ಸುದ್ದಿಮೂಲ ವಾರ್ತೆ ರಾಯಚೂರು, ಜ.01:
ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ನೀಡುವ ಪ್ರತಿಷ್ಠಿಿತ ಪ್ರೈಡ್ ಆ್ ಕರ್ನಾಟಕ ಪ್ರಶಸ್ತಿಿಯನ್ನು ರಾಯಚೂರಿನ ಡಿವೈಎಸ್ಪಿಿ ಶಾಂತವೀರ ಅವರಿಗೆ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಪ್ರೆೆಸ್ ಕ್ಲಬ್ ನಲ್ಲಿ ನಡೆದ ಪ್ರಶಸ್ತಿಿ ಪ್ರದಾನ ಸಮಾರಂಭದಲ್ಲಿ ಸಾರ್ವಜನಿಕ ಸೇವೆ, ಕಾನೂನು ಸುವ್ಯವಸ್ಥೆೆ ಕಾಪಾಡುವಲ್ಲಿ ತೋರಿದ ನಿಷ್ಠೆೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಹಿರಿಯ ಪತ್ರಕರ್ತರು, ಪೊಲೀಸ್ ಇಲಾಖೆ ಅಧಿಕಾರಿಗಳು, ಸಾರ್ವಜನಿಕ ಗಣ್ಯರು ಹಾಗೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಉಪಸ್ಥಿಿತರಿದ್ದರು.
ಪ್ರಶಸ್ತಿಿ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿಿ ಶಾಂತವೀರ, ಈ ಗೌರವ ನನ್ನ ಜವಾಬ್ದಾಾರಿ ಇನ್ನಷ್ಟು ಹೆಚ್ಚಿಿಸಿದೆ. ಸಮಾಜದ ಸುರಕ್ಷತೆ ಮತ್ತು ನ್ಯಾಾಯಕ್ಕಾಾಗಿ ಇನ್ನಷ್ಟು ಪ್ರಾಾಮಾಣಿಕವಾಗಿ ಕೆಲಸ ಮಾಡುವೆ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಸಭಾಪತಿಗಳಾದ ಯು.ಟಿ.ಖಾದರ, ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ, ಶಿಕ್ಷಣ ಸಚಿವ ಮಧುಬಂಗಾರಪ್ಪ, ಎನ್.ಎ.ಹ್ಯಾಾರೀಸ್ ಸೇರಿದಂತೆ ಹಲವು ಪತ್ರಕರ್ತರು ಗಣ್ಯರು ಉಪಸ್ಥಿಿತರಿದ್ದರು.
ರಾಯಚೂರಿನ ಡಿವೈಎಸ್ಪಿ ಶಾಂತವೀರಗೆ ಪ್ರೈಡ್ ಆ್ ಕರ್ನಾಟಕ ಪ್ರಶಸ್ತಿ ಪ್ರದಾನ

