ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.29:
ಕಾಂಗ್ರೆೆಸ್ ಸಂಸ್ಥಾಾಪನಾ ದಿನಾಚರಣೆ ನಿಮಿತ್ತ ಕಾಂಗ್ರೆೆಸ್ ಪಕ್ಷಕ್ಕಾಾಗಿ ನಿಸ್ವಾಾರ್ಥ ಸೇವೆ ಸಲ್ಲಿಸಿದ ಹಿರಿಯ ನಾಯಕರನ್ನು ಗೌರವಪೂರ್ವಕವಾಗಿ ಸನ್ಮಾಾನಿಸಲಾಯಿತು.
ಜಿಲ್ಲಾ ಕಾಂಗ್ರೆೆಸ್ ಸಮಿತಿ ವತಿಯಿಂದ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕಾಂಗ್ರೆೆಸ್ ಸಂಸ್ಥಾಾಪನಾ ದಿನಾಚರಣೆ ಹಮ್ಮಿಿಕೊಳ್ಳಲಾಗಿತ್ತು. ದೇಶದ ಸ್ವಾಾತಂತ್ರ್ಯ ಹೋರಾಟದ ಪಥದಿಂದ ಆರಂಭಿಸಿ, ಇಂದಿನ ಸಾಮಾಜಿಕ ನ್ಯಾಾಯದ ಹಾದಿವರೆಗೆ ಕಾಂಗ್ರೆೆಸ್ ಪಕ್ಷ ನಡೆದು ಬಂದ ಮೌಲ್ಯಗಳು, ತ್ಯಾಾಗ ಮತ್ತು ಅವಿರತ ಸೇವಾ ಪರಂಪರೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಆರ್. ಬಿ. ತಿಮ್ಮಾಾಪುರ, ಡಾ.ಶರಣಪ್ರಕಾಶ ಪಾಟೀಲ, ಶಾಸಕ ಅಲ್ಲಂಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಜರ್ ಅಲ್ಲಂ ಖಾನ್, ಜೆಸ್ಕಾಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಮುಖಂಡರಾದ ನೀಲಕಂಠರಾವ್ ಮೂಲಗೆ, ಡಾ.ಕಿರಣ್ ದೇಶಮುಖ್, ರಾಜೀವ್ ಜಾನೆ, ಶಿವಾನಂದ್ ಹೊನಗುಂಟಿ, ಈರಣ್ಣ ಪಾಟೀಲ್ ಝಳಕಿ, ರೇಣುಕಾ ಸಿಂಗೆ ಸೇರಿದಂತೆ ಕಾಂಗ್ರೆೆಸ್ ಪಕ್ಷದ ಕಾರ್ಯಕರ್ತರು ಇದ್ದರು.
ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ : ಹಿರಿಯ ನಾಯಕರಿಗೆ ಸನ್ಮಾನ

