ಸುದ್ದಿಮೂಲ ವಾರ್ತೆ ಬೆಂಗಳೂರು, ಜ.01:
ಹೊಸ ವರ್ಷದ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದಿದ್ದ ಚಾಲಕ ಸಹಕಾರ ನಗರದ ಮಾಲ್ ಆ್ ಏಶಿಯಾದ ಬಳಿ ಪಾದಚಾರಿಗಳ ಮೇಲೆ ಕಾರನ್ನು ಹರಿಸಿದ ಪರಿಣಾಮ ಏಳು ಜನರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಚಕಿತ್ಸೆೆಗೆ ಆಸ್ಪತ್ರೆೆಗೆ ದಾಖಲಿಸಲಾಗಿದೆ. ಕಾರು ಚಾಲಕ ಸುನೀಲ್ ಕುಮಾರ್ ಸಿಂಗ್ ಎಂಬಾತನನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ.
ಅಲ್ಲದೆ ಮಾಲ್ ಆ್ ಏಷ್ಯಾಾ ಆಡಳಿತ ಮಂಡಳಿ ವಿರುದ್ಧ ಸಂಜಯ್ ನಗರ ಸಂಚಾರಿ ಠಾಣೆ ಪೊಲೀಸರು ಸ್ವಯಂ ಪ್ರೇೇರಿತ ಕೇಸು ದಾಖಲಿಸಿಕೊಂಡಿದ್ದಾರೆ.
ಘಟನೆಯಲ್ಲಿ ಬಾಲಕಿಯೊಬ್ಬಳು ಕೊದಲೆಳೆ ಅಂತರದಲ್ಲಿ ಪ್ರಾಾಣ ಅಪಾಯದಿಂದ ಪಾರಾಗಿದ್ದಾಳೆ. ಕಾರು ಪಾದಚಾರಿ ಮಾರ್ಗಕ್ಕೆೆ ನುಗ್ಗುತ್ತಿಿರುವ ದೃಶ್ಯ ಸಿ.ಸಿ.ಟಿವಿಯಲ್ಲಿ ದಾಖಲಾಗಿದೆ.
ಕುಡಿದ ಅಮಲಿನಲ್ಲಿದ್ದ ಚಾಲಕ ಮಧ್ಯರಾತ್ರಿಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಮಾಲ್ ಆ್ ಏಷ್ಯಾಾದ ಗೇಟ್ ನಂ.3ನ್ನು ಪ್ರವೇಶಿಸಿದ ಬಳಿಕ ಕಾರು ಇದಕ್ಕಿಿದ್ದಂತೆ ಪಾದಚಾರಿ ಮಾರ್ಗದತ್ತ ತೆರಳುತ್ತದೆ. ಈ ವೇಳೆ ಬಾಲಕಿ ಸ್ಥಳದಲ್ಲಿರುತ್ತಾಾಳೆ. ಆಕೆ ಕೂದಲೆಳೆ ಅಂತರದಿಂದ ಪಾರಾಗುತ್ತಾಾಳೆ. ಉಳಿದ 7 ಮಂದಿಗೆ ಗಾಯಗಳಾಗಿವೆ. ಕೂಡಲೇ ನಾಗರಿಕರು ಕಾರನ್ನು ಸುತ್ತುವರಿದ ಚಾಲಕನ್ನು ಹೊರಕ್ಕೆೆ ಎಳೆದು ಥಳಿಸುತ್ತಾಾರೆ.

