ಸುದ್ದಿಮೂಲ ವಾರ್ತೆ ರಾಯಚೂರು, ಡಿ.31:
ವಿಕಲಚೇತನರು ಕೀಳರಿಮೆ ಬಿಟ್ಟು ತಮ್ಮ ಸವಾಲುಗಳನ್ನು ಸ್ವೀಕರಿಸಿ ಸಾಮರ್ಥ್ಯ ಅರಿತು ಸಮಾಜದ ಮುಖ್ಯವಾಹಿನಿಗೆ ಬರಬೇಕು ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಸಲಹೆ ನೀಡಿದರು.
ವಿಶ್ವ ವಿಕಲಚೇತನರ ದಿನಾಚರಣೆ-2025ರ ಕಾರ್ಯಕ್ರಮಕ್ಕೆೆ ಚಾಲನೆ ನೀಡಿ ಅವರು ಮಾತನಾಡಿದರು. ವಿಕಲಚೇತನರು ಎಲ್ಲಾ ರಂಗದಲ್ಲಿ ಮುಂದೆ ಇದ್ದಾರೆ. ಸಾಧನೆಗೆ ಯಾವುದೇ ಅಂಗವಿಕಲತೆ ಅಡ್ಡಿಿಯಾಗದು. ಸಾಧನೆಗೆ ಸದೃಢ ಮನಸ್ಸು ಇರಬೇಕು. ಎಲ್ಲರೂ ಸೇರಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಅರ್ಹ ವಿಕಲಚೇತನರಿಗೆ ತಲುಪಿಸೋಣ ಎಂದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಇಲಾಖೆಯ ಉಪ ನಿರ್ದೇಶಕ ನವೀನ್ ಕುಮಾರ್ ಅವರು ಮಾತನಾಡಿ, ಸರ್ಕಾರ ಯಾವಾಗ್ಲೂ ನಿಮ್ಮ ಪರ ಇರುತ್ತದೆ. ನೀವು ನಿರಾಸಕ್ತಿಿಗೊಳ್ಳದೆ. ನಿಮ್ಮ ಸಮಸ್ಯೆೆಗಳನ್ನು ನಮ್ಮತ್ರ ಹೇಳಿದಲ್ಲಿ ಸಮಸ್ಯೆೆಗಳನ್ನು ಬಗೆಹರಿಸಿ ನಾವು ಸದಾ ನಿಮ್ಮ ಪರ ಇರುತ್ತೇವೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗೂ ಈಚೆಗೆ ನಡೆದ ಕ್ರೀೆಡೆಗಳಲ್ಲಿ ವಿಜೇತರಾದ ವಿಕಲಚೇತನರನ್ನು ಸನ್ಮಾಾನಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಾಣಾಧಿಕಾರಿ ಶ್ರೀದೇವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಡಾ.ದಂಡಪ್ಪ ಬಿರಾದಾರ್, ಎಮ್.ಕೆ.ಭಂಡಾರಿ ಆಸ್ಪತ್ರೆೆಯ ವ್ಯವಸ್ಥಾಾಪಕರಾದ ರಿಯೋಜ್ ಸೇರಿದಂತೆ ವಿವಿಧ ಸಂಘ ಸಂಸ್ಥೆೆಯ ಮುಖಂಡರು ಇದ್ದರು.
ವಿಕಲಚೇತನರು ಮುಖ್ಯವಾಹಿನಿಗೆ ಬರಬೇಕು:ಎಡಿಸಿ

