ಸುದ್ದಿಮೂಲ ವಾರ್ತೆ ಮಾನ್ವಿ, ಡಿ.31:
ಜೀವನದಿ ತುಂಗಭದ್ರೆೆಯ ರಕ್ಷಣೆ ನಮ್ಮೆೆಲ್ಲರ ಹೊಣೆಯಾಗಿದ್ದು, ಈ ನದಿಯ ಬಗ್ಗೆೆ ಜನ ಜಾಗೃತಿ ಅಗತ್ಯ ಎಂದು ನಿರ್ಮಲ ತುಂಗಭದ್ರಾಾ ಅಭಿಯಾನ ಸಂಚಾಲಕ ಮಹಿಮಾ ಪಟೇಲ್ ಹೇಳಿದರು.
ಬುಧವಾರ ಮಾನ್ವಿಿ ತಾಲೂಕಿನ ಪೋತ್ನಾಾಳ್ ಗ್ರಾಾಮದಲ್ಲಿ ಹಮ್ಮಿಿಕೊಂಡಿದ್ದ ನಿರ್ಮಲ ತುಂಗಭದ್ರಾಾ ಅಭಿಯಾನ 3 ನೇ ಹಂತದ ಜಲ ಹಾಗೂ ಜನ ಜಾಗ್ರತಿ ಪಾದಯಾತ್ರೆೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿಿದ್ದರು.
ತುಂಗಭದ್ರಾಾ ನದಿಯ ನೀರು ಇಂದು ಕುಡಿಯುವುದಕ್ಕೂ ಯೋಗ್ಯವಾಗಿ ಉಳಿದಿಲ್ಲ. ದೇಶದಲ್ಲಿರುವ 16 ಸಾವಿರ ನದಿಗಳಲ್ಲಿ 6 ಸಾವಿರ ನದಿಯ ಮೂಲ ಉಗಮ ಸ್ಥಾಾನಗಳು ನಿರಂತರ ಪರಿಸರದ ಮೇಲಿನ ಮಾನವರ ದಾಳಿ ಹಾಗೂ ಮಾಲಿನ್ಯದಿಂದಾಗಿ ಕಣ್ಮರೆಯಾಗಿವೆ. ರಾಜ್ಯದಲ್ಲಿ ಇರುವ 36 ಸಾವಿರ ನೈಸರ್ಗಿಕ ಕೆರೆಗಳಲ್ಲಿ ಇಂದು ಕೇವಲ 3 ಸಾವಿರ ಕೆರೆಗಳು ಮಾತ್ರ ಉಳಿದುಕೊಂಡಿವೆ. ರಾಜ್ಯದಲ್ಲಿ ಹೆಚ್ಚಿಿನ ಉದ್ದ ವಿಸ್ತೀರ್ಣದಲ್ಲಿ ಹರಿಯುವ ತುಂಗಭದ್ರಾಾ ನದಿಯ ಉಗಮ ಸ್ಥಾಾನದಲ್ಲೇ ಅನೇಕ ಯೋಜನೆಗಳ ಒತ್ತಡವಿದೆ. ತುಂಗಭದ್ರಾಾ ನದಿ ತೀರದ ಶೃಂಗೇರಿಯಿಂದ ಹರಿಹರದವರೆಗೆ ಅತಿ ಹೆಚ್ಚು ಪುಣ್ಯ ಕ್ಷೇತ್ರಗಳಿವೆ. ಇಂತಹ ಕ್ಷೇತ್ರಗಳಿಗೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಇಲ್ಲಿ ಉತ್ಪತ್ತಿಿಯಾಗುವ ತ್ಯಾಾಜ್ಯ ನದಿಗೆ ಬಿಡಲಾಗುತ್ತಿಿದೆ. ನದಿ ತೀರದ ನಗರ, ಪಟ್ಟಣಗಳ ತ್ಯಾಾಜ್ಯವನ್ನು ಸಂಸ್ಕರಿಸಿ ನದಿಗೆ ಬಿಡದೆ ನೇರವಾಗಿ ತ್ಯಾಾಜ್ಯವನ್ನು ಬಿಡುತ್ತಿಿರುವುದರಿಂದ ನದಿಯ ನೀರು ಇಂದು ಕುಡಿಯುವುದಕ್ಕೂ ಕೂಡ ಯೋಗ್ಯವಾಗಿ ಉಳಿದಿಲ್ಲ. ನದಿಯನ್ನು ನಾವು ಭಾವನಾತ್ಮಕವಾಗಿ ನೋಡದೆ ಪರಿಸರಾತ್ಮಕವಾಗಿ ನೋಡಬೇಕು. ನಮ್ಮ ರಾಜ್ಯದಲ್ಲಿ ಉಳಿದಿರುವ ನದಿ, ಕೆರೆ ಹಾಗೂ ನೀರಿನ ಜಲ ಮೂಲಗಳನ್ನು ಸ್ವಚ್ಚವಾಗಿ, ಶುದ್ದವಾಗಿ ಉಳಿಸಿಕೊಳ್ಳಬೇಕಾಗಿದೆ ಅದ್ದರಿಂದ ನಿರ್ಮಲ ತುಂಗಭದ್ರಾಾ ಅಭಿಯಾನವನ್ನು 4 ಹಂತಗಳಲ್ಲಿ ಮಾಡಲಾಗುತ್ತಿಿದ್ದು 600 ಕಿ.ಮೀ.