ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.31
ಗಿರಿ ಜಿಲ್ಲೆಯ ಪ್ರಮುಖ ಕ್ರಿಿಯಾಶೀಲ ಸಾಧಕರಲ್ಲಿ ಸಿದ್ದಪ್ಪ ಹೊಟ್ಟೆೆಯವರು ಒಬ್ಬರು. ಸಹಕಾರ, ಸಾಹಿತ್ಯ, ರಾಜಕಾರಣ, ಕೃಷಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಹೆಚ್ಚಿಿನ ಸಾಧನೆಯನ್ನು ಜನಸೇವೆಗೆ ಅರ್ಪಿಸಿ, ಬಹುಮುಖ ವ್ಯಕ್ತಿಿತ್ವ ಹೊಂದಿರುವ ಸಂಘಟಕರಾಗಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ತಿಿನ ಸಂಸ್ಥಾಾಪಕರು, ನಾಡಿನ ಹಿರಿಯ ವಿದ್ವಾಾಂಸ ಗೊ.ರು. ಚನ್ನಬಸಪ್ಪ ಅಭಿಪ್ರಾಾಯ ವ್ಯಕ್ತಡಿಸಿದರು.
ನಗರದ ಪಾಟೀಲ್ ಕನ್ವೆೆನ್ಷನ್ ಸಭಾಂಗಣದಲ್ಲಿ ಬುಧವಾರ ಹಮ್ಮಿಿಕೊಂಡಿದ್ದ ಹೊಟ್ಟಿಿ ಅವರ ಅಭಿನಂದನಾ ಸಮಾರಂಭದಲ್ಲಿ ಗ್ರಂಥ, ದಿನದರ್ಶಿಕೆ ಬಿಡುಗಡೆ ಮಾಡಿ ಮುಖ್ಯ ಭಾಷಣ ಮಾಡಿದರು.
ಈ ವ್ಯಕ್ತಿಿ ತನ್ನ ಬದುಕಿನೊಂದಿಗೆ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಜಿಲ್ಲಾ ಕಸಾಪ, ಶರಣ ಸಾಹಿತ್ಯ ಪರಿಷತ್ತು ಹಾಗೂ ನೊಡ್ ಸಂಸ್ಥೆೆ ರಾಷ್ಟ್ರೀಯ ಉಪಾಧ್ಯಕರಾಗುವ ತನಕ ಬೆಳೆದ ರೀತಿಗೆ ಪ್ರತಿಯೊಬ್ಬರು ಹೆಮ್ಮೆೆಪಡಬೇಕೆಂದರು. ಸರಳ ವ್ಯಕ್ತಿಿತ್ವ. ಕಾಯಕ ತತ್ವ ಮೈಗೂಡಿಸಿಕೊಂಡು ಉತ್ತಮ ಸಂಘಟಕರಾಗಿ ಸದಾ ಸಮಾಜಕ್ಕೆೆ, ನಾಡಿಗೆ ಒಳಿತಾಗುವ ಕಾರ್ಯಗಳನ್ನು ಮಾಡಿಕೊಂಡು ಬರುವ ಮೂಲಕ ಎಲ್ಲರ ಗೌರವ, ಪ್ರೀೀತಿ, ವಿಶ್ವಾಾಸ ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಿಸಿದರು.
ಶರಣ ಸಾಹಿತ್ಯ ಪರಿಷತ್ತಿಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ಅಭಿನಂದನಾ ನುಡಿಗಳನ್ನಾಾಡಿ, ಒಬ್ಬ ವ್ಯಕ್ತಿಿ ತನ್ನ ಕಠಿಣ ಶ್ರಮದ ಮೂಲಕ ಉನ್ನತ ಸ್ಥಾಾನಕ್ಕೆೆ ತಲುಪಬಹುದು ಎಂಬುದಕ್ಕೆೆ ಹೊಟ್ಟಿಿಯವರೇ ನಿದರ್ಶನರಾಗಿದ್ದಾರೆ, ಅವರ ಸಾಮರ್ಥ್ಯ ಯುವ ಪೀಳಿಗೆಗೆ ಪ್ರೇೇರಣೆಯಾಗಲಿ ಎಂದರು.
ಹಿರಿಯ ನಟ ದೊಡ್ಡಣ್ಣ ಮಾತನಾಡಿ, ಹೊಟ್ಟಿಿಯವರು ಗಡಿ ಜಿಲ್ಲೆಯಲ್ಲಿ ಕನ್ನಡ ಭಾಷೆಯನ್ನು ಗಟ್ಟಿಿಯಾಗಿ ಬೆಳೆಸುವ ಜೊತೆಗೆ ಯುವ ಸಾಹಿತಿಗಳ ಪ್ರತಿಭೆ ನಾಡಿಗೆ ಪರಿಚಯಿಸಿದ್ದಾರೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಶಾಸಕ ಚನ್ನಾಾರೆಡ್ಡಿಿ ಪಾಟೀಲ್ ತುನ್ನೂರ ಮಾತನಾಡಿದರು. ಇದೇ ವೇಳೆ ದಣಿವರಿಯದ ಧೀಮಂತ ಅಭಿನಂದನಾ ಗ್ರಂಥ, ಧೀಮಂತ ಚೇತನಿ ಗ್ರಂಥ ಲೋಕಾರ್ಪಣೆ ಮತ್ತು ಅವರ ಧ್ವನಿಸುರುಳಿ ಹಾಗೂ ದಿನದರ್ಶಿಕೆಯನ್ನು ವಿವಿಧ ಮಠಾಧೀಶರು ಹಾಗೂ ಗಣ್ಯರು ಬಿಡುಗಡೆ ಮಾಡಿದರು.
ಕಳೆದ ನಾಲ್ಕು ದಶಕಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಸಿದ್ದಪ್ಪ ಹೊಟ್ಟಿಿ ಗಿರಿಜಿಲ್ಲೆಯ ಮನೆಮಾತಾಗಿದ್ದಾರೆ. ನೇರ ನುಡಿಯ ವ್ಯಕ್ತಿಿತ್ವದ ಅವರು ಹಿಡಿದ ಕೆಲಸ ಮುಗಿಸುವ ಛಲವಂತರಾಗಿದ್ದಾರೆ. ಅವರಿಂದ ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಮತ್ತು ಶರಣ ಸಾಹಿತ್ಯದ ಬೆಳವಣಿಗೆ ಆಗಿದೆ.
-ಡಾ.ಗಂಗಾಧರ ಸ್ವಾಾಮಿಗಳು ,ವಿಶ್ವಾಾರಾಧ್ಯರ ಮಠ ಅಬ್ಬೆೆತುಮಕೂರ
ನಿಮ್ಮೆೆಲ್ಲರ ಸಹಕಾರದಿಂದ ಬೆಳೆದಿದ್ದೇನೆ
ಸನ್ಮಾಾನ ಸ್ವೀಕರಿಸಿ ಮಾತನಾಡಿದ ಸಿದ್ದಪ್ಪ ಹೊಟ್ಟಿಿ, ನಾನು ಮಧ್ಯಮ ವರ್ಗದಲ್ಲಿ ಜನಿಸಿ, ಗುರು ಹಿರಿಯರ ಮಾರ್ಗದರ್ಶನದಲ್ಲಿ ನಿರಂತರ ಪರಿಶ್ರಮದಿಂದ ಯಾವುದೇ ಕೆಲಸಗಳಾಗಲೀ ತನು-ಮನ ನಿಷ್ಠೆೆಯಿಂದ, ನಿಮ್ಮೆೆಲ್ಲರ ವಿಶ್ವಾಾಸ, ಬೆಂಬಲದಿಂದ ಮಾಡಿಕೊಂಡು ಬಂದಿದ್ದೇನೆ. ಸಮಾಜಮುಖಿಯಾಗಿ ನಾವೆಲ್ಲರೂ ಕೆಲಸ ಮಾಡುವ ಮೂಲಕ ಪರಿವರ್ಶನೆಗೆ ನಾಂದಿಯಾಡೋಣ ಎಂದು ಹೇಳಿದರು.
ಮನುಷ್ಯ ಸಮಾಜ ಜೀವಿಯಾಗಿ ಬದುಕಿ, ಪರೋಪಕಾರದ ಕೆಲಸ ಮಾಡಿದಾಗಲೇ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿಿನಲ್ಲಿ ಹೊಟ್ಟೆೆಯವರ ಸಾಧನೆ ಇತರರಿಗೆ ಮಾದರಿಯಾಗಿದೆ.
-ಗುರುಬಸವ ಪಟ್ಟದದೇವರು,ಹಿರೇಮಠ ಬಾಲ್ಕಿಿ
ಭಾಗವಹಿಸಿದ್ದ ಪ್ರಮುಖರು
ಖಾಸಾ ಮಠ ಗುರುಮಿಠಕಲ್ ಶಾಂಶವೀರ ಮಹಾಸ್ವಾಾಮಿಜಿ, ಹೆಡಗಿಮುದ್ರಾಾದ ಶಾಂತಮಲ್ಲಿಕಾರ್ಜುನ ಸ್ವಾಾಮಿಜಿ, ಶಹಾಪೂರದ ಬಸವಯ್ಯ ಶರಣರು, ದೆಹಲಿಯ ನೋಡ್ ಉಪಾಧ್ಯಕ್ಷರಾದ ಶರಲೋ ಹಸಿಂಗ್. ನಿರ್ದೇಶಕ ಅಶೋಕ ಠಾಕೂರ, ರಾಜ್ಯ ಬಸವ ಸಮಿತಿ ಉಪಾಧ್ಯಕ್ಷ ಹಣಮಂತರೆಡ್ಡಿಿ ಮುದ್ದಾಳ, ಲಿಂಗಾರೆಡ್ಡಿಿ ಬಸರೆಡ್ಡಿಿ, ಸುರೇಶ ಸಜ್ಜನ್, ವಿಶ್ವನಾಥರಡ್ಡಿಿ ದರ್ಶನಾಪೂರ, ಮಹೇಶ ರಡ್ಡಿಿ ಮುದ್ನಾಾಳ ಸೇರಿದಂತೆಯೇ ಇತರರಿದ್ದರು.
ಸಿದ್ದಪ್ಪ ಹೊಟ್ಟಿಿ ಬಹುಮುಖ ವ್ಯಕ್ತಿಿತ್ವದ ಸಾಧಕ : ಗೊರುಚ ಶ್ಲಾಾಘನೆ ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಹೊಟ್ಟಿಿ ದಂಪತಿಗೆ ಸನ್ಮಾಾನ

