ಸುದ್ದಿಮೂಲ ವಾರ್ತೆ ಬೀದರ್, ಡಿ.31:
ಸರ್ಕಾರ ಘೋಷಿಸಿದ ಪ್ರತಿ ಟನ್ ಕಬ್ಬಿಿಗೆ 3150 ರೂ. ನೀಡಲು ಸುತಾರಾಂ ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿದು 2950 ರೂ. ಗೆ ಒಪ್ಪಿಿರುವ ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಖಾಸಗಿ ಸಕ್ಕರೆ ಕಾರ್ಖಾನೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಲೆ ಘೋಷಿಸಿದೆ.
ಹೌದು, ಭಾಲ್ಕಿಿ ತಾಲ್ಲೂಕಿನ ಬಾಜೋಳಗಾ ಸಮೀಪದ ಗೌರಿ ಸಕ್ಕರೆ ಹಾಗೂ ಡಿಸ್ಟಲರಿ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಿಗೆ ಆರಂಭಿಕ ರೂ. 3,050 ಹಾಗೂ ಏಪ್ರಿಿಲ್ ನಂತರ ರೂ. 3,150 ಬೆಲೆ ಕೊಡಲಿದೆ ಎಂದು ಕಾರ್ಖಾನೆಯ ಮಾಲೀಕ ಬಾಬುರಾವ್ ಬೋತ್ರೆೆ ಪಾಟೀಲ ತಿಳಿಸಿದ್ದಾರೆ.
ಆರಂಭಿಕ ಹಂತದಲ್ಲಿ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ರೈತರಿಗೆ ಮೊದಲ ಕಂತಾಗಿ ಪ್ರತಿ ಟನ್ಗೆ ರೂ. 2,900 ಪಾವತಿಸಲಾಗುವುದು. ನಂತರ ರೂ. 100 ಸಂದಾಯ ಮಾಡಲಾಗುವುದು. ರಾಜ್ಯ ಸರ್ಕಾರ ರೂ. 50 ಪ್ರೋೋತ್ಸಾಾಹ ಧನ ನೀಡಲಿದ್ದು, ಒಟ್ಟು ರೂ. 3,050 ಬೆಲೆ ಪಾವತಿಸಿದಂತೆ ಆಗಲಿದೆ ಎಂದು ಹೇಳಿದ್ದಾರೆ.
ಏಪ್ರಿಿಲ್ ನಂತರ ಕಬ್ಬು ಪೂರೈಸುವವರಿಗೆ ರೂ. 100 ಹೆಚ್ಚುವರಿಯಾಗಿ ಅಂದರೆ ಟನ್ಗೆ ರೂ. 3,150 ಬೆಲೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿ ತೂಕ ಸೇರಿದಂತೆ ಎಲ್ಲ ವ್ಯವಸ್ಥೆೆ ಪಾರದರ್ಶಕವಾಗಿದೆ. ಸಕಾಲಕ್ಕೆೆ ಕಬ್ಬು ಹಣ ಪಾವತಿಯಾಗಲಿದೆ. ಕಾರಣ, ರೈತರು ಕಾರ್ಖಾನೆಗೆ ಕಬ್ಬು ಪೂರೈಸಿ ಸಹಕರಿಸಬೇಕು ಎಂದು ಕಾರ್ಖಾನೆಯ ಪ್ರಧಾನ ವ್ಯವಸ್ಥಾಾಪಕ ಮಹಾವೀರ ಘೋಡ್ಕೆೆ ಮನವಿ ಮಾಡಿದ್ದಾರೆ.
ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದ ರೈತರಿಗೆ ಸಕಾಲಕ್ಕೆೆ ಹಣ ಪಾವತಿಸದೇ ಸತಾಯಿಸಲಾಗುತ್ತಿಿದ್ದು, ಈ ಮಧ್ಯೆೆ ಗೌರಿ ಕಾರ್ಖಾನೆ ನಿರ್ಣಯ ರೈತರು ಖುಷಿಪಡುವಂತೆ ಮಾಡಿದೆ.

