ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ಮನುಜ ಮತ ಸಾರಿದ ಶ್ರೇಷ್ಠ ಕವಿ ಕುವೆಂಪು ಈ ನಾಡು ಕಂಡ ಅಪ್ರತಿಮ ತತ್ವಜ್ಞಾನಿ ಎಂದು ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತ ಸಾಹಿತಿ ಡಾ.ಜಯಲಕ್ಷ್ಮೀ ಮಂಗಳಮೂರ್ತಿ ಹೇಳಿದರು.
ನಗರದ ಜವಾಹರ ನಗರ ಸರ್ಕಾರಿ ಪ್ರೌೌಢಶಾಲೆಯಲ್ಲಿ ಶೃತಿ ಸಾಹಿತ್ಯ ಮೇಳದಿಂದ ಕುವೆಂಪು ಹಾಗೂ ಸಿ. ಅಶ್ವತ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿ, ಕುವೆಂಪು ಅವರು ಜಗದ ಕವಿಯಾಗಿದ್ದಾರೆ. ಯುಗದ ಕವಿಯಾಗಿದ್ದಾರೆ, ಕವಿ, ಸಾಹಿತಿ, ವಿಮರ್ಶಕರಾಗಿ ಕನ್ನಡ ಸಾಹಿತ್ಯ ಹಿಮಾಲಯದ ಎತ್ತರಕ್ಕೆೆ ಬೆಳೆಸಿದ ಕೀರ್ತಿ ಅವರದಾಗಿದೆ ಎಂದರು.
ಅವರ ರಾಮಾಯಣ ದರ್ಶನಂ ಜ್ಞಾನಪೀಠ ಪ್ರಶಸ್ತಿಿ ಉಳಿದ ಜ್ಞಾನಪೀಠ ಪ್ರಶಸ್ತಿಿಗಳ ಕೃತಿಗಳಿಗೆ ಭದ್ರ ಬುನಾದಿಯಾಗಿದೆ ಎಂದು ಹೇಳಿದರು.
ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಮಾತನಾಡಿ, ಸಿ .ಅಶ್ವತ್ ಅವರು ನಾಡಿನ ಶ್ರೇೇಷ್ಠ ಗಾನ ಗಾರುಡಿಗರಾಗಿದ್ದಾರೆ. ಶೃತಿ ಸಾಹಿತ್ಯ ಮೇಳದಿಂದ 1993 ರಲ್ಲಿ ಆಯೋಜಿಸಿದ 14ನೇ ವಾರ್ಷಿಕೋತ್ಸವದಲ್ಲಿ ಸಿ .ಅಶ್ವತ್ ಅವರು ಸಂತ ಶಿಶುನಾಳ ಶರೀರ ಗೀತೆಗಳನ್ನು ಹಾಡಿ ಜನಮಾನಸಕ್ಕೆೆ ತತ್ವ ಸಾರಿದರು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಜಯಕುಮಾರ ಕಾಡ್ಲೂರ, ರವೀಂದ್ರ ಕುಲಕರ್ಣಿ, ಬ್ರಾಾಹ್ಮಣ ಸಮಾಜದ ಚುನಾಯಿತ ಪ್ರತಿನಿಧಿ ರಮೇಶ್ ಕುಲಕರ್ಣಿ ,ಮುಖಂಡರಾದ ಪ್ರಸನ್ನ ಆಲಂಪಲ್ಲಿ, ಜೆ.ಎಂ. ವೀರೇಶ್, ನರಸಿಂಹಮೂರ್ತಿ ಕುಲಕರ್ಣಿ, ರಾಘವೇಂದ್ರ ಜಾಗೀರಾರ್, ನಾಗರತ್ನ ಕಲ್ಲೂರ, ಇಂದಿರಾ ಬಾಯಿ ಸಂಗಮ್ , ಪಿ ವೆಂಕಟೇಶ್ ಬಾಗಲವಾಡ ಮುಂತಾದವರಿದ್ದರು.
ಕುವೆಂಪು, ಸಿ.ಅಶ್ವತ್ ಜನ್ಮ ದಿನಾಚರಣೆ ಮನುಜ ಮತ ಸಾರಿದ ಶ್ರೇಷ್ಠ ಕವಿ ಕುವೆಂಪು-ಡಾ.ಜಯಲಕ್ಷ್ಮಿ

