ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಾಧ್ಯಕ್ಷ ವೀರನಗೌಡ ಲೆಕ್ಕಿಿಹಾಳ, ವಿಧಾನ ಪರಿಷತ್ ಮಾಜಿ ಶಾಸಕ ಎನ್.ಶಂಕ್ರಪ್ಪ ಅವರು, ಪಕ್ಷದ ಬಲವರ್ಧನೆಗೆ ನೂತನ ಪದಾಧಿಕಾರಿಗಳು ಪರಿಶ್ರಮಿಸಬೇಕು. ಕೇವಲ ಪದವಿ ಅನುಭವಿಸಲು ಬಿಜೆಪಿಯಲ್ಲಿ ಅವಕಾಶವಿಲ್ಲಘಿ. ನೀಡಿದ ಪದವಿ ಅದಕ್ಕನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ಪಕ್ಷದ ಸಂಘಟನೆಗೆ ಹೆಚ್ಚಿಿನ ಸಮಯ ನೀಡಿ ಜಿಲ್ಲೆೆಯಲ್ಲಿ ಪಕ್ಷವನ್ನು ಮತ್ತಷ್ಟು ಸದೃಢವಾಗಿ ಸಂಘಟಿಸಲು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಾ ಉಪಾಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಲಿಂಗರಾಜ ಹೂಗಾರ ಮಲ್ಲಿಕಾರ್ಜುನ ಜಕ್ಕಲದಿನ್ನಿಿಘಿ, ಚಂದ್ರಶೇಖರ ಪಾಟೀಲ್ ಗೂಗೆಬಾಳ್, ವರಪ್ರಸಾದಗೌಡ ತಲಮಾರಿ, ಟಿ.ಶ್ರೀನಿವಾಸರೆಡ್ಡಿಿ, ಬಿ.ಗೋವಿಂದ, ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಜಲ್ದಾಾರ, ಸಂತೋಷ ರಾಜಗುರು, ಜಂಬಣ್ಣ ನೀಲೋಗಲ್, ಕಾರ್ಯದರ್ಶಿಗಳಾಗಿ ಬಸ್ಸಮ್ಮ ಯಾದವ್, ಶಾರದಾ ರಾಥೋಡ, ಶಿವರಾಜ್ ಪತ್ತೇಪೂರ, ಕೆ.ನಾಗಲಿಂಗಸ್ವಾಾಮಿ, ಚಂದಪ್ಪ ಬುದ್ದಿನ್ನಿಿ, ವಾಣಿಶ್ರೀ, ಶೈಲಜಾ ಷಡಾಕ್ಷರಪ್ಪ, ಟಿ.ಸುಬ್ಬಾಾರಾವ್, ವಕ್ತಾಾರ ಸಿದ್ಧನಗೌಡ ನೆಲಹಾಳ್, ಕಾರ್ಯಾಲಯದ ಕಾರ್ಯದರ್ಶಿ ಮಂಜುನಾಥ ಸೇರಿ ಹಲವರಿದ್ದರು.
ಬಿಜೆಪಿ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಪಕ್ಷ ಸದೃಢವಾಗಿ ಸಂಘಟಿಸಲು ಸಲಹೆ

