ಸುದ್ದಿಮೂಲ ವಾರ್ತೆ ಮಟ್ಟೂರು, ಡಿ.30:
ಸಾವಯವ ಕೃಷಿಯಲ್ಲಿ ಸಾಧನೆಗೈದ ಗುಡಿಹಾಳ ಗ್ರಾಾಮದ ಕೃಷಿಕ ಶಿವಕುಮಾರಗೌಡ ಪಾಟೀಲ್ ಅವರನ್ನು ಮಟ್ಟೂರು ಗ್ರಾಾ.ಪಂ, ವ್ಯಾಾಪ್ತಿಿಯ ಗ್ರಾಾಮಸ್ಥರು ರೈತ ದಿನಾಚರಣೆ ನಿಮಿತ್ಯ ಇತ್ತೀಚೆಗೆ ಸನ್ಮಾಾನಿಸಿ ಗೌರವ ಸಮರ್ಪಣೆಗೈದರು.
ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಗುಡಿಹಾಳ ಗ್ರಾಾಮದ ಆದರ್ಶ ಕೃಷಿಕ ರೈತ ಶಿವಕುಮಾರ್ಗೌಡ ಪಾಟೀಲ್. ಅವರು ತೋಟಗಾರಿಕಾ ಬೆಳೆಗಳನ್ನು ಬಹುವರ್ಷಗಳಿಂದ ಸಾವಯವ ಕೃಷಿಯಲ್ಲಿ ಬೆಳೆದು ಸಾಧನೆಗೈದು ಇತರೆ ರೈತರಿಗೆ ಮಾದರಿಯಾಗಿದ್ದಾಾರೆ.
ಇವರ ಸಾಧನೆ ಗುರುತಿಸಿ 3 ವರ್ಷದ ಹಿಂದೆ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಾಲಯ ಉತ್ತಮ ರೈತ ಎಂಬ ಪ್ರಶಸ್ತಿಿ ನೀಡಿ ಗೌರವಿಸಿತ್ತು.
ಇತ್ತೀಚೆಗೆ ರಾಯಚೂರು ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯದಿಂದ ಕೃಷಿರತ್ನ ಪ್ರಶಸ್ತಿಿ ಹಾಗೂ ಚಿನ್ನದ ಪದಕ ನೀಡಿ ಗೌರವಿಸಲಾಗಿದ್ದರಿಂದ ರೈತ ದಿನಾಚರಣೆಯ ಅಂಗವಾಗಿ ಮಟ್ಟೂರು, ಗುಡಿಹಾಳ, ಬುದ್ಧಿಿನ್ನಿಿ, ಕಡದರಾಳ ಗ್ರಾಾಮಗಳ ತೋಟಗಾರಿಕಾ ರೈತರು ಗುಡಿಹಾಳ ಗ್ರಾಾಮದಲ್ಲಿ ಶಿವಕುಮಾರ್ಗೌಡ ಪಾಟೀಲ್ ಅವರನ್ನು ರೈತ ದಿನಾಚರಣೆ ನಿಮಿತ್ಯ ಸನ್ಮಾಾನಿಸಿ ಗೌರವಿಸಿದರು.
ಈವೇಳೆ ಯೋಗಗುರು ಚಂದ್ರಶೇಖರಸ್ವಾಾಮಿ. ವಿಎಸ್ಎಸ್ಎನ್ ಅಧ್ಯಕ್ಷ ಪಂಪಣ್ಣಜಾವೂರ. ಗ್ರಾಾ.ಪಂ,ಸದಸ್ಯರಾದ ಈರಣ್ಣಗುಡಿಹಾಳ. ನಾಗರಾಜರಕ್ಕಸಿಗಿ, ಶಂಕ್ರಣ್ಣನಂದಿಹಳ್ಳಿಿ, ಸದ್ದಾಾಂಹುಸೇನ್, ಮುತ್ಯಪ್ಗೌಡಅಡವಿಬಾವಿ. ವೀರೇಶಬುದ್ದಿನ್ನಿಿ. ಸೇರಿ ನೂರಾರು ರೈತರಿದ್ದರು.
ಸಾವಯವ ಕೃಷಿಯಲ್ಲಿ ಸಾಧನೆಗೈದ ರೈತನಿಗೆ ಗೌರವ ಸಮರ್ಪಣೆ

