ಸುದ್ದಿಮೂಲ ವಾರ್ತೆ ಲಿಂಗಸೂಗೂರು:, ಜ.01:
ಪಟ್ಟಣದ ವೀರಶೈವ ವಿದ್ಯಾಾವರ್ಧಕ ಸಂಘ ಸಂಚಾಲಿತ ಶ್ರೀ ಬಸವೇಶ್ವರ ಸ್ವತಂತ್ರ ಕಲಾ, ವಿಜ್ಞಾಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಾಲಯದ 25 ವಸಂತಗಳು ಪೂರೈಸಿದ ಹಿನ್ನೆೆಲೆ ಜನವರಿ 3, 4ರಂದು ಬೆಳ್ಳಿಿ ಸಂಭ್ಯಮ ಜರುಗಲಿದೆಂದು ವೀರಶೈವ ವಿದ್ಯಾಾವರ್ಧಕ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಹೇಳಿದರು.
ಅವರು ಸುದ್ದಿಗೋಷ್ಠಿಿಯಲ್ಲಿ ಮಾತನಾಡುತ್ತ ಎರಡು ದಿನಗಳಲ್ಲಿ 3 ಗೋಷ್ಠಿಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗತ್ತದೆ. ದಿನಾಂಕ 03ರಂದು ಬೆಳೆಗ್ಗೆೆ 10.30 ಗಂಟೆಗೆ ಬೆಳಿಸಂಭ್ರಮ ಉದ್ಘಾಾಟನೆಯನ್ನು ಪ್ರಾಾಥಮಿಕ ಮತ್ತು ಪ್ರೌೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮಾಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಹಾಗೂ ವೀರಶೈವ ವಿದ್ಯಾಾವರ್ಧಕ ಸಂಘದ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಾಪುರ ವಹಿಸಲಿದ್ದಾಾರೆ, ಸರ್ದಾರ ವಲ್ಲಭಭಯಿ ಪಟೇಲ ಬಾಲಕರ ವಸತಿ ನಿಲಯದ ನೂತನ ಕಟ್ಟಡದ ಉದ್ಘಾಾಟನೆಯನ್ನು ಸಣ್ಣ ಕೈಗಾರಿಕ ಸಚಿವ ಶರಣಬಸಪ್ಪ ದರ್ಶನಾಪುರ ನೇರವೆರಿಸಲಿದ್ದು, ಕಲ್ಯಾಾಣ ಸ್ಮರಣ ಗ್ರಂಥ ಲೋಕಾರ್ಪೆಣೆಯನ್ನು ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ ಪಾಟೀಲ ಮಾಡಲಿದ್ದಾಾರೆ,
ಮುಖ್ಯ ಅತಿಥಿಗಳಾಗಿ ಶಾಸಕ ಮಾನಪ್ಪ ವಜ್ಜಲ್, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಾಪುರ, ಕನ್ನಡ ವಿಶ್ವವಿದ್ಯಾಾಲಯ ಉಪಕುಲಪತಿ ಡಾ.ಡಿ.ವಿ ಪರಮಶಿವಮೂರ್ತಿ ಹಾಗೂ ವೀರಶೈವ ವಿದ್ಯಾಾವರ್ಧಕ ಸಂಘದ ಕಾರ್ಯದರ್ಶಿ ಭೂಪನಗೌಡ ಕರಡಕಲ್, ಕಾರ್ಯಕ್ರಮದ ಸ್ವಾಾಗತ ಮಾಡಲಿದ್ದಾಾರೆ. ಮಧ್ಯಾಾಹ್ನ 3ಗಂಟೆಗೆ ಪ್ರಾಾಥಮಿಕ ಶಿಕ್ಷಣ ಕಲಿಕಾ ತೊಡುಕುಗಳು ಗೋಷ್ಠಿಿ ಜರುಗಲಿದೆ.
ದಿನಾಂಕ 4ರಂದು ಬೆಳಿಗ್ಗೆೆ 10.30ಗಂಟೆಗೆ ಗೋಷ್ಠಿಿಗಳಾದ ಪ್ರೌೌಢ ಶಿಕ್ಷಣ ಒಂದು ಮರು ಚಿಂತನೆ, ಮಧ್ಯಾಾಹ್ನ ಉನ್ನತ ಶಿಕ್ಷಣ ಮತ್ತು ಸಂಶೋಧನೆ- ಪ್ರಸ್ತುತ ಸವಾಲು ನಡೆಯಲಿದೆ ಸಂಜೆ 5ಗಂಟೆಗೆ ಸಮಾರೋಪ ಸಮಾರಂಭದ ಸಮಾರೋಪ ನುಡಿಯನ್ನು ವಿಶ್ರಾಾಂತ ಉಪಕುಲಪತಿಗಳು ಕಾನೂನು ವಿಶ್ವವಿದ್ಯಾಾಲಯದ ಡಾ.ಜೆ.ಎಸ್ ಪಾಟೀಲ ಅಂದಿನ ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಚಿವರಾದ ಸಂತೋಷ ಲಾ, ಮಾಜಿ ಕೇಂದ್ರ ಸಚಿವರಾದ ಬಸವರಾಜ ಪಾಟೀಲ ಅನ್ವರಿ ಹಾಗೂ ಅನೇಕ ಗಣ್ಯರು ಭಾಗವಹಿಸಲ್ಲಿದ್ದು. ಕಾರಣ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಿಗೊಳಿಸಬೇಕು ಎಂದು ಹೇಳಿದರು.
ಸಂದರ್ಭದಲ್ಲಿ ನಗರ ಯೋಜನಾ ಪ್ರಾಾಧಿಕಾರ ಅಧ್ಯಕ್ಷ ಭೂಪನಗೌಡ ಪಾಟೀಲ, ಮಹಾವಿದ್ಯಾಾಲಯದ ಪ್ರಾಾಂಶುಪಾಲರಾದ ಬಸವರಾಜ ಮೇಟಿ ಇದ್ದರು.
ಜ.3,4ರಂದು ಶ್ರೀ ಬಸವೇಶ್ವರ ಸ್ವತಂತ್ರ ಕಾಲೇಜಿನ ಬೆಳ್ಳಿ ಸಂಭ್ರಮ

