ಸುದ್ದಿಮೂಲ ವಾರ್ತೆ ರಾಯಚೂರು, ಜ.01:
ಸಮತಾ ಗ್ರಾಾಮೀಣಾಭಿವೃದ್ಧಿಿ ಹಾಗೂ ಶಿಕ್ಷಣ ಸಂಸ್ಥೆೆಯಿಂದ 12ನೇ ವಾರ್ಷಿಕೋತ್ಸವ, ವಿದ್ಯಾಾರ್ಥಿಗಳ ನಡೆ ಸಂವಿಧಾನದ ಕಡೆ ಕಾರ್ಯಕ್ರಮ ಮತ್ತು ಮಾತೆ ಸಾವಿತ್ರಿಿಬಾಯಿ ುಲೆ ಜಯಂತೋತ್ಸವ ಹಾಗೂ ರಾಜ್ಯಮಟ್ಟದ ಪ್ರಶಸ್ತಿಿ ಪ್ರದಾನ ಸಮಾರಂಭ ಗಬ್ಬೂರಿನ ಸರ್ಕಾರಿ ಪ್ರೌೌಢಶಾಲೆ ಆವರಣದಲ್ಲಿ ಜ.3ರಂದು ಬೆಳಿಗ್ಗೆೆ 11 ಗಂಟೆಗೆ ಹಮ್ಮಿಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಾಗವಾಟ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ ತಮ್ಮ ಸಂಸ್ಥೆೆಯಿಂದ ಈಗಾಗಲೇ ಸಂವಿಧಾನದ ಕುರಿತು ವಿದ್ಯಾಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಮನೆ ಮನೆ ಕಾರ್ಯಕ್ರಮಗಳನ್ನು ಕೂಡ ಮಾಡಿದ್ದು ಈ ಕಾರ್ಯಕ್ರಮದ ಮೂಲಕ ಸಂವಿಧಾನ ಕುರಿತು ಜಾಗೃತಿ, ಮಾತೆ ಸಾವಿತ್ರಿಿಬಾಯಿ ಅವರ ಜೀವನ ಚರಿತ್ರೆೆಯನ್ನು ವಿದ್ಯಾಾರ್ಥಿಗಳಲ್ಲಿ ಮನದಟ್ಟು ಮಾಡಲು ಆಯೋಜಿಸಿದ್ದೇವೆ ಎಂದರು.
ಗಬ್ಬೂರಿನ ಸರ್ಕಾರಿ ಪ್ರೌೌಢಶಾಲೆ, ಸರ್ಕಾರಿ ಮೌಲಾನ ಆಜಾದ್ ಮಾದರಿ ಶಾಲೆ, ವಿದ್ಯಾಾ ಜ್ಯೋೋತಿ ಪ್ರೌೌಢಶಾಲೆ, ಶ್ರೀ ನಾಗಯ್ಯ ತಾತಾ ಸ್ಮಾಾರಕ ಪ್ರೌೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ನವಯುಗ ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗಬ್ಬೂರು ಬೂದಿಬಸವೇಶ್ವರ ಸಂಸ್ಥಾಾನ ಮಠದ ಶ್ರೀ ಬೂದಿಬಸವೇಶ್ವರ ಶಿವಾಚಾರ್ಯರು ವಹಿಸಲಿದ್ದುಘಿ, ಸಚಿವ ಎನ್.ಎಸ್ ಬೋಸರಾಜ್ ಉದ್ಘಾಾಟಿಸಲಿದ್ದಾಾರೆ. ಶಾಸಕಿ ಕರೆಮ್ಮ ಜಿ ನಾಯಕ ಪ್ರಶಸ್ತಿಿ ಪ್ರದಾನ ಮಾಡಲಿದ್ದುಘಿ, ಹಿರಿಯ ವಕೀಲರಾದ ಡಾ. ಸಿ.ಎಸ್.ದ್ವಾಾರಕನಾಥ್ ವಿಶೇಷ ಉಪನ್ಯಾಾಸ ನೀಡಲಿದ್ದಾರೆ. ಗ್ರಾಾಮ ಪಂಚಾಯಿತಿ ಅಧ್ಯಕ್ಷೆೆ ಪಾರ್ವತಿ ಬುಸ್ಸಪ್ಪ ಶಂಸ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾಾನ ವಿಶ್ವಜ್ಯೋೋತಿ ಡಾ. ಬಿ.ಆರ್ಅಂಬೇಡ್ಕರ್ ಪ್ರಶಸ್ತಿಿ, ಮಹಾತ್ಮ ಜ್ಯೋೋತಿ ಬಾ ುಲೆ, ಮಾತೆ ಸಾವಿತ್ರಿಿಬಾಯಿ ುಲೆ, ಶಿಕ್ಷಣ ಶ್ರೀ ಪ್ರಶಸ್ತಿಿ, ಡಾ. ಅಬ್ದುಲ್ ನಜೀರ ಸಾಬ್ ಸ್ಮಾಾರಕ ಪ್ರಶಸ್ತಿಿ, 2025-26 ನೇ ಸಾಲಿನ ಮಾತೆ ಸಾವಿತ್ರಿಿಬಾಯಿ ುಲೆ ಪ್ರಶಸ್ತಿಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಸಾಧಕರಿಗೆ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಸಮಿತಿ ಅಧ್ಯಕ್ಷ ಬಸವರಾಜ್ ಸಿಂಗ್ರಿಿ, ನಿರ್ದೇಶಕರಾದ ಎಂ.ಆರ್ .ಭೇರಿ, ಶರಣಪ್ಪ ಪರ್ತಾಪೂರ, ರಂಗಮುನಿದಾಸ ಇದ್ದರು.
ಜ.3ರಂದು ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ 12ನೆ ವಾರ್ಷಿಕೋತ್ಸವ: ಬಸವರಾಜ ಬ್ಯಾಗವಾಟ್

