ಸುದ್ದಿಮೂಲ ವಾರ್ತೆ ಬೀದರ್, ಡಿ.31:
ದೇಶದ ಭದ್ರ ಬುನಾದಿ, ಸಮಗ್ರ ಪ್ರಗತಿಗೆ ಶಿಕ್ಷಣ ಪ್ರಮುಖ ಅಸವಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಾಳೆ ಹೇಳಿದರು.
ಭಾಲ್ಕಿಿ ತಾಲೂಕಿನ ಹಾಲಹಳ್ಳಿಿ(ಕೆ) ಗ್ರಾಾಮದ ಕೆ. ಎಲ್.ಪಬ್ಲಿಿಕ್ ಶಾಲೆಯಲ್ಲಿ ಆಯೋಜಿಸಿದ್ದ 13ನೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳು ನಡೆಸುವುದು ಸವಾಲಿನ ಕೆಲಸ. ಆದರೂ ಕೂಡ ಯಾವುದೇ ಅನುದಾನ ಇಲ್ಲದೇ ಗ್ರಾಾಮೀಣ ಭಾಗದಲ್ಲಿ ಕೆ.ಎಲ್.ಪಬ್ಲಿಿಕ್ ಶಾಲೆ ಸುತ್ತಮುತ್ತಲಿನ ಹಳ್ಳಿಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಿಸುತ್ತಿಿರುವುದು ಸಂತಸ ತರಿಸಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆೆ ಮಾತನಾಡಿ, ಗ್ರಾಾಮೀಣ ಪ್ರದೇಶದಲ್ಲಿ ಕೆ.ಎಲ್.ಪಬ್ಲಿಿಕ್ ಶಾಲೆ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ಜತೆಗೆ ಮಕ್ಕಳಿಗೆ ಅತ್ಯಾಾಧುನಿಕ ಸೌಲಭ್ಯ ಕಲ್ಪಿಿಸುತ್ತಿಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ನಾರಂಜಾ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಡಿ.ಕೆ.ಸಿದ್ರಾಾಮ, ನಟಿ ರಾಧಾ ಭಗವತಿ, ತರುಣ ಸೂರ್ಯಕಾಂತ ನಾಗಮಾರಪಳ್ಳಿಿ ಮಾತನಾಡಿದರು.
ಭಾಲ್ಕಿಿಯ ಹಿರೇಮಠ ಸಂಸ್ಥಾಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ದಿವ್ಯ ಸಾನ್ನಿಿಧ್ಯ ವಹಿಸಿದ್ದರು. ಸಂಸ್ಥೆೆಯ ಅಧ್ಯಕ್ಷ ರಾಜಕುಮಾರ ಲಿಂಗಬಶೆಟ್ಟಿಿ ಪ್ರಾಾಸ್ತಾಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ್, ಕಾರ್ಯದರ್ಶಿ ಪ್ರಭುಲಿಂಗ ತೂಗಾಂವೆ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿಿ, ಸಿಆರ್ಪಿ ಶಿರೋಮಣಿ, ಗ್ರಾಾಪಂ ಅಧ್ಯಕ್ಷ ಅಶೋಕ ಜಾಧವ ಸೇರಿದಂತೆ ಹಲವರು ಇದ್ದರು.
ಭಾರ್ಗವಿ ಎಲ್ಎಲ್ಬಿ ನಟಿಯೊಂದಿಗೆ ಸೆಲ್ಫಿಿ
ಕಲರ್ಸ ಕನ್ನಡ ವಾಹಿನಿಯ ಪ್ರಸಾರವಾಗುವ ಭಾರ್ಗವಿ ಎಲ್ಎಲ್ಬಿಿಯ ಸಿರಿಯಲ್ ನಟಿ ರಾಧಾ ಭಾಗವತಿ ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದರು. ಅವರನ್ನು ನೋಡಲು ಪಾಲಕರು, ಸ್ಥಳೀಯ ಜನರು ಸಾಕಷ್ಟು ಸಂಖ್ಯೆೆಯಲ್ಲಿ ಆಗಮಿಸಿದ್ದರು. ಹೆಚ್ಚಿಿನವರು ಅವರೊಂದಿಗೆ ಸೆಲ್ಪಿಿ ಪಡೆದು ಖುಷಿ ಪಟ್ಟರು. ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟು ಎಲ್ಲರ ಗಮನ ಸೆಳೆದರು.
ಸಾಧಕರಿಗೆ ಸನ್ಮಾಾನ:
ಡಾ.ರವೀಂದ್ರ ಪಾಟೀಲ್ ಮತ್ತು ಡಾ.ಶೈಲಜಾ ವಸಿರೆಡ್ಡಿಿ ಅವರನ್ನು ಶಾಲೆಯ ವತಿಯಿಂದ ವಿಶೇಷವಾಗಿ ಸನ್ಮಾಾನಿಸಲಾಯಿತು. ಸಂಸ್ಥೆೆಯ ಕಾರ್ಯದರ್ಶಿ ಅರ್ಚನಾ ಲಿಂಗಬಶೆಟ್ಟಿಿ ಸ್ವಾಾಗತಿಸಿದರು. ನಾಗರಾಜ ಜೋಗಿ ನಿರೂಪಿಸಿ, ವಂದಿಸಿದರು.
ಹಾಲಹಳ್ಳಿ (ಕೆ ) ಕೆಎಲ್ ಪಬ್ಲಿಕ್ ಶಾಲೆ ವಾರ್ಷಿಕೋತ್ಸವ ಸಮಗ್ರ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ : ಬೆಲ್ದಾಳೆ

