ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.30:
ಇತ್ತೀಚಿಗೆ ಹುಟ್ಟಿಿದ ಮಗುವಿನ ಹೊಟ್ಟೆೆಯಲ್ಲಿ ಕರುಳುಗಳು ಹೊರಗಡೆ ಇದ್ದವು. ಈ ಮಗುವಿಗೆ ಚಿಕಿತ್ಸೆೆಗಾಗಿ ಹುಬ್ಬಳ್ಳಿಿ ಕಿಮ್ಸ್ ಗೆ ಝೀರೋ ಟ್ರಾಾಫಿಕ್ ಮಾಡಿ ಕೇವಲ ಒಂದು ತಾಸಿನಲ್ಲಿ ಹುಬ್ಬಳ್ಳಿಿಗೆ ಮಗುವನ್ನು ಮುಟ್ಟಿಿಸಿದ್ದರು. ಆದರೆ ಈ ಪ್ರಯತ್ನದ ನಂತರವೂ ಮಗು ಜೀವಂತವಾಗಿ ಉಳಿಯಲಿಲ್ಲ.
ಶನಿವಾರ ಸಂಜೆ ಗುತ್ತೂರಿನ ಮಲ್ಲಪ್ಪ ಹಾಗು ವಿಜಯಕ್ಷ್ಮಿಿ ಎಂಬ ದಂಪತಿಗಳಿಗೆ ಕುಕನೂರು ಆಸ್ಪತ್ರೆೆಯಲ್ಲಿ ಗಂಡು ಮಗು ಜನನವಾಗಿತ್ತು. ಈ ಮಗುವಿನ ಹೊಟ್ಟೆೆಯಲ್ಲಿರುವ ಕರುಳುಗಳು ಹೊರಗಡೆಯೇ ಇದ್ದವು. ಈ ಕಾರಣಕ್ಕಾಾಗಿ ಮಗುವನ್ನು ಕೊಪ್ಪಳ ಜಿಲ್ಲಾಾಸ್ಪತ್ರೆೆಗೆ ದಾಖಲಿಸಿದ್ದರು. ಇಲ್ಲಿ ಶಸಚಿಕಿತ್ಸೆೆ ಸೌಲಭ್ಯವಿಲ್ಲದ ಕಾರಣ ತಕ್ಷಣ ಹುಬ್ಬಳ್ಳಿಿಗೆ ಕಳುಹಿಸಬೇಕಿತ್ತು. ಈ ಕಾರಣಕ್ಕಾಾಗಿ ವೈದ್ಯರು. ಪೊಲೀಸ್ ಹಾಗೂ ಅಂಬ್ಯುಲೆನ್ಸ್ ಡ್ರೈವರ್ಗಳು ಸಾಹಸ ಪಟ್ಟು ಮಗುವನ್ನು ಹುಬ್ಬಳ್ಳಿಿಯ ಕಿಮ್ಸ ಗೆ ದಾಖಲಿಸಿ ಆಪರೇಷನ್ ಮಾಡಿಸಿದ್ದರು. ಆಪರೇಷನ್ ಮಾಡಿದ ನಂತರ 2 ದಿನಗಳ ನಂತರ ಚಿಕಿತ್ಸೆೆ ಲಕಾರಿಯಾಗದೆ ಮಗು ಮೃತವಾಗಿದೆ.
ವೈದ್ಯರು. ಕುಟುಂಬದವರು. ಶೂಶ್ರಷಕರು. ಮಾಡಿದ ಪ್ರಯತ್ನ ವಿಲವಾಗಿದೆ. ಈ ಮೊದಲೇ ಮಗುವಿನ ಸ್ಥಿಿತಿ ಚಿಂತಾಜನಕವಾಗಿತ್ತು. ಮಗುವನ್ನು ಉಳಿಸಿಕೊಳ್ಳಲು ಪೊಲೀಸರು ಪ್ರಯತ್ನ ಮಾಡಿದ್ದರು.

