ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.29:
ತಾಲೂಕಿನ ವಿವಿಧ ಗ್ರಾಾಮಗಳು ಹಾಗೂ ನಗರ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿಿದ್ದು, ಇದರಿಂದ ಸಾಮಾಜಿಕ ಅಶಾಂತಿ, ಕಾನೂನು ಸುವ್ಯವಸ್ಥೆೆಗೆ ಧಕ್ಕೆೆ, ಕುಟುಂಬ ಕಲಹ, ಅಪಘಾತಗಳು ಹಾಗೂ ಯುವಜನತೆ ದುರ್ನಡತೆಗೆ ಒಳಗಾಗುವ ಪರಿಸ್ಥಿಿತಿ ನಿರ್ಮಾಣವಾಗಿದ್ದು ಅಕ್ರಮ ಮಧ್ಯ ಮಾರಾಟಕ್ಕೆೆ ಕಡಿವಾಣ ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಾಭಿಮಾನಿ ಸೇನೆ ತಾಲೂಕು ಘಟಕದ ಅಧ್ಯಕ್ಷ ಜಿಲಾನಿಪಾಶಾ ನೇತೃತ್ವದಲ್ಲಿ ಆಗ್ರಹಿಸಿತು.
ಪರವಾನಗಿ ಇಲ್ಲದೆ ನಿಯಮಾವಳಿಗಳನ್ನು ಉಲ್ಲಂಘಿಸಿ ನಡೆಯುತ್ತಿಿರುವ ಅಕ್ರಮ ಮದ್ಯ ಮಾರಾಟ ತಕ್ಷಣವೇ ನಿಗ್ರಹಿಸಬೇಕು. ಶಾಲಾ ಕಾಲೇಜುಗಳ ಬಳಿ, ವಸತಿ ಪ್ರದೇಶಗಳು ಹಾಗೂ ಗ್ರಾಾಮೀಣ ಭಾಗಗಳಲ್ಲಿ ಬೆಳಿಗ್ಗೆೆಯೇ ಅಕ್ರಮ ಮದ್ಯ ಮಾರಾಟ ಎಗ್ಗಿಿಲ್ಲದೆ ನಡೆಯುತ್ತಿಿದ್ದು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ತೀವ್ರಸಂಕಷ್ಟ ಅನುಭವಿಸುವಂತಾಗಿದೆ. ಸ್ಥಳೀಯ ಅಬಕಾರಿ ಉಪನಿರೀಕ್ಷಕರು ಯಾವುದೇ ಕ್ರಮಕೈಗೊಳ್ಳದೆ ಕಣ್ಮುಚ್ಚಿಿಕೊಂಡಿದ್ದಾಾರೆಂದು ಮನವಿಯಲ್ಲಿ ಆರೋಪಿಸಲಾಗಿದೆ.
ಅಕ್ರಮ ಮದ್ಯ ಮಾರಾಟದ ಕೇಂದ್ರಗಳ ಮೇಲೆ ತಕ್ಷಣ ದಾಳಿ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ ಅಕ್ರಮ ಮದ್ಯ ಸಾಗಣೆ ಹಾಗೂ ಸಂಗ್ರಹಣೆಗೆ ಸಹಕಾರ ನೀಡುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಅಬಕಾರಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯ ರವಿಕುಮಾರ ಬರಗುಡಿ, ಅಜೀಜಪಾಷ, ಮೊಸೀನ್ಖಾನ್, ಅಲ್ಲಾಾದ್ದೀನ ಬಾಬಾ, ತಿಮ್ಮನಗೌಡ, ಬಸನಗೌಡ, ಮಲ್ಲಣ್ಣ, ಮಾರೆಪ್ಪ, ರಹೀಮ್, ಹರ್ೀ, ಪ್ರಭುಗೌಡ, ರಾಜು, ನಾಗರಾಜ, ಖಾಸೀಂಸಾಬ, ನಬೀಸಾಬ ಹಾಗೂ ವೀರೇಶ ಹೀರೆಮಠ ಇತರರು ಸಹಾಯಕ ಆಯುಕ್ತರ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.
ಅಕ್ರಮ ಮದ್ಯ ಮಾರಾಟ ತಡೆದು ಸುವ್ಯವಸ್ಥೆ ಕಾಪಾಡಲು ಸ್ವಾಭಿಮಾನಿ ಸೇನೆ ಮನವಿ

