ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ರಾಯಚೂರು ನಗರದ ಆಡಳಿತದ ಗುಣಮಟ್ಟ ಮತ್ತು ಸೇವಾ ವಿತರಣೆಯನ್ನು ಉನ್ನತ ಮಟ್ಟಕ್ಕೇರಿಸುವ ದಿಶೆಯಲ್ಲಿ, ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಎಲ್ಲ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ವಿಶೇಷ ಎರಡು-ದಿನದ ಸಾಮರ್ಥ್ಯ ವೃದ್ಧಿಿ (ಕೆಪಾಸಿಟಿ ಬಿಲ್ಡಿಿಂಗ್) ತರಬೇತಿ ಕಾರ್ಯಕ್ರಮ ಈ ವಾರ ಆಯೋಜಿಸಲಾಗಿದೆ.
ಸಾರ್ವಜನಿಕರೊಂದಿಗಿನ ಸಂವಹನ ಮತ್ತು ಸೇವೆಯಲ್ಲಿ ಪಾರದರ್ಶಕತೆ, ಸಂವೇದನಾಶೀಲತೆ ಹಾಗೂ ಪರಿಣಾಮಕಾರಿತ್ವವನ್ನು ಗಮನಾರ್ಹವಾಗಿ ಹೆಚ್ಚಿಿಸುವುದು ಈ ತರಬೇತಿಯ ಗುರಿಯಾಗಿದೆ ಎಂದು ಆಯುಕ್ತರು ತಿಳಿಸಿದ್ದಾಾರೆ. ಪಾಲಿಕೆಯ ಕಂದಾಯ, ಆಡಳಿತಾತ್ಮಕ, ಆರೋಗ್ಯಘಿ, ತಾಂತ್ರಿಿಕ ಸೇರಿ ಎಲ್ಲ ವಿಭಾಗದ ಸಿಬ್ಬಂದಿಗೂ ತರಬೇತಿಗೆ ನಿರ್ಧರಿಸಲಾಗಿದೆ.
ತರಬೇತಿಯು ಸಿಬ್ಬಂದಿಯ ಸಾಮರ್ಥ್ಯ ಹೆಚ್ಚಿಿಸಿ, ನಿರ್ಧಾರ ಸಾಮರ್ಥ್ಯ ಮತ್ತು ಸೇವಾ ಮನೋಭಾವ ಬಲಪಡಿಸುವುದರ ಮೂಲಕ, ಮಹಾನಗರ ಪಾಲಿಕೆಯ ಆಡಳಿತ ಇನ್ನಷ್ಟು ಪಾರದರ್ಶಕ, ಜನಪರ ಮತ್ತು ಪರಿಣಾಮಕಾರಿಯಾಗಿ ಮಾರ್ಪಡಿಸಲು ನೆರವಾಗುವ ನಂಬಿಕೆ ನಮಗಿದೆ ಎಂದು ಆಯುಕ್ತ ಜುಬೀನ್ ಮಹೋಪಾತ್ರ ತಿಳಿಸಿದ್ದಾಾರೆ.
50ಕ್ಕೂ ಹೆಚ್ಚು ಸಿಬ್ಬಂದಿ ಸದಸ್ಯರನ್ನು ಇದಕ್ಕೂ ಮುಂಚೆಯೇ ಇಂದೋರ, ಮೈಸೂರು ಮತ್ತು ಆಡಳಿತ ತರಬೇತಿ ಸಂಸ್ಥೆೆ ಗಳಿಗೆ ತರಬೇತಿಗಾಗಿ ಕಳುಹಿಸಲಾಗಿತ್ತು. ಎಲ್ಲ ಶಾಖೆಯಿಂದ ಕಚೇರಿ ಸಿಬ್ಬಂದಿ, ಫೀಲ್ಡ್ ಸಿಬ್ಬಂದಿ, ಡಿ-ಗ್ರೂಪ್ ಸಿಬ್ಬಂದಿ, ಪೌರಕಾರ್ಮಿಕರು ವರೆಗೆ ಎಲ್ಲರೂ ಇದರ ಭಾಗವಾಗಿದ್ದಾರೆ ಮತ್ತು ಸಾರ್ವಜನಿಕ ಕೇಂದ್ರಿಿತ ಆಡಳಿತ, ಪ್ರಾಾಮಾಣಿಕತೆ ಮತ್ತು ಸಮಾಜದತ್ತ ಕಾಳಜಿಯನ್ನು ಬಲಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದ್ದಾಾರೆ.
ಪಾಲಿಕೆ ಸಿಬ್ಬಂದಿಗೆ ಸಾಮರ್ಥ್ಯ ವೃದ್ಧಿ ತರಬೇತಿ ಶೀಘ್ರ – ಆಯುಕ್ತ

