ಸುದ್ದಿಮೂಲ ವಾರ್ತೆ ಬೀದರ್, ಜ.01:
ಪ್ರಸ್ತುತ ಸಾಲಿನಲ್ಲಿ ಕಲ್ಯಾಾಣ ಕರ್ನಾಟಕ ಭಾಗಕ್ಕೆೆ 125 ರಿಂದ 150 ಕೋಟಿ ರೂ ಶಿಕ್ಷಣಕ್ಕಾಾಗಿ ನೀಡಲಾಗಿದೆ. ಎರಡುವರೆ ವರ್ಷಗಳ ಅವಧಿಯಲ್ಲಿ ಶಿಕ್ಷಣಕ್ಕೆೆ 500 ಕೋಟಿ ರೂ. ಅನುದಾನ ನೀಡಿ, ಇಲ್ಲಿಯ ಶಿಕ್ಷಣದ ಮೂಲಭೂತ ಸೌಕರ್ಯಗಳನ್ನು ತಕ್ಕ ಮಟ್ಟಿಿಗೆ ಸರಿಪಡಿಸಲಾಗಿದೆ. ಶೈಕ್ಷಣಿಕ ಕಾರ್ಯಗಳಿಗಾಗಿ ಮೂಲಭೂತ ಸೌಕರ್ಯಗಳಿಗೆ ಯಾವುದೇ ರೀತಿಯ ಕುಂದು ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆೆ ಹೇಳಿದ್ದಾರೆ.
ವಿದ್ಯಾಾರ್ಥಿಗಳು ತಮ್ಮ ಆರೋಗ್ಯಕ್ಕೆೆ ಹೆಚ್ಚಿಿನ ಗಮನ ಕೊಟ್ಟು ಚಾರಿತ್ರ್ಯವಂತರಾಗಿ ಬಾಳಬೇಕು ಎಂದು ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌೌಢಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಾಲ್ಕಿಿ ವತಿಯಿಂದ ಬುಧವಾರ ಆಯೋಜಿಸಿದ್ದ 2025-26ನೇ ಸಾಲಿನ ತಾಲೂಕು ಮಟ್ಟದ ಪ್ರಾಾಥಮಿಕ ಹಾಗು ಪ್ರೌೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ/ಕಲೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್.ಜಿ.ಸುರೇಶ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸರ್ಕಾರಿ ನೌಕರರ ಸಂಘದ 2026ನೇ ಸಾಲಿನ ನೂತನ ಕ್ಯಾಾಲೆಂಡರ್ ಬಿಡುಗಡೆ ಮಾಡಿದರು. ಅಲ್ಲದೇ ವಿದ್ಯಾಾರ್ಥಿಗಳಿಗೆ ಸಚಿವ ಈಶ್ವರ ಖಂಡ್ರೆೆ ಬಿಸಿಯೂಟ ಬಡಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಪ್ರಕಾಶ ಕುದರಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಮುಂತಾದವರು ಇದ್ದರು.
ಶಿಕ್ಷಣಕ್ಕಾಗಿ ಕ. ಕ. ಭಾಗಕ್ಕೆ 150 ಕೋಟಿ : ಸಚಿವ ಖಂಡ್ರೆ

