ಸುದ್ದಿಮೂಲ ವಾರ್ತೆ ಕವಿತಾಳ, ಡಿ.30:
ಕೊಪ್ಪಳ ಜಾತ್ರೆೆಗೆ ಬರುವ ಭಕ್ತರಿಗಾಗಿ ಸಮೀಪದ ಬಾಗಲವಾಡ ಗ್ರಾಾಮದಲ್ಲಿ ಗ್ರಾಾಮಸ್ಥರು ಬೆಲ್ಲದ ಲಡ್ಡು ತಯಾರಿಸಿದರು.
ಗ್ರಾಾಮದ ಶಾಂಭವಿ ದೇವಿ ಮಠದಲ್ಲಿ ಲಡ್ಡು ತಯಾರಿಸುವ ಕೆಲಸದಲ್ಲಿ ಉತ್ಸಾಾಹದಿಂದ ಭಾಗವಹಿಸಿದ ಮಹಿಳೆಯರು ಮೂರು ಕ್ವಿಿಂಟಲ್ ಲಡ್ದು ತಯಾರಿಸಿದರು. ಕಳೆದ ವರ್ಷ ಜಾತ್ರೆೆಗೆ ಶೇಂಗಾ ಹೋಳಿಗೆ ತಯಾರಿಸಿ ನೀಡಿದ್ದ ಗ್ರಾಾಮಸ್ಥರು ಈ ವರ್ಷ ಬೆಲ್ಲದ ಲಡ್ಡು ತಯಾರಿಸಿದ್ದಾರೆ.
ಮೂರು ಕ್ವಿಿಂಟಲ್ ಬೆಲ್ಲದ ಲಡ್ಡು ಮತ್ತು 5 ಕ್ವಿಿಂಟಲ್ ಅಕ್ಕಿಿಯನ್ನು ಜಾತ್ರೆೆಗೆ ಬರುವ ಭಕ್ತರ ಅನುಕೂಲಕ್ಕಾಾಗಿ ನೀಡಲಾಗುವುದು. ಜ.2 ರಂದು ಇಲ್ಲಿಂದ ಅವುಗಳನ್ನು ಕೊಪ್ಪಳಕ್ಕೆೆ ಸಾಗಿಸಲಾಗುವುದು ಎಂದು ಮುಖಂಡ ಶಿವಬಸವ ಚನ್ನಾಾರೆಡ್ಡಿಿ ತಿಳಿಸಿದರು.
ಈ ಸಂದರ್ಭದಲ್ಲಿ ಸೂರ್ಯಪ್ಪ ಸಾಹುಕಾರ, ಶಿವ ಬಸವ ಸಾಹುಕಾರ, ಅಂಬು ಮಾಲಿಗೌಡ, ಸಿಡಿ ಅಮರೇಶ ಸಾಹುಕಾರ, ಶಿವಶಂಕರ ಮೇಟಿ, ಮಲ್ಲಿಕಾರ್ಜುನ ದಿದ್ದಗಿ, ಲಿಂಗಪ್ಪ ಮೇಟಿ, ಗೌರಮ್ಮ, ಭಾಗ್ಯಮ್ಮ ಜಿನ್ನ, ಗುಂಡಮ್ಮ ಸುಂಕನೂರು, ಜ್ಯೋೋತಿ, ಮತ್ತು ಮಹಿಳೆಯರು ಗ್ರಾಾಮಸ್ಥರು ಭಾಗವಹಿಸಿದರು.
ಕೊಪ್ಪಳ ಜಾತ್ರಾ ಭಕ್ತರಿಗಾಗಿ ಬೆಲ್ಲದ ಲಡ್ಡು

