ಸುದ್ದಿಮೂಲ ವಾರ್ತೆ ರಾಯಚೂರು, ಜ.01:
ಮಾನ್ವಿಿಯ ಶ್ರೀ ಲಕ್ಷ್ಮೀ ಮಲ್ಟಿಿಸ್ಪೆೆಷಾಲಿಟಿ ಆಸ್ಪತ್ರೆೆಗೆ ತಪಾಸಣೆಗೆ ತೆರಳಿದ್ದ ಬಾಗಲವಾಡದ ಅನ್ವರ್ಸಾಬ್ಗೆ ಪರಿಣಿತಿಯೇ ಇಲ್ಲದ ನರ್ಸ್ಗಳು ಚಿಕಿತ್ಸೆೆ ನೀಡಿದ್ದರಿಂದಲೇ ಸಾವನ್ನಪ್ಪಿಿದ್ದರೂ ತಾಲೂಕು ಮತ್ತು ಜಿಲ್ಲಾಾ ಆರೋಗ್ಯಾಾಧಿಕಾರಿಗಳು ಪ್ರಕರಣದ ತನಿಖೆಗೆ ಪೊಲೀಸರಿಗೆ ಸಹಕರಿಸದೆ ಶಾಮೀಲಾಗಿದ್ದಾಾರೆ ಎಂದು ಮೃತ ಸಂಬಂಧಿ ರಿಯಾಜ್ ಆರೋಪಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ನ.24ರಂದು ಮಧ್ಯಾಾಹ್ನ 3ಕ್ಕೆೆ ಬಾಗಲವಾಡದಿಂದ ಮಾನ್ವಿಿಯ ಶ್ರೀ ಲಕ್ಷ್ಮೀ ಮಲ್ಟಿಿಸ್ಪೆೆಷಾಲಿಟಿ ಆಸ್ಪತ್ರೆೆಗೆ ತಪಾಸಣೆಗೆ ಆಗಮಿಸಿದ್ದರು. ಸಂಜೆ 4ರ ಸುಮಾರಿಗೆ ಒಳ ರೋಗಿಯಾಗಿ ನೋಂದಾಯಿಸಿಕೊಂಡ ಆಸ್ಪತ್ರೆೆಯ ಸಿಬ್ಬಂದಿ ಹಿರಿಯ ವೈದ್ಯರ ಕರೆದು ಚಿಕಿತ್ಸೆೆ ಕೊಡಿಸದೆ ನರ್ಸ್ಗಳೇ ಇಸಿಜಿ ಮಾಡಿ, ಚುಚ್ಚುಮದ್ದುಘಿ ಕೊಟ್ಟಿಿದ್ದರಿಂದಲೇ ಸಾವನ್ನಪ್ಪಿಿದ್ದಾಾರೆ.
ಈ ಬಗ್ಗೆೆ ಪ್ರಶ್ನಿಿಸಿದಾಗ ಆಸ್ಪತ್ರೆೆಗೆ ಬಂದ ಮುಖ್ಯಸ್ಥ ಡಾ.ರಾಘವೇಂದ್ರ ಅವರು ಚಿಕಿತ್ಸೆೆಗೆಂದು ಕರೆದೊಯ್ದು ಸಾವನ್ನಪ್ಪಿಿದ್ದಾಾಗಿ ಹೇಳಿದ್ದಾಾರೆ. ಆದರೆ, ಮರಣಕ್ಕೆೆ ಸಂಬಂಧಿಸಿದಂತೆ ಯಾವುದೆ ದಾಖಲಾತಿ ನೀಡದೆ ಹೊರ ಹಾಕಿದ್ದಾಾರೆ ಎಂದು ದೂರಿದರು.ನಂತರವೂ ಆಸ್ಪತ್ರೆೆಗೆ ಬರುವ ಮುನ್ನವೇ ಸಾವಾಗಿದೆ ಎಂದು ಮರಣ ಪತ್ರದಲ್ಲಿ ದಾಖಲಿಸುವ ಮೂಲಕ ಮಾಡಿದ ತಪ್ಪುು ಮುಚ್ಚಿಿಕೊಂಡು ಕುಟುಂಬಕ್ಕೆೆ ಅನ್ಯಾಾಯ ಮಾಡಿದ್ದಾಾರೆ ಎಂದು ಆಪಾದಿಸಿದರು.
