ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ರಾಯಚೂರು ರವರಿಂದ ಕರ್ನಾಟಕ ಗ್ರಾಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆ-2025) ನಿಯಮಗಳು 1996 ನಿಯಮ 08 ರಡಿ ರಾಯಚೂರು ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆ ಅಧಿಸೂಚನೆ ಹೊರಡಿಸಲಾಗಿದೆ.
ಪ್ರಸ್ತುತ ನಗರ ಸ್ಥಳೀಯ ಸಂಸ್ಥೆೆಗಳಿಅದ 06 ಸದಸ್ಯರನ್ನು (ಪುರಸಭೆ, ಮಸ್ಕಿಿ ಮತ್ತು ಪಟ್ಟಣ ಪಂಚಾಯತ್, ಕವಿತಾಳ, ತುರವಿಹಾಳ, ಬಳಗಾನೂರು ಮತ್ತು ಸಿರವಾರ ಮತಕ್ಷೇತ್ರ ಒಳಗೊಂಡಂತೆ) ಆಯ್ಕೆೆ ಮಾಡಬೇಕಾಗಿರುತ್ತದೆ. ಈ ಕುರಿತು ನಾಮಪತ್ರ ಸಲ್ಲಿಸುವ ದಿನಾಂಕ 30.12.2025 ರಿಂದ 12.01.2026 ರವರೆಗೆ ನಾಮಪತ್ರ ಸಲ್ಲಿಸುವುದು, ನಾಮಪತ್ರ ಪರಿಶೀಲನೆ ದಿನಾಂಕ 13.01.2026 ಹಾಗೂ ನಾಮಪತ್ರ ಹಿಂತೆದುಕೊಳ್ಳುವ ಕೊನೆಯ ದಿನಾಂಕ 16.01.2026 ಚುನಾವಣೆ ದಿನಾಂಕ 22.01.2026 ರಂದು ಜರುಗಿಸಲಾಗುವುದು ಎಂದು ರಾಯಚೂರು ಜಿಲ್ಲಾ ಪಂಚಾಯತ್ ಪ್ರಕಟಣೆ ತಿಳಿಸಿದೆ.

