ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ವೈಕುಂಠ ಏಕಾದಶಿ ಅಂಗವಾಗಿ ಇಂದು ನಗರದ ವಿವಿಧ ವೆಂಕಟೇಶ್ವರ ದೇವಸ್ಥಾಾನಗಳಲ್ಲಿ ಭಕ್ತರು ಸರತಿಯಲ್ಲಿ ನಿಂತು ದರ್ಶನ ಪಡೆದರು.
ನಗರದ ನವೋದಯ ಶಿಕ್ಷಣ ಸಂಸ್ಥೆೆಯ ಆವರಣದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾಾನದಲ್ಲಿ ಬೆಳಗಿನ 5 ರಿಂದ ಶ್ರೀ ವೆಂಕಟೇಶ್ವರ ಸ್ವಾಾಮಿ ದರ್ಶನ ಪ್ರಕ್ರಿಿಯೆ ಆರಂಭವಾಗಿತ್ತುಘಿ.
ವೈಕುಂಠ ಏಕಾದಶಿ ಅಂಗವಾಗಿ ಇಂದು ದೇವಸ್ಥಾಾನ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಬೆಳಗಿನ ಜಾವದಿಂದ ಭಾರಿ ಸಂಖ್ಯೆೆಯಲ್ಲಿ ಭಕ್ತರ ಆಗಮನದಿಂದ ದೇವಸ್ಥಾಾನದಲ್ಲಿ ಜನ ಜಮಾಯಿಸಿದ್ದರು.ಶ್ರೀ ವೆಂಕಟೇಶ್ವರ ಸ್ವಾಾಮಿ ಮತ್ತು ಶ್ರೀದೇವಿ, ಭೂದೇವಿಯವರ ಉತ್ಸವ ನೆರವೇರಿತು.
ಸಚಿವರಿಂದ ದರ್ಶನ :
ವೈಕುಂಠ ಏಕಾದಶಿ ಹಿನ್ನೆೆಲೆಯಲ್ಲಿ ನವೋದಯ ಶಿಕ್ಷಣ ಸಂಸ್ಥೆೆಯ ಆವರಣದಲ್ಲಿರುವ ಶ್ರೀವೆಂಕಟೇಶ್ವರ ದೇವಸ್ಥಾಾನಕ್ಕೆೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಅವರು ದರ್ಶನ ಪಡೆದರು. ಅವರಿಗೆ ಸಂಸ್ಥೆೆ ಅಧ್ಯಕ್ಷ ಎಸ್.ಆರ್.ರೆಡ್ಡಿಿಘಿ, ಮುಖಂಡರಾದ ರುದ್ರಪ್ಪ ಅಂಗಡಿ, ಜಿ.ಶಿವಮೂರ್ತಿ, ಜಯವಂತರಾವ್ ಪತಂಗೆ, ನರಸರೆಡ್ಡಿಿಘಿ, ನರಸಿಂಹಲು ಮಾಡಗಿರಿ ಮತ್ತಿಿತರರು ಸಾತ್ ನೀಡಿದರು.
ಮಂತ್ರಾಾಲಯ :
ವೈಕುಂಠ ಏಕಾದಶಿ ಹಿನ್ನೆೆಲೆಯಲ್ಲಿ ಇಂದು ಬೆಳಿಗ್ಗೆೆ ಮಂತ್ರಾಾಲಯದಲ್ಲಿ ರಾಘವೇಂದ್ರ ಸ್ವಾಾಮಿಗಳು ಸ್ಥಾಾಪಿಸಿದ ಶ್ರೀ ವೆಂಕಟೇಶ್ವರ ದೇವರ ಪುರಾತನ ದೇವಸ್ಥಾಾನದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ತುಳಸಿ ಮತ್ತು ಪುಷ್ಪ ಅರ್ಚನೆ ಹಾಗೂ ಮಂಗಳಾರತಿ ನೆರವೇರಿಸಿದರು.
ಶ್ರೀ ವೆಂಕಟೇಶ್ವರ ದೇವಸ್ಥಾಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೈಕುಂಠ ದ್ವಾಾರ ಮೂಲಕ ಭಕ್ತರು ದೇವರ ದರ್ಶನ ಪಡೆದರು.

