ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.31:
ವ್ಯಾಾಪಾರಸ್ಥರು ನಿಗದಿತ ಸ್ಥಳದಲ್ಲಿಯೇ ವ್ಯಾಾಪಾರ ಮಾಡಿ ಸ್ವಚ್ಛತೆಗೆ ಆದ್ಯತೆ ನೀಡಿ ಸಾರ್ವಜನಿಕರಿಗೆ, ಸಾರಿಗೆ ಸಂಚಾರಕ್ಕೆೆ ಯಾವುದೇ ಅಡೆತಡೆ ಆಗದಂತೆ ನಗರಸಭೆಗೆ ಸಹಕಾರ ನೀಡಬೇಕು ಎಂದು ಪೌರಾಯುಕ್ತ ಉಮೇಶ ಚವ್ಹಾಾಣ್ ಅವರು ಸಲಹೆ ನೀಡಿದರು.
ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಡೇ- ನಲ್ಮ್ಯೋಜನೆಯಡಿ ನಗರದ ಬೀದಿ ಬದಿ ವ್ಯಾಾಪಾರಸ್ಥರಿಗೆ ಅನುಕೂಲ ಆಗಲು ಇರುವ ತಾತ್ಕಾಾಲಿಕ ಪಟ್ಟಣ ಮಾರಾಟ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು.
ವ್ಯಾಾಪಾರಸ್ಥರು ನಗರಸಭೆಗೆ ಮತ್ತು ಪೊಲೀಸ್ ಇಲಾಖೆಯ ನಿಯಮಗಳನ್ನು ಪಾಲಿಸಬೇಕು. ಬೀದಿಬದಿ ವ್ಯಾಾಪಾರಿಗಳು ನಗರಸಭೆಯಿಂದ ನೀಡಿದ ವ್ಯಾಾಪಾರ ಪ್ರಮಾಣ ಪತ್ರ, ಗುರುತಿನ ಚೀಟಿಗಳನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು. ವ್ಯಾಾಪಾರಕ್ಕಾಾಗಿ ಪಡೆದ ಸಾಲವನ್ನು ತಪ್ಪದೇ ನಿಗದಿತ ಸಮಯದಲ್ಲಿ ಬ್ಯಾಾಂಕಿಗೆ ಮರುಪಾವತಿ ಮಾಡಬೇಕು ಎಂದರು.
ಬೀದಿ ವ್ಯಾಾಪಾರಿಗಳಿಗೆ 2025-26 ನೇ ಸಾಲಿನ ಸಾಲದ ಮೊತ್ತ ಬದಲಾವಣೆಯಾಗಿದ್ದು ಮೊದಲ ಹಂತದಲ್ಲಿ 15 ಸಾವಿರ, ಎರಡನೇ ಹಂತ 25 ಸಾವಿರ, ಮೂರನೇ ಹಂತದಲ್ಲಿ 50 ಸಾವಿರ ನೀಡಲಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದರು.
ಇದೇ ವೇಳೆ ಡೆಂಗಿ ಜ್ವರ ನಿಯಂತ್ರಣ ಕುರಿತು ಕರಪತ್ರ ಬಿಡುಗಡೆಗೊಳಿಸಿ ತಾಲೂಕು ಆರೋಗ್ಯಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾದ ಹನುಮಂತರಾವ್ ಕುಲಕರ್ಣಿ ಮಾತನಾಡಿ, ಬೀದಿ ವ್ಯಾಾಪಾರಿಗಳಿಗೆ ವೈಯಕ್ತಿಿಕ ಸ್ವಚ್ಛತೆ ಹಾಗೂ ಶುದ್ಧ, ಸ್ವಚ್ಛತೆ ಆಹಾರ ತಯಾರಿಸಲು ಮತ್ತು ಮಾರಾಟ ಮಾಡಲು ತಿಳಿಸಿದರು. ಆಹಾರ ಪದಾರ್ಥ ಗಳನ್ನು ತಯಾರಿಸುವಾಗ ತಲೆ ಗೆ ಮತ್ತು ಕೈ ಗೆ ಗ್ಲಾಾಸ್ ಧರಿಸಬೇಕೆಂದರು.
ಮಲೇರಿಯಾ ಮೇಲ್ವಿಿಚಾರಕ ಕಲಿಮೋದ್ದಿನ್, ನಗರಸಭೆಯ ಸಮುದಾಯ ಸಂಘನಾಧಿಕಾರಿ ಭೀಮಣ್ಣ ಕೆ ವೈದ್ಯ, ಕಚೇರಿಯ ವ್ಯವಸ್ಥಾಾಪಕಿ ಅಶ್ವಿಿನಿ, ಸಿಆರ್ಪಿಗಳಾದ ಸಾಬಮ್ಮ, ಅವ್ವಮ್ಮ, ಪ್ರೇೇಮಾ ಸೇರಿದಂತೆ ಬೀದಿ ಬದಿ ವ್ಯಾಾಪಾರಸ್ಥರು ಉಪಸ್ಥಿಿತರಿದ್ದರು.
ಬೀದಿ ಬದಿ ವ್ಯಾಪಾರಿಗಳು ಜನರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸಿ: ಪೌರಾಯುಕ್ತ ಉಮೇಶ ಚವ್ಹಾಾಣ್

