ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ಭಾರತವು ವ್ಯಾಾಸ, ಕಾಳಿದಾಸ, ರನ್ನ, ಪೊನ್ನ, ಪಂಪ, ಅಲ್ಲಮ ಪ್ರಭುರಂತಹ ಉತ್ತಮ ಲೇಖಕರನ್ನು ಹೊಂದಿದೆ. ಇಂಗ್ಲಿಿಷ್ ಭಾಷೆಯು ಜಗತ್ತಿಿನ ಅದ್ಭುತ ಭಾಷೆಗಳಲ್ಲಿ ಒಂದಾಗಿದೆ, ವಿಲಿಯಂ ಷೇಕ್ಸ್ಪಿಯರ್ ಅವರು ಸೃಷ್ಠಿಿಸಿದ ಪಾತ್ರಗಳಿಂದ ಹಾಗೂ ಇಂಗ್ಲಿಿಷ್ ಸಾಹಿತ್ಯದಿಂದ ಭಾರತದಲ್ಲಿ ಇಂಗ್ಲಿಿಷ್ ಭಾಷೆ ಕಲಿಕೆಗೆ ಸಾಕಷ್ಟು ಅವಕಾಶವಿದ್ದು ಇಂದಿಗೂ ಅವರ ನಾಟಕಗಳು ಪ್ರಸ್ತುತವಾಗಿವೆ ಎಂದು ಕಲ್ಬುರ್ಗಿಯ ಕರ್ನಾಟಕ ಕೇಂದ್ರೀೀಯ ವಿಶ್ವವಿದ್ಯಾಾಲಯದ ಹಿರಿಯ ಪ್ರಾಾಧ್ಯಾಾಪಕರು ಮತ್ತು ಇಂಗ್ಲಿಿಷ್ ವಿಭಾಗದ ಮುಖ್ಯಸ್ಥರಾದ ಪ್ರೊೊ.ಬಸವರಾಜ ಪಿ. ಡೊಣೂರು ಅವರು ಉದ್ಘಾಾಟಿಸಿ ಮಾತನಾಡಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಇಂಗ್ಲಿಿಷ್ ವಿಭಾಗದಿಂದ ಆಯೋಜಿಸಿದ್ದ ಇಂಗ್ಲಿಿಷ್ ಲಿಟರರಿ ಕ್ಲಬ್ ಉದ್ಘಾಾಟನೆ ಮತ್ತು ವಿಶೇಷ ಉಪನ್ಯಾಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯ ಬುದ್ಧಿಿಯಲ್ಲಿರುವ ಜಗತ್ತು ವಾಸ್ತವ ಜಗತ್ತಿಿಗಿಂತ ವಿಶಾಲ ಹಾಗೂ ಸಂಕೀರ್ಣವಾಗಿದ್ದು ವಿಲಿಯಂ ಷೇಕ್ಸ್ಪಿಯರ್ ಬರೆದ ಅನೇಕ ನಾಟಕಗಳು ಓದುಗರಿಗೆ ಅವರ ಅಂತರ್ಧ್ವನಿಯ ಪರಿಚಯ ಮಾಡಿಸುವುದು, ವ್ಯಕ್ತಿಿಯಲ್ಲಿರುವ ಆತ್ಮಸಾಕ್ಷಿ, ಹೃದಯದಲ್ಲಿರುವ ಭಾವನೆಯೊಳಗೆ ಇಳಿದುನೊಡದೆ ಹೋದರೆ ಅಡಗಿರುವ ಜ್ಞಾಾನ ಬತ್ತಿಿ ಹೋಗುತ್ತದೆ. ಅವರ ನಾಟಕಗಳು ಕೇವಲ ಕಥೆಗಳಲ್ಲ ಅವು ಮನುಷ್ಯನ ಅಂತರಂಗದ ಸಂಘರ್ಷಗಳು, ಭಾವನೆಗಳು ಮತ್ತು ಮನೋಸ್ಥಿಿತಿಗಳ ಆಳವಾದ ವಿಶ್ಲೇಷಣೆಯಾಗಿದ್ದು, ಅವರು ಬರೆದ ಹ್ಯಾಾಮ್ಲೆೆಟ್, ಜ್ಯುಲಿಯಸ್ ಸೀಸರ್ ನಾಟಕಗಳ ಅನೇಕ ದೃಷ್ಟಾಾಂತಗಳನ್ನು ವಿವರಿಸುತ್ತಾಾ ಇಂಗ್ಲಿಿಷ್ ಭಾಷೆಯ ಮಹತ್ವ ಹಾಗೂ ಸಾಹಿತ್ಯದ ಅಗಾಧತೆಯನ್ನು ತಮ್ಮ ವಿಶೇಷ ಉಪನ್ಯಾಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾನಿಲಯದ ಕುಲಪತಿ ಪ್ರೊೊ.ಶಿವಾನಂದ ಕೆಳಗಿನಮನಿ ಮಾತನಾಡಿ, ವಿಲಿಯಂ ಷೇಕ್ಸ್ಪಿಯರ್ ಅವರ ನಾಟಕಗಳು ಬಹುತೇಕವಾಗಿ ನಮ್ಮ ಸಮಾಜದ ಬದುಕನ್ನು ಕಟ್ಟಿಿಕೊಟ್ಟಿಿವೆ ಎಂದು ಆಭಿಪ್ರಾಾಯಪಟ್ಟರು.
