ಸುದ್ದಿಮೂಲ ವಾರ್ತೆ ಜಾಲಹಳ್ಳಿಿ, ಡಿ.31
ಹೊಸೂರು ಸಿದ್ದಾಪುರ ಗ್ರಾಪಂಯನ್ನು ಅರಕೇರಾದಿಂದ ಕೈಬಿಟ್ಟು ದೇವದುರ್ಗ ತಾಲೂಕಿಗೆ ಸೇರ್ಪಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಹೊಸುರು ಸಿದ್ದಾಪುರ ಗ್ರಾಾಪಂ ವ್ಯಾಪ್ತಿಯ ಆರು ಹಳ್ಳಿಿಗಳಲ್ಲಿ ಸಂಭ್ರಮ ಮನೆಮಾಡಿದೆ. ಗ್ರಾಮಸ್ಥರ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.
ಬಿಜೆಪಿ ಸರ್ಕಾರ ಅರಕೇರಾ ಹೊಸ ತಾಲೂಕು ಘೋಷಣೆ ಮಾಡಿತ್ತು. ಹೊಸೂರು ಸಿದ್ದಾಪುರ ಗ್ರಾಾಪಂ ನಾವು ಅರಕೇರಾ ಸೇರಲ್ಲ ಎಂದು ಠರಾವು ಪಾಸ್ ಮಾಡಿ ಕಾನೂನು ಹೋರಾಟ ಮಾಡಿತ್ತು. ಹೊಸೂರು ಸಿದ್ದಾಪುರ ಗ್ರಾಾಪಂ ವ್ಯಾಾಪ್ತಿಿಯ 6ಹಳ್ಳಿಿಗಳು ದೊಡ್ಡಮಟ್ಟದ ಹೋರಾಟ ಮಾಡುವ ಜತೆಗೆ ಸಚಿವರ ಮೂಲಕ ಸರ್ಕಾರಮೇಲೆ ಒತ್ತಡ ಹಾಕಿತ್ತು.
ಹೀಗಾಗಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಹೊಸೂರು ಸಿದ್ದಾಪುರ ಗ್ರಾಾಪಂಯನ್ನು ಅರಕೇರಾ ತಾಲೂಕಿನಿಂದ ಕೈಬಿಟ್ಟು ದೇವದುರ್ಗಕ್ಕೆೆ ಸೇರ್ಪಡೆ ಮಾಡಲು ನಿರ್ಣಯ ಕೈಗೊಂಡಿತ್ತು. ತಹಸೀಲ್ದಾರ್ ಮೂಲಕ ತಕರಾರಿಗೆ ಒಂದು ತಿಂಗಳು ಕಾಲಾವಕಾಶ ನೀಡಿತ್ತು. ಯಾವುದೇ ತಕರಾರು ಬಾರದ ಹಿನ್ನೆೆಲೆಯಲ್ಲಿ ಡಿ.31ರಂದು ಸರ್ಕಾರ ಹೊಸೂರು ಗ್ರಾಾಪಂ ದೇವದುರ್ಗಕ್ಕೆೆ ಸೇರ್ಪಡೆಮಾಡಿ ಆದೇಶ ಹೊರಡಿಸಿದೆ.
ಹೊಸೂರು ಸಿದ್ದಾಪುರ ಗ್ರಾಾಪಂ ವ್ಯಾಪ್ತಿಯ ಸಿದ್ದಾಪುರ, ಬೊಮ್ಮನಹಳ್ಳಿ, ಬಸ್ಸಾಪುರ, ಮದುವಾಯಗಡ್ಡಿ, ತಿಮ್ಮಾಪುರ, ಹೊರಹಟ್ಟಿ ಹಳ್ಳಿಗಳು ದೇವದುರ್ಗ ತಾಲೂಕಿಗೆ ಸೇರ್ಪಡೆಯಾಗಲಿವೆ. ಹೋರಾಟ ಕ್ಕೆ ಸರ್ಕಾರ ಸ್ಪಂದನೆ ಮಾಡಿದೆ. ಸರ್ಕಾರದ ಆದೇಶ ಹೊರಬೀಳುತ್ತಿಿದ್ದಂತೆ ಬುಧವಾರ ಜಾಲಹಳ್ಳಿಿಯಲ್ಲಿ 6ಗ್ರಾಾಪಂ ವ್ಯಾಾಪ್ತಿಿಯ ಜನರು ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು.
