ಸುದ್ದಿಮೂಲ ವಾರ್ತೆ ಬೀದರ್, ಡಿ.29:
ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು ಆಯುಕ್ತಾಾಲಯದಿಂದ ಆಯೋಜಿಸಲಾಗಿದ 70ನೇ ಕನ್ನಡ ರಾಜ್ಯೋೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಪಾಲಿಕ್ಲಿಿನಿಕ್ ಸ್ಪರ್ಧೆಯಲ್ಲಿ ಬೀದರ ಜಿಲ್ಲೆಯ ಪಶು ಇಲಾಖೆಯ ಪಶುವೈದ್ಯಕೀಯ ಪಾಲಿಕ್ಲಿಿನಿಕ್ (ಜಿಲ್ಲಾ ಪಶು ಆಸ್ಪತ್ರೆೆ)ಗೆ ಮೂರನೆಯ ಅತ್ಯುತ್ತಮ ಪಾಲಿಕ್ಲಿಿನಿಕ್ ಪ್ರಶಸ್ತಿಿ ಎಂದು ಘೋಷಿಸಲಾಗಿದ್ದು, ಸದರಿ ಪ್ರಶಸ್ತಿಿ ಮತ್ತು ಪ್ರಶಂಸನಾ ಪತ್ರವನ್ನು ಪಾಲಿಕ್ಲಿಿನಿಕ್ ಬೀದರನ ಮಾನ್ಯ ಉಪನಿರ್ದೇಶಕ ಡಾ.ರವಿಂದ್ರಕುಮಾರ ಭೂರೆರವರಿಗೆ ನೀಡಿ ಬೆಂಗಳೂರಿನಲ್ಲಿ ಗೌರವಿಸಲಾಯಿತು.
ರಾಜ್ಯಮಟ್ಟದಲ್ಲಿ ಆಯ್ಕೆೆ ಪ್ರಕ್ರಿಿಯೆಯ ಮೂಲಕ ನೀಡಲಾದ ಈ ಪ್ರಶಸ್ತಿಿಯು ಪಾಲಿಕ್ಲಿಿನಿಕ್ ಬೀದರನ ಮೂಲಸೌಕರ್ಯಗಳು, ಸ್ವಚ್ಛತೆ , ಆಧುನಿಕ ಸೌಲಭ್ಯಗಳು ಹಾಗೂ ವಿವಿಧ ರೋಗಗ್ರಸ್ತ ಪ್ರಾಾಣಿಗಳ ಗುಣಮಟ್ಟದ ಚಿಕಿತ್ಸೆೆ, ಶಸಚಿಕಿತ್ಸೆೆಯನ್ನು ನೀಡುವ ಜೊತೆಗೆ ಸಾರ್ವಜನಿಕರಿಗೆ ನಿರಂತರ ಪಶುವೈದ್ಯಕೀಯ ಸೇವೆ ಗುರುತಿಸಿ ಈ ಗೌರವ ನೀಡಲಾಗಿದೆ.
ಪಾಲಿಕ್ಲಿನಿಕ್ ಬೀದರಗೆ ರಾಜ್ಯಮಟ್ಟದ ಅತ್ಯುತ್ತಮ ಪಶುವೈದ್ಯಕೀಯ ಸೇವಾ ಪ್ರಶಸ್ತಿ

