ಸುದ್ದಿಮೂಲ ವಾರ್ತೆ ಮಸ್ಕಿ, ಡಿ.29:
ಪಿಯುಸಿ ಲಿತಾಂಶ ಸುಧಾರಣೆ ನಿಟ್ಟಿಿನಲ್ಲಿ ವಿದ್ಯಾಾರ್ಥಿಗಳು ಶಿಸ್ತುಬದ್ಧ ಅಧ್ಯಯನಕ್ಕೆೆ ಒತ್ತು ನೀಡಬೇಕು ಎಂದು ಮಸ್ಕಿಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಪಿಯು ಲಿತಾಂಶ ಬಲವರ್ಧನೆ ಹಾಗೂ ವೃತ್ತಿಿ ಮಾರ್ಗದರ್ಶನ ಕುರಿತು ಏರ್ಪಡಿಸಿದ್ದ ಕಾರ್ಯಾಗಾರಕ್ಕೆೆ ಚಾಲನೆ ನೀಡಿ ಮಾತನಾಡಿದರು.
ಆಧುನಿಕ ಯುಗದಲ್ಲಿ ವಿದ್ಯಾಾರ್ಥಿಗಳ ಮುಂದೆ ಅನೇಕ ವೃತ್ತಿಿಗಳ ಆಯ್ಕೆೆಗಳಿದ್ದು, ಉಜ್ವಲ ಭವಿಷ್ಯಕ್ಕೆೆ ಪಿಯುಸಿ ಲಿತಾಂಶ ಮಾನದಂಡವಾಗಿರಲಿದೆ. ಹೀಗಾಗಿ ವಿದ್ಯಾಾರ್ಥಿಗಳು ಸಮಯ ವ್ಯರ್ಥ ಮಾಡದೇ ಪರೀಕ್ಷೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಮುಂದೆ ಆಯ್ಕೆೆ ಮಾಡಬೇಕಾದ ಕೋರ್ಸ್ಗಳ ಕುರಿತು ಅಗತ್ಯ ಮಾರ್ಗದರ್ಶನ ನೀಡಲು ಸಂಪನ್ಮೂಲ ವ್ಯಕ್ತಿಿಗಳಿಂದ ಕಾರ್ಯಾಗಾರ ಏರ್ಪಡಿಸಲಾಗುವುದು. ಮಸ್ಕಿಿ ಕೇಂದ್ರ ಸರ್ಕಾರದ ಮಹತ್ವಾಾಕಾಂಕ್ಷೆ ತಾಲೂಕು ಕಾರ್ಯಕ್ರಮವಾಗಿರುವುದರಿಂದ ಎಸ್ಸೆೆಸ್ಸೆೆಲ್ಸಿಿ, ಪಿಯುಸಿ ಲಿತಾಂಶದ ಬಗ್ಗೆೆ ಹೆಚ್ಚಿಿನ ನಿಗಾ ವಹಿಸಲಾಗಿದೆ. ವಿದ್ಯಾಾರ್ಥಿಗಳು, ಉಪನ್ಯಾಾಸಕರು ಒಗ್ಗೂಡಿ ಪರೀಕ್ಷೆ ಎದುರಿಸುವ ಕುರಿತು ನೀಲನಕ್ಷೆ ರೂಪಿಸಿದಾಗ ಉತ್ತಮ ಲಿತಾಂಶ ಪಡೆಯಬಹುದಾಗಿದೆ. ವಿದ್ಯಾಾರ್ಥಿಗಳು ಸಾಮಾಜಿಕ ಮಾಧ್ಯಮ, ದೂರದರ್ಶನ ವೀಕ್ಷಣೆಯಿಂದ ದೂರ ಇದ್ದು, ಗರಿಷ್ಠ ಸಮಯ ಓದಿಗೆ ಮೀಸಲು ಇಡಬೇಕು. ಗುಂಪು ಅಧ್ಯಯನಕ್ಕೆೆ ಒತ್ತು ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿಿ ಮಂಜುಳಾ ಮಾತನಾಡಿ, ಪರೀಕ್ಷೆ ಎದುರಿಸಲು ಬೇಕಾದ ಮಾನಸಿಕ ದೃಢತೆ ಕಾಯ್ದುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತು ವಿವರಿಸಿ, ಅಗತ್ಯ ಇದ್ದಲ್ಲಿ ಮಾನಸಿಕ ತಜ್ಞರ ಮಾರ್ಗದರ್ಶನ ಪಡೆಯಲು ತಿಳಿಸಿದರು.
ಈ ವೇಳೆ ವಿದ್ಯಾಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ಕಾಲೇಜು ಪ್ರಾಾಚಾರ್ಯ ಆರ್.ಕೆ. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಾಸಕರಾದ ಮಹಾಂತೇಶ್ ಮಸ್ಕಿಿ, ರಂಗಪ್ಪ, ಕಾರ್ಯಕ್ರಮ ಸಂಯೋಜಕರಾದ ಮಹತ್ವಾಾಕಾಂಕ್ಷೆ ತಾಲೂಕು ೆಲೋ ಕಲ್ಲೇಶ ಶಿದ್ರಾಾಹುತರ ಇತರರಿದ್ದರು.
‘ಪಿಯುಸಿ ಲಿತಾಂಶ ಸುಧಾರಣೆಗೆ ಪೂರ್ವ ಸಿದ್ಧತೆ ಅಗತ್ಯ’

