ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ತಿಂಥಣಿ ಬ್ರಿಿಡ್ಜ್ ಬಳಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾಾನದ ಕನಕ ಗುರುಪೀಠದಲ್ಲಿ ಜ.12 ರಿಂದ 14 ರವರೆಗೆ ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಪೂಜಾರಿಗಳಾಗ ಬಯಸುವ ಸರ್ವ ಸಮಾಜದವರಿಗೂ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಗುರುಪೀಠಾಧಿಪತಿ ಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಾಮೀಜಿ ತಿಳಿಸಿದರು
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಈ ವರ್ಷ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ಮುನ್ನವೇ ಶ್ರೀಮಠದಿಂದ ಭಕ್ತರಿಗೆ ಜ್ಞಾನ ಉಣಬಡಿಸುವ ಸಲುವಾಗಿ ಸಿದ್ಧಪರಂಪರೆ, ಹಾಲುಮತ ಪಂಥ ಸೇರಿ ಬಹುಸಂಸ್ಕೃತಿಗಳನ್ನು ಪರಿಚಯಿಸುವ ಉದ್ದೇಶದಿಂದ 3 ದಿನ ಸಾಹಿತ್ಯ ಸಮ್ಮೇಳನ ಹಮ್ಮಿಿಕೊಂಡಿದ್ದಾಾಗಿ ಹೇಳಿದರು.
ಜ.12 ರಂದು ಹೈದ್ರಾಾಬಾದ್ನ ಇತಿಹಾಸಕಾರರು, ವಿದ್ವಾಾಂಸರು ಉದ್ಘಾಾಟಿಸಿ ಹಾಲುಮತವು ಒಂದು ಪಂಥವೇ ಎನ್ನುವ ವಿಚಾರವನ್ನು ಪ್ರಸ್ತುತ ಪಡಿಸಲಿದ್ದಾಾರೆ. ಜ.13 ರಂದು ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾಾರಕನಾಥ ವಿಚಾರ ಮಂಡಿಸಿದರೆ. ಜ.14 ರಂದು ಕನ್ನಡ ಪ್ರಾಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉಪನ್ಯಾಾಸ ನೀಡಲಿದ್ದಾಾರೆ ಎಂದರು.
ಇದುವರೆಗೆ ಹೆಚ್ಚು ಜನ ಸಾಹಿತ್ಯಾಾಸಕ್ತರು ನೋಂದಣಿ ಮಾಡಿಸಿದ್ದು, ಸರ್ವ ಸಮುದಾಯದ ಪೂಜಾರಿಗಳಿಗೆ ತರಬೇತಿಗಾಗಿ 150 ಕ್ಕೂ ಹೆಚ್ಚು ಜನ ಹೆಸರನ್ನು ನೋಂದಾಯಿಸಿದ್ದಾರೆ. ಇದೊಂದು ರಾಜಕೀಯೇತರ ಕಾರ್ಯಕ್ರಮವಾಗಿದ್ದು ಭಕ್ತರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.
ೆಬ್ರುವರಿ 15ರಂದು ಮಹಾಶಿವರಾತ್ರಿಿ ಪ್ರಯುಕ್ತ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ಸಹಸ್ರ ಶಿವಲಿಂಗ ಪೂಜೆ ಕಾರ್ಯಕ್ರಮ ನಡೆಸಲಾಗುತ್ತದೆ.1108 ಶಿವಲಿಂಗಗಳನ್ನು 1108 ದಂಪತಿಗಳು ಪೂಜಿಸಲಿದ್ದಾಾರೆ.
ಹಿಂದೆ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಆಚರಿಸಲಾಗುತ್ತಿಿತ್ತು. ಈ ವರ್ಷ ಹಾಲುಮತ ಧರ್ಮ ಸಂಸ್ಕೃತಿ ಮತ್ತು ಸಾಹಿತ್ಯಗಳ ಬಗ್ಗೆೆ ಮೂರು ದಿನಗಳ ಕಾರ್ಯಕ್ರಮ ನಡೆಯಲಿದ್ದು, ರಾಜಕೀಯೇತರವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಲಕ್ಷ್ಮಣ ತಾತಾ ಗಾಣದಾಳ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಗುಂಡಪ್ಪ ಸಾಹುಕಾರ, , ಹನುಮಂತಪ್ಪ ಜಾಲಿಬೆಂಚಿ, ಹನುಮಂತಪ್ಪ ವಕೀಲ, ಶೇಖರ ವಾರದ, ಮಹದೇವಪ್ಪ ಮಿರ್ಜಾಪುರ, ನವೀನ್ ಕುಮಾರ, ಹನುಮಂತಪ್ಪ ಮೇಟಿ, ಬಸವರಾಜ್ ಜಾಲಿಬೆಂಚಿ ನಾಗರಾಜ ಮಡ್ಡಿಿಪೇಟೆ, ಯಶವಂತ ಇನ್ನಿಿತರರಿದ್ದರು.

