ಸುದ್ದಿಮೂಲ ವಾರ್ತೆ ಸಿರವಾರ, ಡಿ.30:
ಗ್ರಾಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಕಾಪಾಡಲು ಸಾರ್ವಜನಿಕರ ಅನುಕೂಲಕ್ಕೆೆ ನಾಡ ಕಾರ್ಯಾಲಯ ಸೇರಿದಂತೆ ಹಲವಾರು ಅಭಿವೃದ್ಧಿಿ ಕಾರ್ಯಗಳ ಮೂಲಕ ಗ್ರಾಾಮೀಣ ಪ್ರದೇಶದ ಅಭಿವೃದ್ಧಿಿಗೆ ಆದ್ಯತೆ ನೀಡಲಾಗಿದೆ ಎಂದು ವಿಜ್ಞಾನ ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಹೇಳಿದರು.
ಮಂಗಳವಾರ ತಾಲೂಕಿನ ಕಲ್ಲೂರಿನ ಗ್ರಾಾಮದಲ್ಲಿ ನಾಡ ಕಾರ್ಯಾಲಯದ ನೂತನ ಕಟ್ಟಡ 40ಲಕ್ಷ ರೂಪಾಯಿ, ಕ್ಯಾಾಪ್ಯುುಟೆಕ್ ನಿರ್ಮಿತ ಕೇಂದ್ರ, ಪ್ರಾಾಥಮಿಕ ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆೆ 63ಲಕ್ಷ ರೂಪಾಯಿ 15ನೇ ಹಣಕಾಸು ಯೋಜನೆಯಲ್ಲಿ ನಿರ್ಮಾಣ ಭೂಮಿ ಪೂಜೆಯ ಮೂಲಕ ಚಾಲನೆ ನೀಡಿ ಮಾತನಾಡಿದರು.
ಗ್ರಾಾಮದ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹಲವಾರು ಕಾರ್ಯಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಹಂಪಯ್ಯ ನಾಯಕ, ಭೀಮರಡ್ಡೆೆಪ್ಪಗೌಡ ,ಗ್ರಾಾ.ಪಂ.ಅಧ್ಯಕ್ಷ ಸಂಗಪ್ಪಗೌಡ, ಎ.ವೀರೇಶ, ಎ.ಬಸವರಾಜ, ಸಿ.ಅಮರಪ್ಪಗೌಡ, ಗುರುಸ್ವಾಾಮಿ ಯಾದವ್, ರಾಮಚಂದ್ರ ಯಾದವ್, ಶಿವಶಂಕರ, ಜುಟ್ಲ್ ನರಸಪ್ಪ, ಲಕ್ಷ್ಮಣ ಯಾದವ್, ಕೆ.ಭೀಮಣ್ಣ
ಹಾಗೂ ಗ್ರಾಾ.ಪಂ. ಸರ್ವ ಸದಸ್ಯರು, ತಹಶಿಲ್ದಾಾರರ ಅಶೋಕ ಪವಾರ, ಇಓ ಶಶಿಧರಸ್ವಾಾಮಿ, ವೆಂಕಟೇಶ ಸಿಂಗ್ ಹಜಾರಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶರಣಬಸವ ಪಾಟೀಲ, ಡಾ.ಸಂಗಮೇಶ ಹಾಗೂ ಸಿಬ್ಬಂದಿ, ಗ್ರಾಾಮದ ಮುಖಂಡರು ಭಾಗವಹಿಸಿದ್ದರು.
ಕಲ್ಲೂರು: ಆರೋಗ್ಯಕೇಂದ್ರ, ನಾಡ ಕಾರ್ಯಾಲಯ ಭೂಮಿಪೂಜೆ ಗ್ರಾಾಮಗಳ ಅಭಿವೃದ್ಧಿಗೆ ಆದ್ಯತೆ- ಭೋಸರಾಜು

