ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.30:
ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಅಂತಿಮ ಪಟ್ಟಿಿ ಪ್ರಕಟಿಸಲಾಗಿದ್ದು, 18,194 ಪುರುಷ ಮತ್ತು 13,020 ಮಹಿಳೆಯರು ಸೇರಿ ಒಟ್ಟು 31,214 ಮತದಾರರು ಹೆಸರು ನೋಮದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ವಿಭಾಗದ ಪ್ರಾಾದೇಶಿಕ ಆಯುಕ್ತರು ಮತ್ತು ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿರುವ ಜಹೀರಾ ನಸೀಮ ತಿಳಿಸಿದ್ದಾರೆ.
ಮತದಾರರ ಪಟ್ಟಿಿಯನ್ನು ಕ್ಷೇತ್ರದ ವ್ಯಾಾಪ್ತಿಿಯ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ, ಮಹಾನಗರ ಪಾಲಿಕೆ, ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾಾರರ ಕಚೇರಿಯಲ್ಲಿ ಸಾರ್ವಜನಿಕರು ಮತದಾರರ ಪಟ್ಟಿಿಯನ್ನು ವೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಹೆಚ್ಚು ಮತದಾರರು : ಇನ್ನು ಜಿಲ್ಲಾವಾರು ಮತದಾರರ ನೋಂದಣಿ ಅಂಕಿ-ಸಂಖ್ಯೆೆ ವೀಕ್ಷಿಸಿದಾಗ ಕಲಬುರಗಿ ಜಿಲ್ಲೆಯಲ್ಲಿ ಪುರುಷ 4,818 ಮಹಿಳೆ 4,118 ಸೇರಿ ಒಟ್ಟು 8,936 ರೊಂದಿಗೆ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರನ್ನು ಹೊಂದಿರುವ ಜಿಲ್ಲೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಪುರುಷ 1,398, ಮಹಿಳೆ 622 ಸೇರಿ 2,020 ಮತದಾರರಿದ್ದಾರೆ. ಉಳಿದಂತೆ ಬಳ್ಳಾಾರಿ ಜಿಲ್ಲೆಯಲ್ಲಿ ಪುರುಷ 1,775 ಮಹಿಳೆ 1,527 ಸೇರಿ 3,302, ವಿಜಯನಗರ ಜಿಲ್ಲೆಯಲ್ಲಿ ಪುರುಷ 2,114 ಮಹಿಳೆ 1,093 ಸೇರಿ 3,207, ಬೀದರ ಜಿಲ್ಲೆಯಲ್ಲಿ ಪುರುಷ 3,337 ಮಹಿಳೆ 2,793 ಸೇರಿ 6,130, ಕೊಪ್ಪಳ ಜಿಲ್ಲೆಯಲ್ಲಿ ಪುರುಷ 1,805 ಮಹಿಳೆ 857 ಸೇರಿ 2,662, ರಾಯಚೂರು ಜಿಲ್ಲೆಯಲ್ಲಿ ಪುರುಷ 2,947 ಮಹಿಳೆ 2,010 ಸೇರಿ 4,957 ಮತದಾರರಿದ್ದಾರೆ.
ನೋಂದಣಿಗಿದೆ ಇನ್ನು ಅವಕಾಶ : ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಿ ಅಂತಿಮವಾಗಿದ್ದರು ಸಹ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸಲು ನಿಗದಿ ಮಾಡುವ ಕೊನೆಯ ದಿನದ ವರೆಗೆ ಮತದಾರರ ಪಟ್ಟಿಿಗೆ ಹೆಸರು ಸೇರಿಸಲು ಸುವರ್ಣಾವಕಾಶವಿದೆ.