ಜನರ ಸಂಭ್ರಮಾಚರಣೆ
ದೇವದುರ್ಗ ತಾಲೂಕಿಗೆ ಹೊಸೂರು ಸಿದ್ದಾಪುರ ಸೇರ್ಪಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸುತ್ತಿಿದ್ದಂತೆ ಗ್ರಾಾಪಂ ವ್ಯಾಾಪ್ತಿಿಯ ವಿವಿಧ ಹಳ್ಳಿಿಗಳ ಜನರು ಜಾಲಹಳ್ಳಿಿಯಲ್ಲಿ ವಿಜಯೋತ್ಸವ ಆಚರಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮಂಡಲಗುಡ್ಡ, ನರಸಣ್ಣ ನಾಯಕ ಮಾತನಾಡಿ, ಹಿಂದಿನ ಸರ್ಕಾರದ ಅವೈಜ್ಞಾನಿಕ ತೀರ್ಮಾನ ಖಂಡಿಸಿ ನಾವು ನಿರಂತರ ಹೋರಾಟ ಮಾಡಿದ್ದೆವು. ಇದರ ಲವಾಗಿ ಸರ್ಕಾರ ನಮ್ಮ ಹೋರಾಟಕ್ಕೆೆ ಸ್ಪಂದಿಸಿ ನಮ್ಮ ತಾಲೂಕನ್ನು ದೇವದುರ್ಗಕ್ಕೆೆ ಸೇರ್ಪಡೆ ಮಾಡಿದೆ. ಇದಕ್ಕಾಾಗಿ ಕಳೆದ 8-10 ತಿಂಗಳಿಂದ ಆರು ಹಳ್ಳಿಿಗಳ ಜನರು ಸೇರಿ ಹೋರಾಟ ಸಮಿತಿ ರಚಿಸಿ ನಿರಂತರವಾಗಿ ಹೋರಾಟ ಮಾಡಿ ಬಿಟ್ಟು ಬಿಡದೆ ಲೋಕಸಭಾ ಸದಸ್ಯರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡ ಹಾಕಿ ಜೊತೆಗೆ ಮುಖ್ಯ ಮಂತ್ರಿಿ ಸಿದ್ದರಾಮಯ್ಯ ನವರ ಮೇಲೆ ಒತ್ತಡ ಹಾಕಿದ್ದೆೆವು. ಸ್ಥಳೀಯ ಮಾಜಿ ಶಾಸಕರ ಅವೈಜ್ಞಾನಿಕ ಹಾಗು ನಿರಂಕುಶ ಆಡಳಿತಕ್ಕೆೆ ಸರ್ಕಾರ ತಕ್ಕ ಪಾಠ ಕಲಿಸಿದೆ ಎಂದು ಟೀಕಿಸಿದರು.
ಮುಖಂಡರಾದ ಮಲ್ಲಪ್ಪ ಹೂಗಾರ, ತಿಮ್ಮಣ್ಣ ಮುರಾಳ, ಮಾನಪ್ಪ ಕಾವಲಿ, ಮುದೆಪ್ಪ ಬೆಂಗಡ್ಡಿಿ, ಕುಮಾರ್ ನಾಯಕ, ಯಂಕಪ್ಪ ಮುರಾಳ, ಶಿವರಾಜ ಬೊಮ್ಮನಹಳ್ಳಿಿ, ಬಸವರಾಜ ವಕೀಲ,ಚಂದಪ್ಪ ಬುದ್ದಿನ್ನಿಿ, ದುರುಗಪ್ಪ ಯಲಗಟ್ಟಿ
ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮಂಡಲಗುಡ್ಡ ,ಶಿವಪ್ಪ ಜಲ್ಲಿ ಸೇರಿದಂತೆ ಅನೇಕರು ಇದ್ದರು.

