ಸುದ್ದಿಮೂಲ ವಾರ್ತೆ ಮೈಸೂರು, ಜ.01:
ಶಿಕ್ಷಣ ಇಲಾಖೆಯು ಶಾಲಾ ಶಿಕ್ಷಕರು ಹಾಗೂ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗೆ ಮೊಬೈಲ್ ಹಾಜರಾತಿ ಕಡ್ಡಾಾಯಗೊಳಿಸಿದೆ.
ಜ.1 ರಿಂದ ಮೈಸೂರು ಜಿಲ್ಲೆಯ ಸರ್ಕಾರಿ ನೌಕರರ ಜೊತೆಗೆ ಶಿಕ್ಷಕರಿಗೂ ಹಾಜರಾತಿಯನ್ನು ಆನ್ಲೈನ್ ಕರ್ತವ್ಯ ಆ್ಯಪ್ ಮೂಲಕ ದಾಖಲಿಸುವ ವ್ಯವಸ್ಥೆೆಯನ್ನು ಜಾರಿಗೆ ತರಲಾಗಿದೆ.
ಮೈಸೂರು. ಜಿಲ್ಲೆಯಲ್ಲಿ 8261 ಶಿಕ್ಷಕರು ಇದ್ದಾರೆ. ಈಗಾಗಲೇ ಸಮಾರು 6000 ಶಿಕ್ಷಕರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಶಿಕ್ಷಕರ ನೋಂದಣಿ ಬಾಕಿ ಇದೆ. ಶೇ.70 ರಷ್ಟು ಪ್ರಗತಿ ಆಗಿದೆ. ಇದು ಜಿಪಿಎಸ್ ಆಧಾರಿತವಾಗಿ ಕೆಲಸ ನಿರ್ವಹಿಸುತ್ತದೆ. ತಾವು ಕೆಲಸ ಮಾಡುವ ಶಾಲೆಯ ವ್ಯಾಾಪ್ತಿಿಯಲ್ಲೇ ಶಿಕ್ಷಕರು ತಮ್ಮ ಹಾಜರಾತಿಯನ್ನು ಕೊಡಬೇಕಾಗುತ್ತದೆ ಎಂದು ಡಿಡಿಪಿಐ ಉದಯಕುಮಾರ್ ತಿಳಿಸಿದ್ದಾರೆ.
ಬೇರೆ ಬೇರೆ ಶಾಲೆಗಳಲ್ಲಿ ಬೇರೆ ಬೇರೆ ಸಮಯ ನಿಗದಿಪಡಿಸಿದ್ದಾರೆ. ಬೆಳಗ್ಗೆೆ 9:30 ರಿಂದ ಸಂಜೆ 4:30, ಬೆ. 10 ರಿಂದ ಸಂಜೆ 4 ಗಂಟೆ, ಹಾಗೂ ಬೆಳಗ್ಗೆೆ 9 ರಿಂದ 3:30 ಹೀಗೆ ಸಮಯ ಬದಲಾಯಿಸಿದ್ದಾರೆ. ನಾವು ಒಂದೇ ರೀತಿ ಸಮಯ ಪಾಲನೆ ಮಾಡಲಾಗುತ್ತಿಿದೆ. ಆದ್ದರಿಂದ 10 ರಿಂದ 4:30 ಆಯ್ಕೆೆ ಮಾಡಿಕೊಂಡಿದ್ದೇವೆ. ದಿನದ 7 ಗಂಟೆಗಳ ಕಾಲ ಶಿಕ್ಷಕರು ಶಾಲೆಯ ಆವರಣದಲ್ಲಿ ಇರಬೇಕು ಎಂಬುದು ಇದರ ಉದ್ದೇಶವಾಗಿದೆ. ಪ್ರತಿದಿನ ಬರುವಾಗ ಹಾಗೂ ಹೋಗುವಾಗ ಹಾಜರಾತಿ ದಾಖಲಿಸುವುದು ಕಡ್ಡಾಾಯ ಎಂದು ತಿಳಿಸಿದ್ದಾರೆ.