ವಿಶೇಷ ಆಹ್ವಾಾನಿತರಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊೊ.ವೆಂಕಟಗಿರಿ ದಳವಾಯಿ ಮಾತನಾಡಿ, ಹೊಸ ತಲೆಮಾರಿನ ಯುವ ಜನತೆಯು ಸಾಹಿತಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು, ಇಂಗ್ಲಿಿಷ್ ಅಧಿಕಾರದ ಭಾಷೆಯೂ ಹೌದು ಅವಕಾಶಗಳ ಭಾಷೆಯೂ ಹೌದು ಆ ನಿಟ್ಟಿಿನಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ಇಂಗ್ಲಿಿಷ್ ಭಾಷೆಯಲ್ಲಿ ಹೊರತಂದರು. ಯಾವುದೇ ಭಾಷೆ ಕಲಿಯಲು ಮಾತೃಭಾಷೆಯ ನೈಪುಣ್ಯತೆ ಮುಖ್ಯ ಎಂದು ನುಡಿದರು.
ಬಳ್ಳಾಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಾಲಯದ ಆಂಗ್ಲ ವಿಭಾಗದ ಸಹಾಯಕ ಪ್ರಾಾಧ್ಯಾಾಪಕ ಡಾ.ಚಾಂದ್ಬಾಷ ಅವರು ಸಾಹಿತ್ಯ ಅಧ್ಯಯನದಲ್ಲಿ ಸಂಶೋಧನಾ ವಿಧಾನಗಳು ಕುರಿತು ವಿಶೇಷ ಉಪನ್ಯಾಾಸ ನೀಡಿದರು.
ವೇದಿಕೆ ಮೇಲೆ ಇಂಗ್ಲಿಿಷ್ ವಿಭಾಗದ ಮುಖ್ಯಸ್ಥರಾದ ಪ್ರೊೊ.ಪಾರ್ವತಿ ಸಿ.ಎಸ್., ಕಲಾ ನಿಕಾಯದ ಡೀನ ಡಾ.ಲತಾ.ಎಂ.ಎಸ್. ಕಾರ್ಯಕ್ರಮದಲ್ಲಿ ಉಪಕುಲಸಚಿವರಾದ ಡಾ.ಕೆ.ವೆಂಕಟೇಶ, ವಾಣಿಜ್ಯ ನಿಕಾಯ ಡೀನ ಪ್ರೊೊ.ಪಿ.ಭಾಸ್ಕರ್, ಎನ್.ಎಸ್.ಎಸ್ ಅಧಿಕಾರಿ ಡಾ.ಜಿ.ಎಸ್.ಬಿರಾದಾರ, ರಾಯಚೂರಿನ ಪ್ರಥಮ ದರ್ಜೆ ಕಾಲೇಜಿನ ಡಾ.ರಾಘವೇಂದ್ರ ನಾಯಕ್, ವಿವಿಯ ಇಂಗ್ಲಿಿಷ್ ವಿಭಾಗದ ಉಪನ್ಯಾಾಸಕರಾದ ಅನಿಲ್ ಅಪ್ರಾಾಳ್, ಡಾ.ಅನಿತಾ, ಡಾ.ಮೊಹ್ಮದ್ ಆಸ್ೀ, ಉಪಸ್ಥಿಿತರಿದ್ದರು.
ವಿಭಾಗದ ಸಂಯೋಜಕ ಡಾ.ಆನಂದ ಪ್ರಾಾಸ್ತಾಾವಿಕ ಮಾತನಾಡಿದರು, ವಿದ್ಯಾಾರ್ಥಿಗಳಾದ ಅನ್ನಪೂರ್ಣ ಪ್ರಾಾರ್ಥಿಸಿದರು, ಇಬ್ರಾಾಹಿಮ್ ಸ್ವಾಾಗತಿಸಿದರು, ಅರ್ಚನಾ ನಿರೂಪಿಸಿದರು, ಮಸ್ತಾಾನ್ ಅಲಿ, ನಾಗರಾಜ್, ರಾಜಶೇಖರ್ ಅತಿಥಿಗಳನ್ನು ಪರಿಚಯಿಸಿದರು. ಪ್ರಸಾದ್ ವಂದಿಸಿದರು, ವಿವಿಧ ವಿಭಾಗಗಳ ಅತಿಥಿ ಉಪನ್ಯಾಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ವಾಲ್ಮೀಕಿ ವಿವಿ : ಇಂಗ್ಲಿಷ್ ಲಿಟರರಿ ಕ್ಲಬ್ ಉದ್ಘಾಾಟನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಷೇಕ್ಸ್ಪಿಯರ್ ನಾಟಕಗಳು ಎಂದಿಗೂ ಪ್ರಸ್ತುತ : ಪ್ರೊ.ಬಸವರಾಜ ಪಿ. ಡೊಣೂರು

