ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.29:
ಕೊಪ್ಪಳ ಜಿಲ್ಲೆೆಯಲ್ಲಿ ಕಳೆದ ಮೂರು ವರ್ಷದಲ್ಲಿ ಸರಾಸರಿ ಮೂರು ದಿನಕ್ಕೆೆ ಇಬ್ಬರಂತೆ ಜನರು ಹೆದ್ದಾಾರಿಯಲ್ಲಿ ಅಪಘಾತಕ್ಕೆೆ ಜೀವ ಕಳೆದುಕೊಂಡಿದ್ದಾಾರೆ.
ಕೊಪ್ಪಳ ಜಿಲ್ಲೆೆಯು ಮೂರು ರಾಷ್ಟ್ರೀಯ ಹೆದ್ದಾಾರಿಗಳನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾಾರಿ 50 ಬೆಂಗಳೂರು ಸೊಲ್ಲಾಾಪುರ, ರಾಷ್ಟ್ರೀಯ ಹೆದ್ದಾಾರಿ 67 ಗುತ್ತಿಿ- ಅಂಕೋಲ ಹಾಗು ರಾಷ್ಟ್ರೀಯ ಹೆದ್ದಾಾರಿ 367 ಭಾನಾಪುರ ಗದ್ದನಕೇರಿ ಹೀಗೆ ಹೆದ್ದಾಾರಿಗಳಿವೆ. ಹೆದ್ದಾಾರಿಗಳು ಜನರ ಸುಗಮ ಸಂಚಾರಕ್ಕೆೆ ಸಹಕಾರಿಯಾಗಿವೆ. ಹೆದ್ದಾಾರಿಗಳು ಇರುವದರಿಂದ ಜನರು ವೇಗವಾಗಿ ಸಂಚರಿಸುತ್ತಾಾರೆ. ಆದರೆ ಹೆದ್ದಾಾರಿಯಲ್ಲಿ ಅಸುರಕ್ಷಿತ ಸಂಚಾರ. ರಸ್ತೆೆ ನಿಯಮ ಪಾಲನೆ ಮಾಡದೆ ಇರುವುದರಿಂದ ಅಪಘಾತಗಳು ಸಂಭವಿಸುತ್ತಿಿವೆ.
ಜಿಲ್ಲೆೆಯಲ್ಲಿ ಆಗಾಗ ಹೆದ್ದಾಾರಿಯಲ್ಲಿ ಅಪಘಾತಗಳು ಸಂಭವಿಸುತ್ತವೆ. ಅಪಘಾತಕ್ಕೆೆ ಮುಖ್ಯ ಕಾರಣ ವಾಹನ ಚಾಲಕರಲ್ಲಿ ಕೆಲವರು ಕುಡಿದು ವಾಹನ ಚಾಲನೆ, ಸಂಚಾರಿ ನಿಯಮ ಪಾಲನೆ ಮಾಡದೆ ಇರುವುದು ಹೆದ್ದಾಾರಿಯಲ್ಲಿ ಸಂಚಾರಿ ನಿಯಮ ಪಾಲನೆಯ ಮಾರ್ಗಸೂಚಿಗಳು ಸರಿಯಾಗಿಲ್ಲದೆ ಇರುವುದು. ಪೊಲೀಸರು ಸರಿಯಾಗಿ ಕ್ರಮ ಕೈಗೊಳ್ಳದೆ ಇರುವುದು ಹೆದ್ದಾಾರಿಯಲ್ಲಿ ಅಪಘಾತಕ್ಕೆೆ ಕಾರಣ ಎನ್ನಲಾಗಿದೆ.
ಹೆದ್ದಾಾರಿ ಯಲ್ಲಿ ಈ ವರ್ಷ ಡಿಸೆಂಬರ್ ಆರಂಭಕ್ಕೆೆ 245 ಜನರು ಹೆದ್ದಾಾರಿ ಅಪಘಾತದಲ್ಲಿ ಸಾವನ್ನಪ್ಪಿಿದ್ದಾಾರೆ. ಕಳೆದ ವರ್ಷ 272 ಜನರು ಹಾಗು 2023 ರಲ್ಲಿ 246 ಜನರು ಸಾವನ್ನಪ್ಪಿಿದ್ದಾಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಹೆದ್ದಾಾರಿ ನಿಯಮ ಪಾಲನೆಗೆ ಕ್ರಮ ಕೈಗೊಳ್ಳಲಾಗುತ್ತಿಿದೆ. 2023 ರಲ್ಲಿ 72ಸಾವಿರ ತಪಾಸಣೆ ಮಾಡಿ ಜನರ ಮೇಲೆ ಪ್ರಕರಣ ದಾಖಲು, ಅದರಲ್ಲಿ 83 ಕುಡಿದು ವಾಹನ ಚಲಾಯಿಸಿದ ಪ್ರಕರಣಗಳು. 2024 ರಲ್ಲಿ 73 ಸಾವಿರ ತಪಾಸಣೆ ಮಾಡಿದ್ದು ಅದರಲ್ಲಿ 365 ಪ್ರಕರಣಗಳು ಕುಡಿದು ವಾಹನ ಓಡಿಸಿರುವ ಪ್ರಕರಣಗಳು ಹಾಗು ಈ ವರ್ಷ ಇಲ್ಲಿಯವರೆಗೂ 83 ಜನರ ತಪಾಸಣೆ ಮಾಡಿ ಅದರಲ್ಲಿ 450 ಕ್ಕೂ ಕುಡಿದು ವಾಹನ ಓಡಿಸುವವರು ಪ್ರಕರಣ ದಾಖಲಾಗಿವೆ. ಅಪಘಾತ ತಡೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿಿ ಡಾ ರಾಮ್ ಎಲ್ ಅರಸಿದ್ದಿ ಹೇಳಿದ್ದಾಾರೆ.
ಪ್ರತಿ ಜೀವವೂ ಅಮೂಲ್ಯವಾಗಿದೆ. ಈ ಸಂದರ್ಭದಲ್ಲಿ ಹೆದ್ದಾಾರಿ ಪ್ರಾಾಧಿಕಾರ, ಸರಕಾರ ರೂಪಿಸಿದ ನಿಯಮಗಳನ್ನು ಪಾಲಿಸಬೇಕು. ಜಾಗೂರಕತೆಯಿಂದ ವಾಹನ ಓಡಿಸಬೇಕು. ಈ ನಿಟ್ಟಿಿನಲ್ಲಿ ವಾಹನ ಚಾಲಕರು ಹಾಗು ಪೊಲೀಸರು ಸಹ ಕಾಳಜಿ ವಹಿಸಬೇಕಾಗಿದೆ.