ಇದರಿಂದಾಗಿ ಶಿಕ್ಷಕರು ಶಾಲೆಯಲ್ಲಿ ಇದ್ದಾರೆ ಎಂಬಂತಹ ಖಾತ್ರಿಿ ಬರುತ್ತದೆ. ನಮ್ಮಲ್ಲಿ ಅಧಿಕಾರಿಗಳ ಸಂಖ್ಯೆೆ ಕಡಿಮೆ ಇರುವುದರಿಂದಾಗಿ ಆಗಾಗ್ಗೆೆ ಶಾಲೆಗಳಿಗೆ ತೆರಳಿ ವೀಕ್ಷಿಸುವುದು ಸಾಧ್ಯವಾಗುವುದಿಲ್ಲ. ಈ ಹಾಜರಾತಿಯಿಂದಾಗಿ ಎಲ್ಲಿ ಶಿಕ್ಷಕರ ಕೊರತೆ ಇದೆ, ಎಲ್ಲಿ ವ್ಯತ್ಯಾಾಸಗಳಾಗುತ್ತಿಿವೆ, ಯಾರು ದೈನಂದಿನ ಹಾಜರಾತಿಯನ್ನು ಸರಿಯಾಗಿ ಅನುಸರಿಸುತ್ತಿಿಲ್ಲ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಇದರಿಂದ ಅವರ ಮೇಲೆ ನಿಗಾವಹಿಸಬಹುದು ಹಾಗೂ ಶಿಕ್ಷಕರ ಜವಾಬ್ದಾಾರಿಯೂ ಹೆಚ್ಚಾಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಶೇ. 15 ರಿಂದ 20 ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ತುಂಬಾ ಪ್ರದೇಶದಲ್ಲಿ ನೆಟ್ವರಕ್ ಸಮಸ್ಯೆೆ ಇದೆ. ಅಲ್ಲಿ ಅವರ ಹತ್ರ ಯಾವ ಸಿಮ್ ಇರುತ್ತೋೋ ಅದರ ಬೇಸ್ ಮೇಲೆ ಹೋಗುತ್ತೆೆ. ನೆಟ್ ವರ್ಕ್ ಸಿಗುವ ಸಿಮ್ ಕಾರ್ಡ್ನಿಂದ ಹಾಜರಾತಿ ಹಾಕುವಂತೆ ಸೂಚನೆ ನೀಡಲಾಗಿದೆ. ಶಾಲೆಗಳಲ್ಲಿ ಈಗಾಗಲೇ ಜಿಪಿಎಸ್ ಅಳವಡಿಸಲಾಗಿದೆ. ಕಚೇರಿಗಳಲ್ಲಿ ಆಗಿರಲಿಲ್ಲ. ಇತ್ತೀಚಿಗೆ ಅಳವಡಿಸಿದ್ದಾರೆ. ಇದರಿಂದಾಗಿ ನಿತ್ಯವೂ ನಿಗಾವಹಿಸುವುದಕ್ಕೆೆ ಸಾಧ್ಯವಾಗಲಿದೆ.
ಇದರಿಂದ ಸಮಯ ಪಾಲನೆ ಆಗಲಿದೆ. ಶಾಲೆಯಲ್ಲಿ ಶಿಕ್ಷಕರು ಇರಲೇಬೇಕು. ಇದರಿಂದ ಮಕ್ಕಳಿಗೆ ಪಾಠ-ಪ್ರವಚನ ಆಗಲಿದೆ. ಸುರಕ್ಷತೆಯೂ ಕೂಡಾ ಹೆಚ್ಚಾಾಗಲಿದೆ. ಶಿಕ್ಷಕರು ಇಲ್ಲದ ಶಾಲೆಯ ಕುರಿತು ಪೋಷಕರು ದೂರು ನೀಡಿದಾಗ ನಾವು ಪಕ್ಕದ ಶಾಲೆಯಿಂದ ಶಿಕ್ಷಕರನ್ನು ನಿಯೋಜಿಸಬಹುದಾಗಿದೆ. ಅಲ್ಲದೇ, ಶಿಕ್ಷಕರು ಶಾಲೆಯಲ್ಲಿ ಇರುವುದಕ್ಕೆೆ ಇದೊಂದು ಮಾನದಂಡವಾಗಲಿದೆ.
ಅಲ್ಲದೇ ಇದರಿಂದ ಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ. ಪ್ರೌೌಢಶಾಲೆಯಲ್ಲಿ ಒಂದಷ್ಟು ವಿಶೇಷ ತರಗತಿ ನಡೆಸಲು ಯೋಜಿಸಲಾಗುತ್ತಿಿದೆ. ಆ ವಿಶೇಷ ತರಗತಿಗಳನ್ನು ನಿರ್ವಹಿಸುತ್ತಿಿದ್ದ ಶಿಕ್ಷಕರು ಎಷ್ಟು ಸಮಯದವರೆಗೆ ಇದ್ದರು? ಆ ಶಾಲೆಯಲ್ಲಿ ನಿಜವಾಗಲೂ ಸ್ಪೆೆಷಲ್ ಹಾಗೂ ಹೆಚ್ಚುವರಿ ತರಗತಿಗಳು ನಡೆಯುತ್ತಿಿದೆಯಾ? ಅದೂ ಕೂಡಾ ಗೊತ್ತಾಾಗುತ್ತದೆ. ಅಲ್ಲದೇ, ಹಾಜರಾತಿಗೆ ನಾನು ಒಳಪಟ್ಟಿಿದ್ದೇನೆ ಎಂಬ ಜಾಗೃತಿ ಅವರಲ್ಲಿಯೂ ಬರುತ್ತದೆ ಎಂದು ಡಿಡಿಪಿಐ ಉದಯಕುಮಾರ್ ಹೇಳಿದ್ದಾರೆ.
ಇನ್ಮುಂದೆ ಸರ್ಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿಗೆ ಮೊಬೈಲ್ ಹಾಜರಾತಿ ಕಡ್ಡಾಾಯ ಶಿಕ್ಷಕರು ದಿನದಲ್ಲಿ 7 ತಾಸು ಶಾಲೆಯಲ್ಲಿ ಇರುವುದು ಕಡ್ಡಾಾಯ

