ಸುದ್ದಿಮೂಲ ವಾರ್ತೆ ಯಾದಗಿರಿ , ಡಿ.30:
ಇಲ್ಲಿನ ಜಿಲ್ಲಾ ಕ್ರೀೆಡಾಂಗಣದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ 5 ನೇ ರಾಜ್ಯ ಮಟ್ಟದ ವೈಜ್ಞಾನಿಕ ನಮ್ಮೇಳನಕ್ಕೆೆ ಮಂಗಳವಾರ ಸಂಜೆ ಸಂಭ್ರಮದ ತೆರೆ ಕಂಡಿತ್ತು.
ಪರಿಷತ್ತಿಿನ ಸಂಸ್ಥಾಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ನೇತೃತ್ವದ ತಂಡ, ಮಾನವ ಬಂಧುತ್ವ ವೇದಿಕೆ ಮತ್ತು ವಿವಿಧ ಸಂಘಟನೆಗಳ ಸಹಕಾರದಿಂದ ಆಯೋಜಿಸಲಾಗಿದ್ದ ಸಮ್ಮೇಳನವು ಸರ್ವಾಧ್ಯಕ್ಷ ವಿಶ್ವಾಾರಾಧ್ಯ ಸತ್ಯಂಪೇಟೆ ಅವರ ಉಪಸ್ಥಿಿತಿ ಬಹು ಅಚ್ಚುಕಟ್ಟಾಾಗಿ, ಸಮಯ ಪಾಲನೆ, ಶಿಸ್ತಿಿನಿಂದ ಜರುಗಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕಲಬುರಗಿ ಶರಣಬಸವೇಶ್ವರ ವಿದ್ಯಾಾ ಸಂಸ್ಥೆೆಯ ಚೇರ್ ಪರ್ಸನ್ ಡಾ.ದಾಕ್ಷಾಯಣಿ ಎಸ್ ಅಪ್ಪ ಮಾತನಾಡಿ, ಇಂದು ನಾವೇಲ್ಲರೂ ವೈಜಾರಿಕ ಬದುಕಿನಡೆ ನಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ತಿಳಿದು ನಡೆಯಬೇಕೆಂದರು. ಈ ನಿಟ್ಟಿಿನಲ್ಲಿ ಡಾ.ಶರಣಬಸವಪ್ಪ ಅಪ್ಪ ಅವರು ಸಾಕಷ್ಟು ವಿಚಾರಗಳನ್ನು ಆಗಾಗ ಹೇಳುವ ಮೂಲಕ ಅಪಾರ ಮಕ್ಕಳಿಗೆ ಜ್ಞಾನ ನೀಡಿದ್ದಾರೆಂದರು.
ಶರಣಬಸವೇಶ್ವರ ವಿದ್ಯಾಾ ಸಂಸ್ಥೆೆ ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ.ಉಮಾ ದೇಶಮುಖ, ಡಾ.ಹುಲಿಕಲ್ ನಟರಾಜ್, ಸಮ್ಮೇಳನಾಧ್ಯಕ್ಷ ವಿಶ್ವಾಾರಾಧ್ಯ ಸತ್ಯಂಪೇಟೆ ಸೇರಿದಂತೆ ಇತರರಿದ್ದರು.

