ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.29:
ಪಟ್ಟಣದಲ್ಲಿ ಪೊಲೀಸ್ ಠಾಣೆಯ ವತಿಯಿಂದ ಪಿಎಸ್ಐ ಎರಿಯಪ್ಪ ಮಾರ್ಗದರ್ಶನದಲ್ಲಿ ಸೋಮವಾರ ಅನೇಕ ಅಭರಣಗಳ ಅಂಗಡಿಗಳಿಗೆ ನೋಟಿಸ್ ನೀಡಲಾಯಿತು.
ಎಎಸ್ಐ ಸಿದ್ದಪ್ಪ ಮಾತನಾಡಿ, ಜಿಲ್ಲಾ ಪೊಲೀಸ್ ಅಧೀಕ್ಷಕರ ರಾಯಚೂರು ರವರ ಆದೇಶದಂತೆ ಇತ್ತಿಿಚಿನ ದಿನಗಳಲ್ಲಿ ಕಳ್ಳತನವಾಗುತ್ತಿಿರುವ ಬಗ್ಗೆೆ ಗಮನಕ್ಕೆೆ ಬಂದಿದ್ದು, ಎರಡು ವಿಭಿನ್ನ ಕಳ್ಳತನ ಗ್ಯಾಾಂಗ್ ಗಳಾದ ರಾಜಸ್ಥಾಾನ ಮತ್ತು ಉತ್ತರಪ್ರದೇಶ ಗ್ಯಾಾಂಗ್ಗಳು ಚಟುವಟಿಕೆಯಲ್ಲಿದ್ದು, ಆಭರಣ ಅಂಗಡಿಗಳ ಮಾಲಿಕರು ಯಾವುದೇ ಭದ್ರತಾ ವ್ಯವಸ್ಥೆೆ ಕೈಗೊಳ್ಳದೆ 30-40 ಕೋಟಿ ಬೆಲೆ ಬಾಳುವ ಅಭರಣಗಳನ್ನು ಅಂಗಡಿಯಲ್ಲಿ ಇಟ್ಟುಕೊಳ್ಳುತ್ತಿಿರುವುದು ಕಂಡು ಬಂದಿದ್ದು, ಪೊಲೀಸ್ ಠಾಣಾ ವ್ಯಾಾಪ್ತಿಿಯಲ್ಲಿ ಬರುವ ಆಭರಣ ಅಂಗಡಿಗೆ ಭೇಟಿ ನೀಡಿ, ವಿಶೇಷ ಕಾರ್ಯಾಚರಣೆ ನಡೆಸಿ ಅಲ್ಲಿರುವ ಭದ್ರತಾ ವ್ಯವಸ್ಥೆೆ ಪರಿಶೀಲಿಸಿ ಸೂಕ್ತ ಭದ್ರತಾ ವ್ಯವಸ್ಥೆೆ ಮಾಡಿಕೊಳ್ಳುವಂತೆ ಅಂಗಡಿ ಮಾಲಿಕರಿಗೆ ನೋಟೀಸ್ ನೀಡುವಂತೆ ಸೂಚಿಸಿರುತ್ತಾಾರೆ. ಆದ್ದರಿಂದ ಮೌಲ್ಯಯುತ ವಸ್ತುಗಳ ಭದ್ರತೆ, ಸುರಕ್ಷತೆಯ ದೃಷ್ಟಿಿಯಿಂದ ಸಾರ್ವಜನಿಕ ಸುರಕ್ಷತೆ ಅಧಿನಿಯಮ-2017 ರೀತ್ಯ ಸುರಕ್ಷತಾ ಕ್ರಮಗಳನ್ನು ಕೈಕೊಳ್ಳುವುದು ಅವಶ್ಯವಿದ್ದು, ಬಂಗಾರ ಅಂಗಡಿಯ ಒಳಗಡೆ ಮತ್ತು ಹೊರಗಡೆ ಸಿಸಿ ಟಿವಿ ಕ್ಯಾಾಮೆರಾಗಳನ್ನು ಅಳವಡಿಸಿಕೊಳ್ಳುವದು, ಅಂಗಡಿಯ ಬಾಗಿಲು ಕಬ್ಬಿಿಣದಿಂದ ಗಟ್ಟಿಿಮುಟ್ಟಾಾಗಿ ಇರಬೇಕು, ಅಂಗಡಿಯನ್ನು ಬಂದ್ ಮಾಡಿಕೊಂಡು ಹೋಗುವಾಗ ಭಾರಿ ಬೆಲೆಬಾಳುವ ಆಭರಣಗಳು ಇದ್ದರೆ ಅಂತಹವುಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಕು, ಅನುಮಾನಸ್ಪದ ವ್ಯಕ್ತಿಿಗಳು ಕಂಡು ಬಂದರೆ ಪೊಲೀಸ್ ಠಾಣೆಗೆ ಇಲ್ಲವೇ 112 ಪೊಲೀಸ್ ವಾಹನಕ್ಕೆೆ ಕರೆ ಮಾಡಿ ಮಾಹಿತಿ ನೀಡಬೇಕು, ಬಂಗಾರ ಅಂಗಡಿಗಳಲ್ಲಿ ಸಾರ್ವಜನಿಕ ಸುರಕ್ಷತೆ ಅಧಿನಿಯಮ-2017 ಕಲಂ 3ರ ರೀತ್ಯ ಸಿಸಿಟಿವಿ ಅಳವಡಿಕೆಯಂತಹ ಸುರಕ್ಷತಾ ಕ್ರಮಗಳನ್ನು ಕೈಕೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ದೇವಪ್ಪ ಮತ್ತು ರೇವಣಸಿದ್ದಪ್ಪ ಹಾಗೂ ಅಭರಣ ಅಂಗಡಿಗಳ ಮಾಲೀಕರು ಇದ್ದರು.
ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ

