ಸುದ್ದಿಮೂಲ ವಾರ್ತೆ ನವದೆಹಲಿ, ಡಿ.31
ಎಐಸಿಸಿ ಅಧ್ಯಕ್ಷ ಮಲ್ಲಿಕಾಜುರ್ನನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸುಪ್ರೀೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಸೇರಿದಂತೆ ಹಲವು ಪ್ರಮುಖರ ರಾಜ್ಯಸಭೆ ಸದಸ್ಯತ್ವದ ಅವಧಿ ಬರುವ ಜೂನ್ ವೇಳೆಗೆ ಅಂತ್ಯವಾಗಲಿದೆ.
ಹೊಸ ವರ್ಷ 2026ರಲ್ಲಿ ರಾಜ್ಯ ಸಭೆಯ 72ಸ್ಥಾಾನಗಳಿಗೆ ಚುನಾವಣೆ ನಡೆಯಲಿದ್ದು ಬಿಜೆಪಿ ನೇತೃತ್ವದ ಎನ್ಡಿಎ ಚುನಾವಣೆಯಲ್ಲಿ ಹೆಚ್ಚು ಸ್ಥಾಾನ ಗೆಲ್ಲುವ ಸಾಧ್ಯತೆ ಇದೆ.
ಪ್ರಸ್ತುತ ರಾಜ್ಯ ಸಭೆಯಲ್ಲಿ ಎನ್ಡಿಿಎ ಸಂಖ್ಯಾಾಬಲ 40 ಇದ್ದು ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಈ ಸ್ಥಾಾನ 50ಕ್ಕೆೆ ಏರಿಕೆಯಾಗಲಿದೆ. ಇಂಡಿಯಾ ಮೈತ್ರಿಿಕೂಟದ ಸದಸ್ಯರ ಸಂಖ್ಯೆೆ 25 ಇದ್ದು 5 ಸ್ಥಾಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿಿದೆ.
ರಾಜ್ಯವಿಧಾನ ಸಭೆಗಳಲ್ಲಿ ವಿವಿಧ ಪಕ್ಷಗಳು ಹೊಂದಿರುವ ಸದಸ್ಯರ ಸಂಖ್ಯೆೆಯನ್ನು ಪರಿಗಣಿಸಿದಾಗ ಬಿಜೆಪಿಯು 37 ರಿಂದ 38 ಸ್ಥಾಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಇದರಲ್ಲಿ ಬಿಜೆಪಿ ಮಿತ್ರಪಕ್ಷಗಳಿಗೆ ಎಷ್ಟು ಸ್ಥಾಾನಗಳನ್ನು ಬಿಟ್ಟುಕೊಡಲಿದೆ ಎಂಬುದು ಇನ್ನು ತಿಳಿದು ಬಂದಿಲ್ಲ.
ಕಾಂಗ್ರೆೆಸ್ನ ಶಕ್ತಿಸಿನ್ಹ ಗೋಯಲ್ ಅವರ ಅವಧಿ ಜೂನ್ನಲ್ಲಿ ಅಂತ್ಯಗೊಳ್ಳಲಿದೆ. ಆಗ ರಾಜ್ಯಸಭೆಯಲ್ಲಿ ಗುಜರಾತ್ನಿಂದ ಕಾಂಗ್ರೆೆಸ್ ಸದಸ್ಯರೇ ಇಲ್ಲದಂತಾಗಲಿದೆ. ಸಿಪಿಎಂ ಸ್ಥಿತಿಯೂ ಇದಕ್ಕಿಿಂತ ಭಿನ್ನವಾಗಿಲ್ಲ. ಪಶ್ಚಿಮ ಬಂಗಾಳದಿಂದ ಆಯ್ಕೆೆಯಾಗಿರುವ ವಿಕಾಶ್ ರಂಜನ್ ಭಟ್ಟಾಚಾರ್ಯ ಅವರ ಅವಧಿ ಏಪ್ರಿಿಲ್ನಲ್ಲಿ ಅಂತ್ಯಗೊಳ್ಳಲಿದೆ. ಆಗ ರಾಜ್ಯಸಭೆಯಲ್ಲಿ ಕೇರಳದಿಂದ ಮಾತ್ರ ಸಿಪಿಎಂ ತನ್ನ ಪ್ರತಿನಿಧಿಯನ್ನು ಹೊಂದಲು ಸಾಧ್ಯವಾಗಲಿದೆ. ಎನ್ಸಿಿಪಿಯ (ಶರದ್ ಪವಾರ್) ಇಬ್ಬರು ರಾಜ್ಯಸಭೆ ಸದಸ್ಯರ ಅವಧಿ ಕೂಡ ಮುಗಿಯಲಿದ್ದು ಮಹಾವಿಕಾಸ್ ಅಘಾಡಿ ಒಳಜಗಳದಿಂದ ಪಕ್ಷವು ರಾಜ್ಯಸಭೆಯಲ್ಲಿ ಮತ್ತೆೆ ತನ್ನ ಪ್ರಾಾತಿನಿಧ್ಯ ಹೊಂದುವುದು ಕಷ್ಟವೇ ಆಗಲಿದೆ.
ರಾಜ್ಯಸಭೆಯಲ್ಲಿ ಸದಸ್ಯರ ಬಲಾಬಲ:
ಪ್ರಸ್ತುತ ರಾಜ್ಯ ಸಭೆಯಲ್ಲಿ 7 ನಾಮ ನಿರ್ದೇಶಿತ ಸದಸ್ಯರನ್ನು ಸೇರಿ ಬಿಜೆಪಿ ನೇತೃತ್ವದ ಎನ್ಡಿಎ 135 ಸಂಸದರ ಬೆಂಬಲ ಹೊಂದಿದೆ. ಇಂಡಿಯಾ ಒಕ್ಕೂಟವು 80 ಸಂಸದರ ಬೆಂಬಲ ಹೊಂದಿದೆ. 29 ಸಂಸದರು ಯಾವ ಮೈತ್ರಿಕೂಟದ ಭಾಗವೂ ಆಗಿಲ್ಲ.
2026ರ ನವೆಂಬರ್ ವೇಳೆಗೆ ಎಲ್ಲ ಸ್ಥಾನಗಳಿಗೆ ಚುನಾವಣೆ ಪೂರ್ಣಗೊಂಡಾಗ ರಾಜ್ಯ ಸಭೆಯಲ್ಲಿ ಎನ್ಡಿಎ ಸಂಖ್ಯಾಬಲ 145 ಸ್ಥಾಾನ ತಲುಪುವ ಸಾಧ್ಯತೆ ಇದೆ. ಇಂಡಿಯಾ ಒಕ್ಕೂಟದ ಸದಸ್ಯರ ಸಂಖ್ಯೆೆ 75ಕ್ಕೆ ತಲುಪಲಿದೆ.
ಅವಧಿ ಅಂತ್ಯವಾಗುವ ಪ್ರಮುಖ ನಾಯಕರು
ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ.ದೇವೇಗೌಡ, ಹರಿವಂಶ, ಶರದ್ ಪವಾರ್, ರಾಮಗೋಪಾಲ್ ಯಾದವ, ಹರದೀಪ್ ಸಿಂಗ್ ಪುರಿ, ರಾಮದಾಸ್ ಅಠವಳೆ, ದಿಗ್ವಿಜಯಸಿಂಗ್, ಅಭಿಷೇಕ್ ಸಿಂಘ್ವಿ, ತಿರುಚ್ಚಿಶಿವ, ಉಪೇಂದ್ರ ಕುಶ್ವಾಾಹ, ಪ್ರಿಿಯಾಂಕಾ ಚತುರ್ವೇದಿ, ನಿವೃತ್ತ ಸಿಜೆಐ ರಂಜನ್ ಗೋಗೊಯಿ (ನಾಮ ನಿರ್ದೇಶಿತ) ಇವರ ಅವಧಿ ಅಂತ್ಯಗೊಳ್ಳಲಿದೆ.

