ಸುದ್ದಿಮೂಲ ವಾರ್ತೆ ರಾಯಚೂರು, ಜ.01:
ಪರಿಶಿಷ್ಟ ಜಾತಿ, ವರ್ಗದ ಸಮುದಾಯದವರ ಮೇಲೆ ನಡೆಯುವ ಜಾತಿ ನಿಂದನೆ, ದೌರ್ಜನ್ಯಘಿ, ಸುಳ್ಳು ಜಾತಿ ಪ್ರಮಾಣ ಪತ್ರ ತಡೆ, ತ್ವರಿತ ತನಿಖೆಗಾಗಿರುವ ಡಿಸಿಆರ್ಇ ಘಟಕಕ್ಕೆೆ ಹಿರಿಯ ಪೊಲೀಸ್ ಅಧಿಕಾರಿಗಳ ನೇಮಿಸದೆ ಹೋದರೆ ಪ್ರತ್ಯೇಕ ಘಟಕ ಕೈ ಬಿಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ನರಸಿಂಹಲು, ವಕೀಲ ಶಿವಕುಮಾರ ಮ್ಯಾಾಗಳಮನಿ ಆಗ್ರಹಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, 2024ರಲ್ಲಿ 33 ಕಡೆ ಸಮಾಜ ಕಲ್ಯಾಾಣ ಇಲಾಖೆ ವ್ಯಾಾಪ್ತಿಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಇಆರ್ಇ) ಘಟಕಗಳ ಜಿಲ್ಲೆೆಗೊಂದು ಪೊಲೀಸ್ ಠಾಣೆ ಸ್ಥಾಾಪಿಸಿದೆ. ಆದರೆ, ರಾಯಚೂರು ಜಿಲ್ಲೆೆಯಲ್ಲಿ ಓರ್ವ ಪಿಐ, ಬಳ್ಳಾಾರಿಯ ಎಎಸ್ಐ ಒಬ್ಬರಿಗೆ ಉಸ್ತುವಾರಿ ನೀಡಿ ಕೈ ತೊಳೆದುಕೊಂಡಿದೆ. ಅಗತ್ಯ ಸಿಬ್ಬಂದಿಗಳಿಲ್ಲದ ಕಾರಣ ದಾಖಲಾದ ದೂರುಗಳ ಪರಿಶೀಲಿಸಿ ತಕ್ಷಣ ಕ್ರಮ ವಹಿಸುವಲ್ಲಿ ಸಂಪೂರ್ಣ ವಿಲವಾಗಿದೆ. ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಿಕೊಳ್ಳದೆ ಡಿಸಿಇಆರ್ಇ ಘಟಕಕ್ಕೆೆ ವರ್ಗಾವಣೆ ಮಾಡುತ್ತಿಿರುವುದರಿಂದ ಯಾವುದೆ ನ್ಯಾಾಯ ದೌರ್ಜನ್ಯಕ್ಕೊೊಳಗಾದವರಿಗೆ ಸಿಗುತ್ತಿಿಲ್ಲ ಎಂದು ಆಪಾದಿಸಿದರು.
ಒಬ್ಬ ಡಿಐಜಿ, ಐಜಿಪಿ, ವಿಭಾಗವಾರು ಎಸ್ಪಿಿಗಳು ಇದ್ದರೂ ಪ್ರಸ್ತುತ ಕೇವಲ 12 ಡಿಸಿಆರ್ಇ ಠಾಣೆಗಳಲ್ಲಿ ಮಾತ್ರ ಡಿವೈಎಸ್ಪಿಿಗಳ ನೇಮಕವಾಗಿದೆ. ಉಳಿದ 21 ಘಟಕಗಳಲ್ಲಿ ಡಿವೈಎಸ್ಪಿಿ ಸೇರಿದಂತೆ ಅಗತ್ಯ ಸಿಬ್ಬಂದಿಗಳ ನೇಮಕವಾಗದೆ ಎಸ್ಸಿಿ, ಎಸ್ಟಿಿ ದೌರ್ಜನ್ಯ ನಿಯಂತ್ರಣ ವಿರುದ್ಧ ಕ್ರಮ ಕೈಗೊಳ್ಳುವುದು ಯಾವಾಗ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಹೀಗಾಗಿ, ಸಮರ್ಪಕವಾಗಿ ಠಾಣೆ ಸ್ಥಾಾಪಿಸಿ ಅಗತ್ಯ ಸಿಬ್ಬಂದಿ ನಿಯೋಜಿಸಿ, ಪೀಠೋಪಕರಣ ಒದಗಿಸಿ ನ್ಯಾಾಯ ಒದಗಿಸಲು ಆಗದೆ ಹೋದರೆ ಕೇಂದ್ರಗಳನ್ನು ಮುಚ್ಚಿಿ ಈ ಹಿಂದಿನಂತೆ ಆಯಾ ಠಾಣೆಗಳಲ್ಲಿಯೇ ದೂರು ದಾಖಲು, ಕ್ರಮಕ್ಕೆೆ ಅಧಿಕಾರ ನೀಡಲು ಆಗ್ರಹಿಸಿದರು.
ಈ ಬಗ್ಗೆೆ ಜ.3ರಂದು ಸಿಂಧನೂರಿಗೆ ಆಗಮಿಸುವ ಸಿಎಂ ಸಿದ್ದರಾಮಯ್ಯ ಅವರ ಭೇಟಿ ಮಾಡಿ ದೂರು ಸಲ್ಲಿಸುತ್ತೇವೆ. ಒಂದೊಮ್ಮೆೆ ಕ್ರಮ ವಹಿಸಲು ನಿರ್ಲಕ್ಷಿಿಸಿದರೆ ಹಂತಹಂತವಾಗಿ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ಎಂ.ಆರ್ ಭೇರಿ, ಹನುಮೇಶ, ಆಂಜಿನೇಯ ಬಾಪುರು, ನಾಗೇಂದ್ರ, ಶ್ರೀನಿವಾಸರಾಜು ಉಪಸ್ಥಿಿತರಿದ್ದರು.
ನಾಳೆ ಸಿಎಂ ಭೇಟಿಗೆ ನಿರ್ಧಾರ ಡಿಸಿಆರ್ಇ ಘಟಕಕ್ಕೆ ಹಿರಿಯ ಅಧಿಕಾರಿಗಳ ನೇಮಿಸಿ ಇಲ್ಲ ಕೈಬಿಡಿ

