ಸುದ್ದಿಮೂಲ ವಾರ್ತೆ ಕುರ್ಡಿ, ಡಿ.29:
ರಾಯಚೂರು ಗ್ರಾಾಮೀಣ ಕ್ಷೇತ್ರದ ಕುರ್ಡಿ ಗ್ರಾಾಮದ ವಿವಿಧ ಅಭಿವೃದ್ಧಿಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ದದ್ದಲ್ ಭೂಮಿ ಪೂಜೆ ನೆರವೇರಿಸಿದರು.
ಇಂದು ಗ್ರಾಾಮದಲ್ಲಿ ಕೆಕೆಆರ್ಡಿಬಿ ಮೈಕ್ರೋೋ ಯೋಜನೆಯಡಿ ಎಸ್ಸಿಎಸ್ಪಿಯಡಿ 86 ಲಕ್ಷ ಮೊತ್ತದಲ್ಲಿ 7 ಸಿಸಿ ರಸ್ತೆೆಗಳು, ಕನಕದಾಸ ವೃತ್ತದಿಂದ ಅರೋಲಿ ಮುಖ್ಯ ರಸ್ತೆೆವರೆಗೆ 1 ಕೋಟಿ ಅನುದಾನದಲ್ಲಿ ಸಿಸಿ ರಸ್ತೆೆ ಹಾಗೂ ವಾಲ್ಮೀಕಿ ಭವನದ ತಡೆಗೋಡೆ ನಿರ್ಮಾಣಕ್ಕೆೆ 22 ಲಕ್ಷ ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ಮಾಡಿದರು.
ಪರಮಪೂಜ್ಯ ಸದ್ಗುರು ಶ್ರೀ ರಾಜಯೋಗಿ ಡಿವೆಡಿಕಿ ತಾತನವರ ದಿವ್ಯ ಪ್ರಕಾಶದಲ್ಲಿ ನಡೆಯುವ ಆರಾಧನಾ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರದಲ್ಲಿ ಭಾಗವಹಿಸಿ ನೂತನ ವಿವಾಹ ಜೋಡಿಗಳಿಗೆ ಶುಭ ಕೋರಿದರು.
ಗೋರ್ಕಲ್ :
ಗೋರ್ಕಲ್ ಗ್ರಾಾಮದ ಕೆಕೆಆರ್ಡಿಬಿ ಪಿಎಂಡಿಕ್ಯೂ ಯೋಜನೆಯಡಿ ಸಿಸಿ ರಸ್ತೆೆ ಮತ್ತು ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಮಾಡಿದರು.
ಗೋರ್ಕಲ್ ಗ್ರಾಾಮದ ಶ್ರೀ ದ್ಯಾಾವಮ್ಮ ದೇವಿ ಜಾತ್ರೆೆ ಅಂಗವಾಗಿ ತಾಲೂಕ ಮಟ್ಟದ ಅಧಿಕಾರಿಗಳ ವಿಶೇಷ ಪೂರ್ವಭಾವಿ ಸಭೆಯಲ್ಲಿ ಶಾಸಕ ದದ್ದಲ್ ಬಸನಗೌಡ ಮಾತನಾಡಿ ಗ್ರಾಾಮಸ್ಥರಿಗೆ, ಜಾತ್ರೆೆಗೆ ಬರುವ ಹೊರಗಿನವರಿಗೆ ಶುದ್ಧ ಕುಡಿಯುವ ನೀರು, ಬೀದಿ ದೀಪ, ಚರಂಡಿ ನಿರ್ಮಾಣ, ಸಿಸಿ ರಸ್ತೆೆ, ಶೌಚಾಲಯ ನಿರ್ಮಾಣ ಮಾಡಿ ಮೂಲಭೂತ ಸೌಕರ್ಯ ಒದಗಿಸಲು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕುರ್ಡಿ,ಗೋರ್ಕಲ್ ಗ್ರಾಾ.ಪಂ. ಅಧ್ಯಕ್ಷರು, ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ, ಪಿಡಿಓಗಳು ವಿವಿಧ ತಾಲೂಕು ಇಲಾಖೆ ಅಧಿಕಾರಿಗಳು, ಆಯಾ ಗ್ರಾಾಮದ ಮುಖಂಡರು, ಪಕ್ಷದ ನಾಯಕರು, ಕಾರ್ಯಕರ್ತರು ಸೇರಿದಂತೆ ಇತರರಿದ್ದರು.
ಗೋರ್ಕಲ್ ದ್ಯಾವಮ್ಮ ದೇವಿ ಜಾತ್ರೆ ಪೂರ್ವಭಾವಿ ಸಭೆ ಕುರ್ಡಿ : ವಿವಿಧ ಕಾಮಗಾರಿಗೆ ಶಾಸಕ ದದ್ದಲ್ ಚಾಲನೆ