ಪಾದಯಾತ್ರೆೆ ಮೂಲಕ ಜಲಜಾಗೃತಿ-ಜನಜಾಗೃತಿಯನ್ನು ಮೂಡಿಸಲಾಗುತ್ತಿಿದೆ. ಪಾದಯಾತ್ರೆೆಯಲ್ಲಿ ಭಾಗವಹಿಸಿರುವ ತಜ್ಞರು ತುಂಗಭದ್ರಾಾ ನದಿಯನ್ನು ಅಧ್ಯಯನ ಮಾಡಿ ಇದರ ವರದಿ ಸಿದ್ದಪಡಿಸಿ ಮುಖ್ಯಮಂತ್ರಿಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಾಾಭಿಮಾನ ಆಂದೋಲನ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪುರ ಮಾತನಾಡಿ ನಮ್ಮ ಸಂಸ್ಥೆೆಯು ದೇಶದಲ್ಲಿ 80 ನದಿಗಳು ಅಪಾಯದಲ್ಲಿರುವುದನ್ನು ಗುರುತಿಸಿ ಅವುಗಳಲ್ಲಿ ಗಂಗೆ, ಯಮುನೆ, ಚಂಬಲ್, ಸೇರಿದಂತೆ ಇತರ ನದಿಗಳ ಸ್ವಚ್ಚತೆಗೆ ಕ್ರಮ ಕೈಗೊಳ್ಳಲಾಗಿದೆ. ನಮ್ಮ ದೇಶದ ನದಿಗಳಿಗೆ ತನ್ನದೇ ಆದ ಇತಿಹಾಸ, ಪಾವಿತ್ರತೆ, ಹರಿಯುವ ಮಾರ್ಗ ಮತ್ತು ಸಮುದ್ರವನ್ನು ಸೇರುವ ಸಂಗಮ ಸ್ಥಳವಿರುತ್ತದೆ. ನಮ್ಮ ಭಾರತದ ಸಂಸ್ಕೃತಿಯಲ್ಲಿ ನದಿಗಳಿಗೆ ಮಾತೃ ಸ್ಥಾಾನವನ್ನು ನೀಡಲಾಗಿದ್ದು ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಜವಾಬ್ದಾಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ದಿವ್ಯ ಸಾನಿಧ್ಯವನ್ನು ಉಟಕನೂರು ಮಠದ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಾಮಿ, ಅಡವಿ ಅಮರೇಶ್ವರ ಮಠದ ಶ್ರೀ ತೋಂಟಾದಾರ್ಯ ಮಹಾಸ್ವಾಾಮಿಗಳು ವಹಿಸಿದ್ದರು.
ಪ್ರೊೊ. ಶ್ರೀಪತಿ ಐ.ಐ.ಟಿ. ಹಾಗೂ ಆರ್ಥಿಕ ಸಲಹೆಗಾರ ಪ್ರೊೊ.ಕುಮಾರಸ್ವಾಾಮಿ ನದಿಯ ಉಳಿವಿನ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಪನ್ಯಾಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಗಂಗಾಧರ ನಾಯಕ, ಕೃಷಿ ಬೆಲೆ ಅಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಅಭಿಯಾನದ ಜಿಲ್ಲಾ ಸಂಚಾಲಕ ಎನ್. ಉದಯಕುಮಾರ ಸಾಹುಕಾರ, ತಾಲೂಕಾ ಸಂಚಾಲಕ ಶ್ರೀಧರಸ್ವಾಾಮಿ, ಮುಖಂಡರಾದ ಅನಿತಾ ನವಲಕಲ್, ಡಾ.ಬಸವರಾಜಪ್ಪ ಪೋತ್ನಾಾಳ್, ಶರಣಪ್ಪಗೌಡ ನಕ್ಕುಂದಿ, ಶಿವಕುಮಾರ ಮಾಲಿಪಾಟೀಲ್, ವೀರಭದ್ರಗೌಡ ಭೋಗಾವತಿ, ಮಲ್ಲಿಕಾರ್ಜುನಗೌಡ ಗಣೇಕಲ್, ಸುಜಾತ, ಜಗದೀಶ ಓತೂರು, ಮಲ್ಲಿಕಾರ್ಜುನಗೌಡ ಪೋತ್ನಾಾಳ್, ಕೆ.ಎಸ್.ಕುಮಾರಸ್ವಾಾಮಿ, ಅರುಣ್ ಚಂದಾ, ಹರಿಹರ ಪಾಟೀಲ್, ಕೊಟ್ರೇೇಶಪ್ಪ ಕೋರಿ, ವಿರೂಪಾಕ್ಷಿಗೌಡ ನುಗಡೋಣಿ, ಉಮಾಪತಿ ನಾಯಕ ಸೇರಿದಂತೆ ಪೋತ್ನಾಾಳ್ ಗ್ರಾಾಮದ ವಿವಿಧ ಕಾಲೇಜುಗಳ ವಿದ್ಯಾಾರ್ಥಿಗಳು, ಗ್ರಾಾಮಸ್ಥರು, ವಿವಿಧ ಸಂಘ ಸಂಸ್ಥೆೆಗಳ ಮುಖಂಡರು ಭಾಗವಹಿಸಿದ್ದರು.
ಪೋತ್ನಾಾಳ್ ಗ್ರಾಾಮದಿಂದ ಹಿರೇಕೊಟ್ನಕಲ್ ವರೆಗೆ ನಡೆದ ನಿರ್ಮಲ ತುಂಗಭದ್ರಾಾ ಅಭಿಯಾನ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.
ಜೀವನದಿ ತುಂಗಭದ್ರೆಯ ರಕ್ಷಣೆ ನಮ್ಮೆಲ್ಲರ ಹೊಣೆ – ಮಹಿಮಾ ಪಟೇಲ್

