ಸುದ್ದಿಮೂಲ ವಾರ್ತೆ ಔರಾದ್, ಡಿ .30:
ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿ ಗ್ರಾಾಮ ಪಂಚಾಯತಿಗೆ ಹಸ್ತಾಾಂತರಿಸುವ ಸಂದರ್ಭದಲ್ಲಿ ಅಧಿಕಾರಿಗಳು ಅಕ್ರಮ ಮಾಡಿದ್ದಾರೆ. ಪಂಚಾಯಿತಿಯ ಅಧ್ಯಕ್ಷರ ನಕಲಿ ಸಹಿ ಮಾಡಿ ಕಾಮಗಾರಿ ಹಸ್ತಾಾಂತರಿಸಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಿಿಮಿನಲ್ ಪ್ರಕರಣ ದಾಖಲಿಸಬೇಕೆಂದು ಚಾಂಡೇಶ್ವರ ಗ್ರಾಾಮಸ್ಥರು ಶಾಸಕ ಪ್ರಭು ಬಿ.ಚವ್ಹಾಾಣ ಅವರನ್ನು ಒತ್ತಾಾಯಿಸಿದರು.
ಗ್ರಾಾಮ ಸಂಚಾರದ ನಿಮಿತ್ತ ಸೋಮವಾರ ಚಾಂಡೇಶ್ವರ ಗ್ರಾಾಮಕ್ಕೆೆ ಭೇಟಿ ನೀಡಿದ ವೇಳೆ ಸಾರ್ವಜನಿಕರು ಗ್ರಾಾಮದಲ್ಲಾದ ಜೆಜೆಎಂ ಕಾಮಗಾರಿಯ ಬಗ್ಗೆೆ ದೂರು ಸಲ್ಲಿಸಿದರು. ತಾವು ಪ್ರಯತ್ನಪಟ್ಟು ಕೋಟ್ಯಂತರ ಅನುದಾನ ತಂದು ಕಾಮಗಾರಿ ಇಟ್ಟಿಿದ್ದೀರಿ. ಆದರೆ ಅಧಿಕಾರಿಗಳು ಮತ್ತು ಗುತ್ತಿಿಗೆದಾರರು ಸೇರಿಕೊಂಡು ಕಾಮಗಾರಿಯ ಹಣ ನುಂಗಿ ಹಾಕಿದ್ದಾರೆ. ಅರ್ಧ ಗ್ರಾಾಮಕ್ಕೆೆ ನೀರಿನ ಸಂಪರ್ಕವೇ ಕಲ್ಪಿಿಸಿಲ್ಲ. ಪೈಪ್ ಲೈನ್ ಗಾಗಿ ಕೊರೆದ ತಗ್ಗು ಗುಂಡಿಗಳನ್ನು ಮುಚ್ಚಿಿಲ್ಲ. ಕೆಲಸ ಮಾಡದೇ ಬಿಲ್ಲುಗಳನ್ನು ಮಾಡಲಾಗಿದೆ ಎಂದು ಆರೋಪಿಸಿದರು.
ಗ್ರಾಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆೆ ತರದೇ ಅಧ್ಯಕ್ಷರ ನಕಲಿ ಸಹಿ ಮಾಡಿ ಕಾಮಗಾರಿಯನ್ನು ಪಂಚಾಯಿತಿಗೆ ಹಸ್ತಾಾಂತರಿಸಿದ್ದಾರೆ. ಹಿಂದೆ ಗ್ರಾಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಪ್ರಭಾರದಲ್ಲಿದ್ದ ಸುಭಾಷ, ಜೆಇ ವಿರುದ್ಧ ಕ್ರಿಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಬೇಕು ಮತ್ತು ಗುತ್ತಿಿಗೆದಾರರನ್ನು ಕಪ್ಪುು ಪಟ್ಟಿಿಗೆ ಸೇರಿಸಬೇಕೆಂದು ಶಾಸಕರನ್ನು ಒತ್ತಾಾಯಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಜನತೆಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ಸಾಕಷ್ಟು ಪ್ರಯತ್ನಪಟ್ಟು 240 ಕೋಟಿಗೂ ಹೆಚ್ಚಿಿನ ಅನುದಾನ ತಂದಿದ್ದೇನೆ. ಆದರೆ ಎಲ್ಲಿಯೂ ಕೆಲಸ ಸರಿಯಾಗಿ ಆಗಿಲ್ಲ. ಹೋದ ಕಡೆಗಳೆಲ್ಲೆಲ್ಲ ಜೆಜೆಎಂ ಬಗ್ಗೆೆ ದೂರುಗಳು ಬರುತ್ತಿಿವೆ. ಕುಡಿಯುವ ನೀರಿನ ವಿಷಯದಲ್ಲಿಯೂ ಅಕ್ರಮ ಮಾಡಿದರೆ ಜನತೆಯ ಶಾಪಕ್ಕೆೆ ಗುರಿಯಾಗುತ್ತೀರಿ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ತಹಸೀಲ್ದಾಾರ ಅಮಿತಕುಮಾರ ಕುಲಕರ್ಣಿ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾಯ ಕೌಟಗೆ, ತಾಲ್ಲೂಕು ಆರೋಗ್ಯಾಾಧಿಕಾರಿ ಡಾ.ಗಾಯತ್ರಿಿ, ಲೋಕೋಪಯೋಗಿ ಇಲಾಖೆ ಎಇಇ ಪ್ರೇೇಮಸಾಗರ, ಪಂಚಾಯತ ರಾಜ್ ಎಂಜಿನಿಯರಿಂಗ್ ಇಲಾಖೆ ಎಇಇ ಸುನೀಲ ಚಿಲ್ಲರ್ಗೆ, ಜೆಸ್ಕಾಾಂ ಎಇಇ ರವಿ ಕಾರಬಾರಿ, ಗ್ರಾಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ ರಾಠೋಡ, ಪಿಎಂಜಿಎಸ್ವೈ ಎಇಇ ಸುಭಾಷ ವಾಗಮಾರೆ, ಶಿಶು ಅಭಿವೃದ್ಧಿಿ ಯೋಜನಾಧಿಕಾರಿ ಇಮಲಪ್ಪ ಸೇರಿದಂತೆ ಇತರರು ಉಪಸ್ಥಿಿತರಿದ್ದರು.
ಚಾಂಡೇಶ್ವರನಲ್ಲಿ ನಕಲಿ ಸಹಿ ಮಾಡಿ ಜೆಜೆಎಂ ಕಾಮಗಾರಿ ಹಸ್ತಾಾಂತರ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಒತ್ತಾಯ

