ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.31
ಮಾಜಿ ಶಾಸಕ ಲಿಂ. ಡಾ.ವೀರಬಸವಂತರೆಡ್ಡಿಿ ಮುದ್ನಾಾಳ್ ಅವರು ವೈದ್ಯಕೀಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಈ ಭಾಗದ ಜನಾನುರಾಗಿ ವ್ಯಕ್ತಿಿಯಾಗಿದ್ದಾರೆಂದು ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಾಳ್ ಹೇಳಿದರು.
ಡಾ.ವಿಬಿಆರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆೆಯಲ್ಲಿ ರೋಗಿಗಳಿಗೆ ಹಣ್ಣು,ಹಂಪಲು ವಿತರಿಸಿ ಅವರು ಮಾತನಾಡಿದರು.
ಶಾಸಕರಾಗಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿರುವ ಅವರು, ಯಾದಗಿರಿ ಜಿಲ್ಲೆ ಆಗುವಲ್ಲಿ ಅವರ ಪಾತ್ರ ಬಹುಮುಖ್ಯವಾಗಿತ್ತೆೆಂದರು. ಅತ್ಯಾಾಧುನಿಕ ಉಪಕರಣಗಳಿಲ್ಲದೇ ಅನೇಕ ಕಠಿಣ ಶಸ ಚಿಕಿತ್ಸೆೆಗಳನ್ನು ಮಾಡುವ ವೈದ್ಯಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಸಾಧಕರಾಗಿದ್ದಾರೆಂದು ಹೇಳಿದರು.
ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿಿ ಮುದ್ನಾಾಳ್ ಮಾತನಾಡಿ, ಡಾ.ವಿಬಿಆರ್ ಅವರು ಈ ಭಾಗದ ಜನಮಾನಸದ ನಾಯಕರಾಗಿದ್ದರು. ಬಡರೋಗಿಗಳ ಪಾಲಿನ ಅಕ್ಕರೆಯ ವೈದ್ಯರಾಗಿದ್ದರೆಂದರು.ಇದೇ ವೇಳೆ
ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಡಾ. ಅಮೋಘ ಸಿದ್ದೇಶ, ಕ್ಷಿತಿಜ್, ಭೀಮನಗೌಡ ಕ್ಯಾಾತನಾಳ, ಜಿಲ್ಲಾ ಉಪಾಧ್ಯಕ್ಷರಾದ ಪ್ರಭಾವತಿ ಮಾರುತಿ ಕಲಾಲ್, ಮಂಡಲ ಅಧ್ಯಕ್ಷರಾದ ಲಿಂಗಣ್ಣ ಹತ್ತಿಿಮನಿ, ವೀಣಾ ಮೋದಿ, ಮಹಿಳಾ ಮೋರ್ಚ ಅಧ್ಯಕ್ಷರಾದ ಸುನಿತಾ ಚೌಹಾನ್, ಮಾಜಿ ನಗರಸಭೆ ಸದಸ್ಯರಾದ ಸ್ವಾಾಮಿ ದೇವದಾಸನ ಕೇರಿ, ಹಣಮಂತ ಇಟಗಿ, ವಿಜಯಲಕ್ಷ್ಮಿಿ ನಾಯಕ್, ಶಕುಂತಲಾ ಶಿವಕುಮಾರ್, ನಾಗರಾಜ್ ಬಿರನೂರ್, ರಮೇಶ್ ದೊಡ್ಡಮನಿ, ಮಲ್ಲಿಕಾರ್ಜುನ ಕಟ್ಟಿಿಮನಿ, ಶಾಂತಗೌಡ, ರ್ಶ್ರಿಕಾಂತ್ ಸುಂಗಲಕರ್, ಬಸವರಾಜ್ ಗೊಂದೇನೂರ್, ಶಿವಣ್ಣ ವಿಶ್ವಕಮರ್,
ಪವನ್ ಲಿಂಗೇರಿ, ದೀಪಕ್ ಪದ್ದಾರ್, ಮಹೇಶ್ ಕೋರಿ, ನರಸಪ್ಪ ಬಂಗಿ, ಹನುಮಂತ ಚಪಲ, ಮಾರುತಿ ಕಲಾಲ್ ಮುಂತಾದವರು ಭಾಗವಹಿಸಿದ್ದರು.
ಯಾದಗಿರಿ ಅಭಿವೃದ್ದಿಗೆ ಡಾ. ವೀರಬಸವಂತರೆಡ್ಡಿ ಮುದ್ನಾಳ್ ಕೊಡುಗೆ ಅಪಾರ: ರಾಚಣ್ಣಗೌಡ ಹೇಳಿಕೆ