ಈ ಬಗ್ಗೆೆ ಆಸ್ಪತೆಯ ಸಿಸಿ ಟಿವಿ ಚಿತ್ರಾಾವಳಿಗಳು, ಅವರು ಮಾತನಾಡಿದ ಧ್ವನಿಮುದ್ರಣ, ಕೆಲ ದಾಖಲಾತಿಗಳೊಂದಿಗೆ ಪೊಲೀಸರಿಗೆ ಮತ್ತು ತಾಲೂಕು ವೈದ್ಯಾಾಧಿಕಾರಿಗೆ, ಜಿಲ್ಲಾಾ ವೈದ್ಯಾಾಧಿಕಾರಿಗೆ ದೂರು ನೀಡಿದಾಗ ವೈದ್ಯರು ತಪ್ಪುು ಮಾಡಿದ್ದಾಾಗಿ ವೌಖಿಕವಾಗಿ, ಮೊಬೈಲ್ನಲ್ಲೂ ಹೇಳಿದವರು ಮರು ದಿನವೇ ಖಾಸಗಿ ಆಸ್ಪತ್ರೆೆಯ ಪರವಾಗಿ ಮಾತನಾಡಿದ್ದಾಾರೆ ಈ ಬಗ್ಗೆೆ ತಮ್ಮ ಬಳಿ ದಾಖಲೆ ಇವೆ ಎಂದರು.
ತಮ್ಮ ಸಂಬಂಧಿಯ ಸಾವಿಗೆ ವೈದ್ಯರ ನಿರ್ಲಕ್ಷ ಕಾರಣ ಎಂಬ ಅನುಮಾನವಿದ್ದು ಆ ಬಗ್ಗೆೆ ತನಿಖೆ ಮಾಡಲು ಪೊಲೀಸರಿಗೆ ಸಹಕರಿಸಿದ ಜಿಲ್ಲಾಾ ಹಾಗೂ ತಾಲೂಕು ವೈದ್ಯಾಾಧಿಕಾರಿಗಳ ನಡೆ ಅನುಮಾನ ಮೂಡಿಸಿದೆ.
ತಕ್ಷಣ ಜಿಲ್ಲಾಾಧಿಕಾರಿ, ಸಚಿವರು ಮಧ್ಯೆೆ ಪ್ರವೇಶಿಸಿ ನಮ್ಮ ಕುಟುಂಬಕ್ಕೆೆ ನ್ಯಾಾಯ ಕೊಡಿಸಬೇಕು, ಈ ಪ್ರಕರಣದಲ್ಲಿ ತಪ್ಪೆೆಸಗಿದೆ ಶ್ರೀ ಲಕ್ಷ್ಮೀ ಮಲ್ಟಿಿಸ್ಪೆೆಷಾಲಿಟಿ ಆಸ್ಪತ್ರೆೆ ಮತ್ತು ವೈದ್ಯ ರಾಘವೇಂದ್ರನನ್ನು ಕಪ್ಪುು ಪಟ್ಟಿಿಗೆ ಸೇರಿಸಿ ಆಸ್ಪತ್ರೆೆ ಬಂದ್ ಮಾಡಬೇಕು, ತಾಲೂಕು ಮತ್ತು ಜಿಲ್ಲಾಾ ವೈದ್ಯಾಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಇನ್ನೆೆರಡು ದಿನದಲ್ಲಿ ಸೂಕ್ತ ಕ್ರಮ ಜರುಗಿಸದೆ ಹೋದರೆ ಜಿಲ್ಲಾಾಧಿಕಾರಿ ಕಚೇರಿ ಮುಂದೆ ಕುಟುಂಬಸ್ಥರ ಜೊತೆ ಉಪವಾಸ ಧರಣಿ ಮಾಡುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಮೃತನ ಸಹೋದರ ಜಿಲಾನಿ, ಅನೀಾ ಬೇಗಂ, ಹುಸೇನ್ ಇತರರಿದ್ದರು.
ಆರೋಗ್ಯವಂತ ವ್ಯಕ್ತಿ ಚಿಕಿತ್ಸೆಯಲ್ಲಿ ನಿರ್ಲಕ್ಷದಿಂದ ಸಾವು ಮಾನ್ವಿ ಶ್ರೀ ಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಪ್ಪುಪಟ್ಟಿಗೆ ಸೇರಿಸಿ-ರಿಯಾಜ್

