ಸುದ್ದಿಮೂಲ ವಾರ್ತೆ ಯಾದಗಿರಿ, ಜ.01:
ಜಗತ್ತಿಿನ ಸರ್ವಶ್ರೇೇಷ್ಠ ಶಿಲ್ಪಶಾಸಜ್ಞ ಅಮರಶಿಲ್ಪಿಿ ಜಕ್ಕಣ್ಣಚಾರ್ಯ ಅವರ ಹೆಸರಿನ ಒಂದು ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ರಾಜ್ಯದ ಯಾವುದಾದರೊಂದು ವಿಶ್ವವಿದ್ಯಾಾಲಯದಲ್ಲಿ ಸ್ಥಾಾಪಿಸಬೇಕೆಂದು ವಿಶ್ವಕರ್ಮ ಏಕದಂಡಿಮಠಗಿ ಸರಸ್ವತಿ ಪೀಠ ಆನೆಗುಂದಿ ಸಂಸ್ಥಾಾನದ ಗುರುಗಳಾದ ಕುಮಾರಸ್ವಾಾಮಿಗಳು ಸರ್ಕಾರವನ್ನು ಒತ್ತಾಾಯಿಸಿದ್ದಾರೆ.
ನಗರದಲ್ಲಿರುವ ವಿಶ್ವಕರ್ಮ ಏಕದಂಡಿಮಠದಲ್ಲಿ ಗುರುವಾರ ಮಧ್ಯಾಾಹ್ನ ಹಮ್ಮಿಿಕೊಂಡಿದ್ದ ಜಕ್ಕಣ್ಣಾಾಚಾರ್ಯ ಅವರ ಜಯಂತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ತಮ್ಮ ಕಲೆ ಮೂಲಕ ಕರ್ನಾಟಕದ ಹೆಸರು ವಿಶ್ವದ ನಕಾಶೆಯಲ್ಲಿ ಬಿಂಬಿಸಿರುವ ಅವರ ಹೆಸರು ಮತ್ತು ಕಲೆ ಸದಾ ಕಾಲ ಜೀವಂತವಾಗಿರಲು ಮತ್ತು ಮುಂದಿನ ಪೀಳಿಗೆ ಗೊತ್ತಾಾಗಲು ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅವಶ್ಯಕತೆ ಬಹಳಷ್ಟು ಇದೆ. ಕಾರಣ ಸರ್ಕಾರ ಈ ನಿಟ್ಟಿಿನಲ್ಲಿ ಗಂಭೀರ ಆರೋಚನೆ ಮಾಡಿ ಕಾರ್ಯರೂಪಕ್ಕೆೆ ತರಬೇಕೆಂದರು.ತಿಲ್ದಜಗತ್ತಿಿಗೆ ಮೂಲಪುರುಷನಾದ ಇವರು, ವಿಶ್ವಕರ್ಮ ಸಮಾಜದವರು ಎಂಬ ಹೆಮ್ಮೆೆ ನಮ್ಮ ಸಮಾಜಕ್ಕೂ ಸೇರಿದಂತೆಯೇ ನಾಡಿಗೆ ಇದೆ ಎಂದು ಬಣ್ಣಿಿಸಿದ ಅವರು, ಬೇಲೂರು, ಹಳೇಬಿಡು, ಹಂಪಿ ಸೇರಿದಂತೆಯೇ ದೇಶವ್ಯಾಾಪಿ ಇವರ ಶಿಲ್ಪಕಲೆಗಳು ಅಚ್ಚಳಿಯದೇ ಉಳಿಯಲು ಅವುಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಶೈಕ್ಷಣಿಕ ಪ್ರವಾಸಕೈಗೊಳ್ಳುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ತಮ್ಮ ಮಕ್ಕಳನ್ನು ಜಕ್ಕಣ್ಣಾಾಚಾರ್ಯ ಅವರ ಕೆತ್ತನೆಯ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಅವರ ಬಗ್ಗೆೆ ತಿಳಿಸುವ ಮೂಲಕ ಅವರ ಹೆಸರು ಮತ್ತು ಕಲೆಯನ್ನು ಜೀವಂತವಾಗಿಡಲು ಪ್ರಯತ್ನ ಮಾಡಬೇಕೆಂದರು.
ವಿಶ್ವಕರ್ಮ ಸಮಾಜದ ಮುಖಂಡ ಆನಂದ ಲಕ್ಷ್ಮಿಿ ಪುರ ಮಾತನಾಡಿ, ಸರ್ಕಾರ ಇಂತಹ ಜಯಂತಿಗಳನ್ನು ಆಚರಿಸುವಾಗ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮಾಜದ ಸರ್ವರು ಗಣನೆಗೆ ತೆಗೆದುಕೊಳ್ಳಬೇಕೆಂದರು.
ಕಾರಣ, ಇಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿಿದ್ದಾರೆಂದು ಆರೋಪಿಸಿದರು. ಸೂಗೂರಿನ ಬೋಜಲಿಂಗೇಶ್ವರ ಮಠದ ಹಿರಿಯಪ್ಪ ಶಾಶಾ, ರೂಕೇಂದ್ರ ಸ್ವಾಾಮಿಗಳು, ಶೇಖರ ಶಾತಾ ಮುಷ್ಕರು ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ವೆಂಕಟೇಶ ಕಲ್ಲಕಂಬ ಸ್ವಾಾಗತಿಸಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಂಡಪ್ಪ ಕೂಡೂರು, ಮೋನಪ್ಪ ಬಡಿಗೇರ್ ಮೋನಪ್ಪ ಚನ್ನಾಾಕರ್, ನಿಂಗಣ್ಣ ಜೀವಣ್ಣ ದೇವರಾಜ್,ಮೌನೇಶ್ ಕೂಡೂರು, ಮಂಜುನಾಥ್, ಕ್ಯಾಾದಿಗೆಪ್ಪ ಯಾದಗಿರಿ, ವಿಶ್ವನಾಥ್ ಶಹಾಬಾದ, ವೀರಣ್ಣ ಶಂಕರ ಸೋನಾರ್. ಸುಭಾಷ ರವಿ ಬಾಗೇವಾಡಿ, ಮೌನೇಶ್ ಅಳಗೇರಿ, ರವಿ ಚೆನ್ನಕಾರ, ಶ್ರೀರ್ಧ ಯಡಳ್ಳಿಿ,: ವಿಶ್ವನಾಥ ವಿಶ್ವಕರ್ಮ ಸಂಶೋಷ ಬೊಮ್ಮನಹಳ್ಳಿಿ, ವೀರಭದ್ರಪ್ಪ ಜಾಲಹಳ್ಳಿಿ, ಮಲ್ಲು ಕಾರ್ಪೆಂಟರ್, ಸಂಗು ಕಾರ್ಪೆಂಟರ್ ಮಲ್ಲಪ್ಪ ವಿಶ್ವಕರ್ಮ, ಮೋನಯ್ಯ ವಿಶ್ವಕರ್ಮ ಬಾಡಿಯ, ದಯಾನಂದ ವಿಶ್ವಕರ್ಮ.ರಾಘವೇಂದ್ರ ವಿಶ್ವಕರ್ಮ ಮಲ್ಲಿಕಾರ್ಜುನ ವಿಶ್ವಕರ್ಮ ಮಾಚನೂರ, ಶಿವಕುಮಾರ ವಿಶ್ವಕರ್ಮ ಸೇರಿದಂತೆ ಇದ್ದರು.
ವಿಶ್ವಕರ್ಮ ಏಕದಂಡಿಗಿ ಮಠದಲ್ಲಿ ಜಯಂತಿ ಆಚರಣೆ

