ಸುದ್ದಿಮೂಲ ವಾರ್ತೆ ರಾಯಚೂರು, ಡಿ.31:
ಭೂಮಿ ಅತಿಕ್ರಮಣ ಸೇರಿ ನಕಲಿ ದಾಖಲೆಗಳ ಸೃಷ್ಟಿಿಸಿ ವಂಚನೆ ಮಾಡುತ್ತಿಿರುವ ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಳ್ಳುವ ಅಂಬಾಜಿರಾವ್ ಹಾಗೂ ಅವರ ಕುಟುಂಬ ಗಡಿಪಾರು ಮಾಡಬೇಕು ಎಂದು ಭೀಮ್ ಆರ್ಮಿ ಸಂಘಟನೆ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಯರಮರಸ್ ಸೀಮಾಂತರದಲ್ಲಿ ಸುಗುಣ ಬಾಯಿ ಗಂಡ ದತ್ತುರಾವ್ ಅವರ ಜಮೀನಿನ ಸರ್ವೆ ನಂ.114ರಲ್ಲಿನ 15 ಎಕರೆ 3 ಗುಂಟೆ ವಿಸ್ತೀರ್ಣ ಇದೆ. ಈ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಿ ಮಾಡಿ ಅಂಬಾಜಿ ರಾವ್ ತಂದೆ ಹೀರಾಲಾಲ್ ಮತ್ತು ಸ್ವಾಾತಿ ಗಂಡ ಅಂಬಾಜಿರಾವ್ ಸೇರಿ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಿಸಿ ವಂಚನೆ ಮಾಡಿದ್ದು ಸಾಬೀತಾಗಿದೆ ಎಂದು ವಿವರಿಸಿದರು.
ಈ ಆಸ್ತಿಿ ನುಂಗಲು ಸಹಕರಿಸಿದ ತಹಶೀಲ್ದಾಾರ್, ರಾಯಚೂರಿನ ಕಂದಾಯ ನಿರೀಕ್ಷಕ, ಗ್ರಾಾಮ ಲೆಕ್ಕಾಾಧಿಕಾರಿಗಳು ಸೇರಿಕೊಂಡು ನಕಲಿ ದಾಖಲೆ ಕೊಡುವುದಕ್ಕೆೆ ಕೈ ಜೋಡಿಸಿದ್ದಾಾರೆ ಎಂದು ದೂರಿದರು.
ಈ ಜಮೀನಿನ ಮೂಲ ಪಟ್ಟದಾರರಾದ ಸುಗುಣ ಬಾಯಿ ಅವರ ಹೆಸರಲ್ಲಿ ಜಮೀನಿದ್ದು ಸುಗುಣ ಬಾಯಿ ಮರಣ ಹೊಂದಿರುವುದನ್ನು ಅರಿತುಕೊಂಡು ಆಕೆಯ ಮರಣ ಪ್ರಮಾಣ ಪತ್ರ ಪಡೆದು ತಾವೇ ವಾರಸುದಾರರೆಂದು ಜಮೀನು ಹೆಸರಿಗೆ ಮಾಡಿಕೊಂಡಿದ್ದಾಾರೆ. ಸುಗುಣ ಅವರ ಕುಟುಂಬಸ್ಥರು ಸಹಾಯಕ ಆಯುಕ್ತರ ಕೋರ್ಟ್ನಲ್ಲಿ ವಕೀಲರ ಮೂಲಕ ವಾದ ಮಾಡಿದಾಗ ಅಂಬಾಜಿರಾವ್ ಮುಖವಾಡ ಕಳಚಿದೆ. ತಪ್ಪಾಾಗಿದೆ ಎಂದು ಲಿಖಿತವಾಗಿ ಪತ್ರ ಬರೆದು ಪುನಃ ಸುಗುಣಬಾಯಿ ಅವರ ಪುತ್ರ ಸುಧಾಕರ ಅವರಿಗೆ ಈ ಜಮೀನನ್ನು ಮರಳಿ ಹೆಸರಿಗೆ ಮಾಡಿಸಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ, ಮತ್ತು ಅಂಬಾಜಿ ರಾವ್ ಕುಟುಂಬದ ವಿರುದ್ಧ ಕ್ರಿಿಮಿನಲ್ ಪ್ರಕರಣ ದಾಖಲಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಸುದ್ದಿಗೋಷ್ಠಿಿಯಲ್ಲಿ ಜಯರಾಜ್, ಸುಶೀಲ, ಮಂಜುನಾಥ ಇತರರಿದ್ದರು.

