಂಪುರವರ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು, ’ಸಾಹಿತ್ಯ ಕ್ಷೇತ್ರದ ಮೂಲಕ ವೈಚಾರಿಕ ತತ್ವಗಳು ಹಾಗೂ ವಿಶ್ವ ಮಾನವ ಸಂದೇಶ ನೀಡಿದ ಕುವೆಂಪು ಅವರ ತತ್ವಾಾದರ್ಶಗಳ ಪಾಲನೆ ಅಗತ್ಯ ಎಂದರು. ಸರ್ಕಾರಿ ಹಿರಿಯ ಪ್ರಾಾಥಮಿಕ ಆರೋಗ್ಯ ಕೇಂದ್ರಕ್ಕೆೆ ಭೇಟಿ ನೀಡಿ ಬಡ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿದರು.
ಹನುಮಂತ ಉಪ್ಪಾಾರ, ದೇವಪ್ಪ ನಾಯಕ,ಸಿದ್ದು ಮೇಟಿ ಮೆದಿಕಿನಾಳ,ಯಮನೂರ ಬುದ್ದಿನ್ನಿಿ, ಆಂಜನೇಯ ಮೋಚಿ, ಮೌನೇಶ ಹಳ್ಳಿಿ, ತುಗ್ಗಲದಿನ್ನಿಿ ಮೌನೇಶ, ನಗನೂರ ಬಾಬು ಬಾಬು ರಾಠೋಡ ಇತರರು ಇದ್ದರು.
ವಿಶ್ವಮಾನವ ಕುವೆಂಪು ಜನ್ಮದಿನೋತ್ಸವ ಆಚರಣೆ

