ಪುಣೆ (ಮಹಾರಾಷ್ಟ್ರ) ಜ.1:ಪುಣೆ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಯೊಬ್ಬ ತಮ್ಮ ಪ್ರತಿ ಸ್ಪರ್ಧಿಯ ಎಬಿ ಾರಂ ಹರಿದು ನುಂಗಿರುವ ಘಟನೆ ನಡೆದಿದೆ.
ಈ ಕುರಿತು ಭಾರತಿ ವಿದ್ಯಾಾಪೀಠ ಪೊಲೀಸ್ ಠಾಣೆಯಲ್ಲಿ ಾರಂ ನುಂಗಿದ ಆರೋಪದಡಿ ಶಿವಸೇನಾ ಅಭ್ಯರ್ಥಿ ಉದ್ಧವ್ ಕಾಂಬ್ಳೆೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪುಣೆಯ ವಾರ್ಡ್ ಸಂಖ್ಯೆೆ 36 (ಎ)ರಲ್ಲಿ ಉಮೇದುವಾರಿಕೆ ಸಲ್ಲಿಕೆಯಿಂದ ಉಂಟಾದ ಗೊಂದಲದಿಂದ ಶಿವಸೇನಾ ಅಭ್ಯರ್ಥಿ ಉದ್ಧವ್ ಕಾಂಬ್ಳೆೆ ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿ ಮಚ್ಚಿಿಂದ್ರ ಧಾವಳೆ ಅವರ ನಾಮಪತ್ರವನ್ನು ಹರಿದು ನುಂಗಿದ್ದಾರೆ. ಈ ಘಟನೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಿಸಿದೆ.
ಸಹಾಯಕ ಚುನಾವಣಾ ಅಧಿಕಾರಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ:
ಪುಣೆ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆೆಲೆಯಲ್ಲಿ ಧಂಕವಾಡಿ ಸಹಕಾರನಗರ ಪ್ರಾಾದೇಶಿಕ ಕಚೇರಿಯಲ್ಲಿ ಅರ್ಜಿಗಳ ಪರಿಶೀಲನೆ ನಡೆಯುತ್ತಿಿತ್ತು. ವಾರ್ಡ್ ಸಂಖ್ಯೆೆ 36 (ಎ)ರಲ್ಲಿ ಶಿವಸೇನಾ ಪಕ್ಷವು ಇಬ್ಬರು ಅಭ್ಯರ್ಥಿಗಳಿಗೆ ತಪ್ಪಾಾಗಿ ಎಬಿ ಾರಂ’ಗಳನ್ನು ನೀಡಿತ್ತು. ಇದು ಶಿವಸೇನಾ ಅಭ್ಯರ್ಥಿಗಳಾದ ಉದ್ಧವ್ ಕಾಂಬ್ಳೆೆ ಮತ್ತು ಮಚ್ಚಿಿಂದ್ರ ಧಾವಳೆ ನಡುವೆ ತೀವ್ರ ವಾಗ್ವಾಾದಕ್ಕೆೆ ಕಾರಣವಾಗಿತ್ತು. ನಾಮಪತ್ರ ಸಲ್ಲಿಸುವ ವೇಳೆ ಶಿವಸೇನಾ ಅಭ್ಯರ್ಥಿ ಕಾಂಬ್ಳೆೆ ಅವರು ಧಾವಳೆ ಅವರ ’ಎಬಿ ಾರಂ’ ಅನ್ನು ಇದ್ದಕ್ಕಿಿದ್ದಂತೆ ಕಸಿದುಕೊಂಡು, ಅದನ್ನು ಹರಿದು ತಿಂದು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಚುನಾವಣಾ ಪ್ರಕ್ರಿಿಯೆಯ ಸಮಯದಲ್ಲಿ ಸಾರ್ವಜನಿಕ ಸೇವಕರ ಕೆಲಸಕ್ಕೆೆ ಅಡ್ಡಿಿಪಡಿಸಿದ ಆರೋಪದ ಹಿನ್ನೆೆಲೆಯಲ್ಲಿ ಉದ್ಧವ್ ಕಾಂಬ್ಳೆೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುದ್ದಿ ಹರಡುತ್ತಿಿದ್ದಂತೆ ಪಕ್ಷದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರು. ಪರಿಸ್ಥಿಿತಿಯನ್ನು ಗಮನಿಸಿದ ಪೊಲೀಸರು, ತಕ್ಷಣ ಸ್ಥಳಕ್ಕೆೆ ಧಾವಿಸಿ ಗೊಂದಲ ಹತ್ತಿಿಕ್ಕುವಲ್ಲಿ ಯಶಸ್ವಿಿಯಾಗಿದ್ದಾರೆ.

